Hubballi News: ಹುಬ್ಬಳ್ಳಿ: ಓಲಾ ಎಲೆಕ್ಟ್ರಿಕಲ್ ಬೈಕ್ ನಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಈ ಬೈಕ್ ಬಳಸುವವರು, ದಿನನಿತ್ಯ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಏಕೆಂದರೆ ಓಲಾ ಕಂಪನಿ ಬೈಕ್ನಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತಿದ್ದು, ಪದೇ ಪದೇ ಓಲಾ ಕಂಪನಿ ವಿರುದ್ಧ ಹುಬ್ಬಳ್ಳಿಯಲ್ಲಿ ಜನ ಆರೋಪಿಸುತ್ತಿದ್ದಾರೆ. ಏಕಾಏಕಿ ರಸ್ತೆ ಮಧ್ಯದಲ್ಲೇ ಬೈಕ್ ಬಂದ್ ಬೀಳುತ್ತಿದೆ. ಪ್ರತಿದಿನ ಶೋರೂಮ್ ಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ. ಕೆಲಸಕಾರ್ಯಗಳನ್ನು ಬಿಟ್ಟು ಸರ್ವಿಸ್ ಸೆಂಟರ್ ಗೆ ಅಲೆದಾಡುವ ಸ್ಥಿತಿ ಉಂಟಾಗಿದೆ.
ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರು ಈ ಓಲಾ ಕಂಪೆನಿ ಶೋರೂಮ್ ಇದೆ. ಎಷ್ಟೇ ಬಾರಿ ರಿಪೇರಿ ಮಾಡಿದರೂ ಮತ್ತೆ ಮತ್ತೆ ಬೈಕ್ ನಲ್ಲಿ ದೋಷ ಕಾಣಿಸಿಕೊಳ್ಳುತ್ತಿರುವ ಕಾರಣ, ಲಕ್ಷಾಂತರ ರೂಪಾಯಿ ನೀಡಿ ಖರೀದಿಸಿದ ಬೈಕ್, ಕೇವಲ 3 ತಿಂಗಳಿಗೆ ಸರ್ವಿಸ್ ಸೆಂಟರ್ ನಲ್ಲಿ ನಿಲ್ಲಿಸುವ ದುಸ್ಥಿತಿ ಎದುರಾಗಿದೆ.
ಆಫೀಸಿಗೆ ಹೋಗುವಾಗಲೂ ಈ ಬೈಕ್ ಕೈ ಕೊಡುತ್ತಿದ್ದು, ನಮಗೆ ದುಡ್ಡು ವಾಪಸ್ ನೀಡಿ ಎಂದು ಕಂಪನಿ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಹುಬ್ಬಳ್ಳಿಯ ಗ್ರಾಹಕರು ಶೋರೂಮ್ ಬಂದ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಓಲಾ ಸಿಬ್ಬಂದಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
2028ಕ್ಕೂ ನೀನೇ ಈ ರಾಜ್ಯ ಆಳಬೇಕು ಕಣಪ್ಪ : ಸಿದ್ದರಾಮಯ್ಯಗೆ ಹಾರೈಸಿದ ನಿಂಗಯ್ಯ
ಜನತಾ ದರ್ಶನದ ವೇಳೆ ಅಧಿಕಾರಗಳ ಮೇಲೆ ಗರಂ ಆದ ಸಿಎಂ ಸಿದ್ದರಾಮಯ್ಯ.. ಯಾಕೆ ಗೊತ್ತಾ..?




