Tumakuru News: ತುಮಕೂರು: ತುಮಕೂರಿನಲ್ಲಿ ಮಾತನಾಡಿದ ತಿರುವನಂತಪುರಂ ಸಂಸದ ಶಶಿ ತರೂರ್, ಸಿಬಿಐ, ಇಡಿ, ತೆರಿಗೆ ಇಲಾಖೆಯ ಸೇರಿದಂತೆ ಎಲ್ಲವನ್ನೂ ಕೇಂದ್ರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಇಲಾಖೆಗಳು ರಾಜಕೀಯವಾಗಿ ವಸ್ತುವಾಗಬಾರದು. ಈ ಎಲ್ಲಾ ಇಲಾಖೆಗಳ ದಾಳಿ, ತನಿಖೆ ವಿಪಕ್ಷಗಳ ಮುಖಂಡರ ವಿರುದ್ದವೇ ಆಗುತ್ತಿದೆ. ನಮ್ಮ ಎಲ್ಲರ ವಿರುದ್ದನೂ ಕೇಸ್ ಮಾಡಿಬಿಡಿ. ಕೊನೆಯಲ್ಲಿ ಜನತೆಯೇ ಚುನಾವಣೆಯಲ್ಲಿ ನಿರ್ಧಾರ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಡಿಕೆಶಿ ಅವರಿಗೆ ರಿಲಫ್ ಸಿಕ್ಕಿರೋದು ತುಂಬಾ ಒಳ್ಳೆಯ ವಿಚಾರ, ನ್ಯಾಯಾಂಗ ಸ್ವತಂತ್ರವಾಗಿರೋದು ಒಳ್ಳೆ ವಿಚಾರ. ಪಂಚರಾಜಜ್ಯಗಳ ಚುನಾವಣೆಯ ಮಧ್ಯಪ್ರದೇಶ ಮತ್ತು ಛತ್ತೀಸ್ ಘಡದಲ್ಲಿ ನಾವು ಮುಂದಿದ್ದೇವೆ. ತೆಲಂಗಾಣದಲ್ಲೂ ಕಾಂಗ್ರೆಸ್ ಪರ ಒಳ್ಳೆ ಫಲಿತಾಂಶ ಬರಲಿದೆ. ಮಿಜೋರಾಂನಲ್ಲಿ ನಾವು ಕನಿಷ್ಠ ಪಕ್ಷ ದೊಡ್ಡ ಪಕ್ಷವಾಗಿ ಹೊರ ಹೊಮ್ಮುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಳ್ಳೆ ಸಾಧನೆ ಮಾಡಲಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ದಲಿತ ಸಿಎಂ ಕೂಗು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶಶಿ ತರೂರ್, ಈ ಬಗ್ಗೆ ನಾನು ಏನೂ ಪ್ರತಿಕ್ರಿಯೆ ನೀಡಲ್ಲ. ಪಕ್ಷ ನಿರ್ಧಾರ ಮಾಡಲಿದೆ ಎಂದಿದ್ದಾರೆ.
ಅಯೋಧ್ಯೆ-ಶಬರಿಮಲೆಗೆ ಹುಬ್ಬಳ್ಳಿಯಿಂದ ವಿಶೇಷ ರೈಲು, ಇಲ್ಲಿದೆ ಮಹತ್ವದ ಮಾಹಿತಿ