Dharwad News: ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಚೇಂಬರ್ನಲ್ಲಿ ವಾಮಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಕುಲಪತಿಗೆ ದೂರು ನೀಡಲಾಗಿದೆ.
ಪ್ರಾಚೀನ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಮಾ ಗುಂಡೂರಾವ್ ಅವರು ರಜೆ ಮೇಲೆ ತೆರಳಿದ್ದರು. ಶುಕ್ರವಾರ ವಾಪಸ್ ಆಗಮಿಸಿದಾಗ ಚೇಂಬರ್‌ನ ಕೀಲಿ ತೆಗೆದಾಗ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ.
ಟೇಬಲ್ ಮೇಲೆ ಕಪ್ಪು ಬಣ್ಣದ ಮಾಟದ ಗೊಂಬೆ, ಅದರೊಂದಿಗೆ 3 ಲಿಂಬೆ ಹಣ್ಣು ಎಸೆಯಲಾಗಿದ್ದು, ಅರಿಷಿಣ-ಕುಂಕುಮ ಹಾಕಲಾಗಿದೆ. ಕಿಟಕಿ ಮೂಲಕ ಈ ಕೃತ್ಯ ಎಸಗಲಾಗಿದೆ. ಎರಡು ದಿನಗಳ ಹಿಂದೆ ವಾಮಾಚಾರ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಗಾಬರಿಯಿಂದ ಹೊರ ನಡೆದ ಡಾ. ರಮಾ, ಕುಲಪತಿಗೆ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ವಿಭಾಗದ ಪ್ರಾಧ್ಯಾಪಕರೊಬ್ಬರ ಮೇಲೆ ಶಂಕೆ ವ್ಯಕ್ತವಾಗಿದೆ. ಅವರ ಅಳಿಯ ಇದೇ ವಿಭಾಗದಲ್ಲಿ ಉಪನ್ಯಾಸಕರಾಗಿದ್ದು, ರಮಾ ಚೇಂಬರ್ ಬಿಟ್ಟು ಕೊಡುವ ವಿಷಯವಾಗಿ ವಿದ್ಯಾರ್ಥಿಗಳ ಎದುರೇ ಮಾವ-ಅಳಿಯ ಬಂದು ತಿಕ್ಕಾಟ ನಡೆಸಿದ್ದರು. ನಾಲ್ಕು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಮತ್ತೆ ರಮಾ ವಿರುದ್ಧ ಷಡ್ಯಂತ್ರ ನಡೆಸಿರುವ ಅನುಮಾನ ವ್ಯಕ್ತವಾಗಿದೆ.
‘ಕಾಂಗ್ರೆಸ್ ಬಿಟ್ಟಿ ಭಾಗ್ಯಗಳ ಆಸೆಯನ್ನು ಮೀರಿ ಜನ ಬಿಜೆಪಿ ಕೈ ಹಿಡಿದಿದ್ದಾರೆ’
ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿನ ಜಯಭೇರಿ: ಶಿವರಾಜ್ ಸಿಂಗ್ ಚೌಹಾಣ್‌ರನ್ನು ಭೇಟಿಯಾದ ಸಿಂಧ್ಯಾ..




