Thursday, November 7, 2024

Latest Posts

ರಮೇಶ್ ಜಾರಕಿಹೊಳಿ ಆಪ್ತನಿಗೆ ಚಾಕು ಇರಿತ, ಸಚಿವೆ ಹೆಬ್ಬಾಳ್ಕರ್ ಸಹೋದರನ ಆಪ್ತನ ಮೇಲೆ ಆರೋಪ!

- Advertisement -

Political News: ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತನೂ ಆಗಿರುವ ಬೆಳಗಾವಿ ಬಿಜೆಪಿ ಕಾರ್ಯಕರ್ತ ( ಪೃಥ್ವಿ ಸಿಂಗ್ ( ಎಂಬುವರ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ, ಚಾಕುವಿನಿಂದ ಇರಿದಿದ್ದಾರೆ. ಬೆಳಗಾವಿಯ ಜಯನಗರದಲ್ಲಿ ನಿವಾಸದ ಬಳಿಯಲ್ಲಿ ಘಟನೆ ನಡೆದಿದ್ದು, ಪೃಥ್ವಿ ಸಿಂಗ್ ಕೈ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರವಾಗಿ ಗಾಯವಾಗಿದೆ. ಕೂಡಲೇ ಅವರನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗತ್ತಿದೆ. ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಆಪ್ತರೇ ಪೃಥ್ವಿ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆ ಮಾತನಾಡುತ್ತಿರುವ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು, ಸೂಕ್ತ ತನಿಖೆಗೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನ ಆಪ್ತರ ವಿರುದ್ಧ ಆರೋಪ

ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಮೇಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಆಪ್ತರೇ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚನ್ನರಾಜ್ ಹಟ್ಟಿಹೊಳಿ ಆಪ್ತರಾದ ಸದ್ದಾಂ, ಸುಜಯ್ ಜಾಧವ್ ಎಂಬುವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ನಮ್ಮ ತಂದೆಗೆ ಧಮಕಿ ಹಾಕಿದ್ದರು

ಇನ್ನು ಘಟನೆ ಬಗ್ಗೆ ಗಾಯಾಳು ಪೃಥ್ವಿ ಸಿಂಗ್ ಪುತ್ರ ಜಶ್ವಿರ್‌ ಸಿಂಗ್ ಮಾಹಿತಿ ನೀಡಿದ್ದಾರೆ. ಸಂಜೆ 4.50ಕ್ಕೆ ಚನ್ನರಾಜ ಹಟ್ಟಿಹೊಳಿ, ಸದ್ದಾಂ, ಸುಜಯ್ ನಮ್ಮ ಮನೆಯ ಹತ್ತಿರ ಬಂದಿದ್ದರು. ಈ ವೇಳೆ ನಮ್ಮ ತಂದೆಗೆ ಧಮ್ಕಿ ಹಾಕಿದ್ರು ಎಂದಿದ್ದಾರೆ. ಹಳೆ ವಿಚಾರ ಕೆದಕಿ ವಾಗ್ವಾದ ಆಯಿತು ಅಂತ ಹೇಳಿದ್ರು.

ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಆರೋಪ

ಜಗಳ ಆಗುತ್ತಿದ್ದಂತೆ ನಮ್ಮ ತಂದೆ ಡಿಸಿಪಿ ಅವರಿಗೆ ಪೋನ್ ಮಾಡಿ ಮಾತನಾಡಿದರು. ಈ ವೇಳೆ ಚನ್ನರಾಜ ಹಟ್ಟಿಹೊಳಿ ತಂದೆಯ ಪೋನ್ ಕಸಿದುಕೊಂಡು ಹಲ್ಲೆ ಮಾಡಿದ್ದಾರೆ. ಪ್ರಜ್ಞೆ ತಪ್ಪುವ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ. ಐದು ಜನ ಬಂದಿದ್ರು ಕಾರಿನಲ್ಲಿ ಚನ್ನರಾಜ ಹಟ್ಟಿಹೊಳಿ ಇದ್ರು ಅಂತ ಪೃಥ್ವಿ ಸಿಂಗ್ ಪುತ್ರ ಜಶ್ವಿರ್‌ ಸಿಂಗ್ ಹೇಳಿದ್ದಾರೆ.

ಬಿಜೆಪಿ ನಾಯಕರಿಂದ ಆಕ್ರೋಶ

ಇನ್ನು ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆದಿರುವುದಕ್ಕೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಎಲ್‌ಇ ಆಸ್ಪತ್ರೆಗೆ ಭೇಟಿ ನೀಡಿ, ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ, ಪೃಥ್ವಿ ಸಿಂಗ್ ಹಲ್ಲೆ ಮಾಡಿದ್ದು ಯಾರು ಎಂದು ತನಿಖೆ ಮಾಡಿ ಅಂತ ಆಗ್ರಹಿಸಿದ್ದಾರೆ. ಈಗಾಗಲೇ ದೂರು ನೀಡಲಾಗಿದೆ, ಡಿಸಿಪಿ, ಎಸಿಪಿ ಸ್ಥಳಕ್ಕೆ ಬಂದಿದ್ದಾರೆ. ಇದನ್ನು ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.

ರಾಜಕೀಯ ದುರುದ್ದೇಶದಿಂದ ಹಲ್ಲೆ

ಇನ್ನು ಮತ್ತೋರ್ವ ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್ ಮಾತನಾಡಿ, ರಾಜಕೀಯ ದುರುದ್ದೇಷದಿಂದ ಹಲ್ಲೆ ಆಗಿದೆ ಎಂದಿದ್ದಾರೆ. ರಾಜಕೀಯ ಪಕ್ಷಗಳ ನಡವೆ ಅಭಿಪ್ರಾಯ ಸಹಜ. ಆದರೆ ರಾಜ್ಯದಲ್ಲಿ ಈಗಿರೋ ಸರ್ಕಾರ ವಿರೋಧಿಗಳನ್ನು ಟಾರ್ಗೆಟ್ ಮಾಡುತ್ತಿದೆ. ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ, ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

‘ಕಾಂಗ್ರೆಸ್‌ನ ಸವಾಲಿಗೆ ಪ್ರತ್ಯುತ್ತರ ಕೊಡುವ ಸಾಮರ್ಥ್ಯ ಜೆಡಿಎಸ್ ಹಾಗೂ ಬಿಜೆಪಿ ಒಕ್ಕೂಟಕ್ಕೆ ಇದೆ’

8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಇನ್ನು ನೆನಪು ಮಾತ್ರ

ಕಾಂಗ್ರೆಸ್ ಪಕ್ಷದ ಪೊಳ್ಳು ಗ್ಯಾರಂಟಿಗಳನ್ನು ಜನ ನಂಬಲಿಲ್ಲ: ಬಿ.ವೈ.ವಿಜಯೇಂದ್ರ

- Advertisement -

Latest Posts

Don't Miss