Friday, November 22, 2024

Latest Posts

ತುಪ್ಪ ತಿನ್ನುವುದರಿಂದ ದೇಹದ ಮೇಲಾಗುವ ಪರಿಣಾಮಗಳೇನು ಗೊತ್ತಾ..?

- Advertisement -

ಆಯುರ್ವೇದದಲ್ಲಿ ತುಪ್ಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಲವು ಆಯುರ್ವೇದ ಔಷಧಿಗಳನ್ನು ಸಹ ತುಪ್ಪದಲ್ಲಿ ಹುರಿಯಲಾಗುತ್ತದೆ. ಆದರೆ ತುಪ್ಪವನ್ನು ಕರಿಯಲು ಅಥವಾ ಹುರಿಯಲು ಬಳಸುವುದಕ್ಕಿಂತ ಹಾಗೇ ಸೇವಿಸುವುದು ಆರೋಗ್ಯಕ್ಕೆ ಉತ್ತಮ.

ಇನ್ನು ತುಪ್ಪ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತಾ..? ಕಮ್ಮಿಯಾಗುತ್ತಾ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿದೆ. ಆಯುರ್ವೇದದ ಪ್ರಕಾರ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿದೆ. ಅದರಲ್ಲೂ ದೇಶಿಯ ತಳಿಯ ಆಕಳಿನ ಹಾಲಿನಿಂದ ಮಾಡಿದ ತುಪ್ಪ ಸೇವಿಸಿದ್ದಲ್ಲಿ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು.

ಕಟ್ಟುಮಸ್ತಾದ ದೇಹ ಹೊಂದಲು, ಸುಂದರ ತ್ವಚೆಗಾಗಿ, ಕೂದಲ ಆರೋಗ್ಯಕ್ಕಾಗಿ ತುಪ್ಪದ ಉಪಯೋಗ ಲಾಭಕಾರಿಯಾಗಿದೆ.

ಆಯುರ್ವೇದದ ಪ್ರಕಾರ ತುಪ್ಪ ಹಳೆಯದಾದಷ್ಟು ಅದರಲ್ಲಿ ಔಷಧಿಯ ಅಂಶ ಹೆಚ್ಚಾಗುತ್ತದೆ. ಫ್ರೆಶ್ ಆಗಿರುವ ತುಪ್ಪಕ್ಕಿಂತ, ವರ್ಷಗಳ ಹಿಂದೆ ಮಾಡಿದ ತುಪ್ಪ ಉಪಯೋಗಿಸಿದರೆ ತುಂಬ ಲಾಭಕಾರಿ. ಆದರೆ ತುಪ್ಪವನ್ನು ಹೇಗೆ ಸಂಸ್ಕರಿಸಿ ಇಡುತ್ತೇವೆಂಬುದರ ಮೇಲೆ ತುಪ್ಪ ಹಾಳಾಗದಿರುವುದು ಅವಲಂಬಿತವಾಗಿರುತ್ತದೆ. ಪ್ಲಾಸ್ಟಿಕ್ ಡಬ್ಬದಲ್ಲಿ ಇಡುವ ಬದಲು ಗಾಜಿನ ಡಬ್ಬದಲ್ಲಿ, ಅಥವಾ ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟರೆ ಹಲವು ದಿನಗಳವರೆಗೆ ತುಪ್ಪ ಹಾಳಾಗುವುದಿಲ್ಲ.

ನಿದ್ರಾಹೀನತೆಯಿಂದ ಬಳಲುವವರು ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಒಳ್ಳೆ ನಿದ್ದೆ ಬರುತ್ತದೆ.
ಚಳಿಗಾಲದಲ್ಲಿ ತುಟಿ ಒಡೆಯುವುದು ಸಾಮಾನ್ಯ, ಈ ಸಮಸ್ಯೆಗೆ ತುಪ್ಪ ರಾಮಬಾಣವಾಗಿದೆ. ಹನಿ ತುಪ್ಪವನ್ನ ರಾತ್ರಿ ತುಟಿಗೆ ಹಚ್ಚುವುದರಿಂದ ತುಟಿಯ ಅಂದ ಕಾಪಾಡಿಕೊಳ್ಳಬಹುದು.

ನೆನಪಿನ ಶಕ್ತಿ, ಚುರುಕುತನವಿಲ್ಲದವರು ಹಾಲಿನೊಂದಿಗೆ ಸ್ವಲ್ಪ ತುಪ್ಪ ಬೆರೆಸಿ ಕುಡಿಯಬಹುದು. ಬಹುತೇಕ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದರಿಂದ ಅಂಥವರು ಇದನ್ನ ಬಳಸಬಹುದು.

ಒಂದೆರಡು ಹನಿ ತುಪ್ಪವನ್ನ ಮೂಗಿನಲ್ಲಿ ಹಾಕುವುದರಿಂದ ಶೀತ, ಕೆಮ್ಮು, ನಿಶ್ಯಕ್ತಿ, ಬಳಲುವಿಕೆಯಿಂದ ಮುಕ್ತಿ ಸಿಗುತ್ತದೆ.

ಇನ್ನು ತುಪ್ಪ ಸೌಂದರ್ಯವರ್ಧಕವಾಗಿಯೂ ಕಾರ್ಯನಿರ್ವಹಿಸುತ್ತದೆ.ತುಪ್ಪ ಮಾಯಿಶ್ಚರಾಯ್ಸರ್ ರೀತಿ ಕೆಲಸ ಮಾಡುವುದರಿಂದ, ಒಣತ್ವಚೆಯುಳ್ಳವರು ಕೆಲ ಹನಿ ತುಪ್ಪವನ್ನು ತ್ವಚೆಗೆ ಹಚ್ಚಿಕೊಳ್ಳಬಹುದು.
ತುಪ್ಪ ತಿಂದ ಮೇಲೆ ಅಥವಾ ತುಪ್ಪದಿಂದ ಮಾಡಿದ ಯಾವುದೇ ಪದಾರ್ಥ ಸೇವಿಸಿದ ಮೇಲೆ ತಣ್ಣೀರು ಕುಡಿಯುವಂತಿಲ್ಲ. ಇದರಿಂದ ಕೆಮ್ಮು , ಎದೆ ನೋವು ಇತ್ಯಾದಿ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತುಪ್ಪ ಸೇವನೆಯ ನಂತರ ಬಿಸಿನೀರಿ ಸೇವನೆ ಅತ್ಯಗತ್ಯ.

ಹೆಚ್ಚಿಗೆ ಕುಡಿದರೆ ಅಮೃತವೂ ವಿಷವೇ ಎಂಬಂತೆ, ತುಪ್ಪದ ಸೇವನೆ ಅತಿಯಾದರೆ ದೇಹಕ್ಕೆ ಹಾನಿಯುಂಟಾಗುತ್ತದೆ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss