Saturday, July 5, 2025

Latest Posts

ಆಟೋದಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.. ಬೆಂಗಳೂರಿಂದ ಹುಬ್ಬಳ್ಳಿ ಕಡೆಗೆ ಬಂದರಾ ಇಬ್ಬರು?

- Advertisement -

Crime News: ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಜೋಡಿಯೊಂದು ಅಟೋ ಡ್ರೈವರ್ ಮನೆಯಲ್ಲಿಯೇ ನೇಣಿಗೆ ಶರಣಾದ ಘಟನೆ ಇಂದು ಸಾಯಂಕಾಲ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರಾರ್ಜಿ ನಗರದಲ್ಲಿ ನಡೆದಿದೆ.

ಬೆಂಗಳೂರು ಮೂಲದ ಲೋಕೇಶ ಹಾಗೂ ಆತನ ಹೆಂಡತಿಯ ತಂಗಿಯಾದ ಶಾಂತಿ ಎಂಬುವರ ನಡುವೆ ಹಲವು ದಿನಗಳಿಂದ ಅನೈತಿಕ ಸಂಬಂಧ ಇತ್ತು ಹೀಗಾಗಿ ಇಬ್ಬರು ಬೆಂಗಳೂರಿನಿಂದ ಹುಬ್ಬಳ್ಳಿ ನಗರಕ್ಕೆ ಓಡಿ ಬಂದಿದ್ದಾರೆ.

ನಗರದಲ್ಲಿ ಅಟೋ ಒಂದನ್ನು ಬಾಡಿಗೆ ಪಡೆದು ಅಕ್ಷಯ ಪಾರ್ಕ್ ಹಾಗೂ ಇನ್ನಿತರ ಕಡೆ ಒಡ್ಯಾಡಿ ಅಟೋ ಚಾಲಕನಿಗೆ ಹೇಳಿ ಊಟವನ್ನು ತರೆಸಿಕೊಂಡಿದ್ದಾರೆ. ಆಗ ಅಟೋ ಚಾಲಕ ಮೂರಾರ್ಜಿ ನಗರದಲ್ಲಿನ ತನ್ನ ಮನೆಯಲ್ಲಿಯೇ ಊಟವನ್ನು ಮಾಡಿ ಎಂದು ಇವರಿಬ್ಬರಿಗೆ ಹೇಳಿ ತಾನು ಬೇರೆ ಪ್ಯಾಸೆಂಜರ್ ಒಬ್ಬರನ್ನು ಬಿಡಲು ಹೋಗಿದ್ದಾನೆ.

ಪ್ಯಾಸೆಂಜರ್ ಬಿಟ್ಟು ಮನೆಗೆ ಬಂದು ನೋಡಿದಾಗ, ಇಬ್ಬರು ಕೂಡಾ ಒಂದೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಎರಡು ಶವಗಳನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.

ಸದ್ಯ ಮೃತಪಟ್ಟ ಶಾಂತಿ ಮೂರು ಮದುವೆ ಆಗಿದ್ದಳು. ಅಷ್ಟೇ ಅಲ್ಲದೆ ತನ್ನ ಅಕ್ಕನ ಗಂಡನ ಜೊತೆಯೇ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಮಾಹಿತಿ ಸಧ್ಯಕ್ಕೆ ಲಭ್ಯವಾಗಿದೆ.

ಶೆಟ್ಟರ್‌ ಕಡೆಯಿಂದ ಸನ್ಮಾನ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ.. ಕಾರಣವೇನು..?

ತಾನು ಓದಿದ ಕೆರಾಡಿ ಶಾಲೆಯನ್ನೇ ದತ್ತು ಪಡೆದ ನಟ ರಿಷಬ್ ಶೆಟ್ಟಿ

ಎಲ್ಲಾ ರೀತಿಯ ಕ್ರಮಕ್ಕೆ ಸರ್ಕಾರ ಸಿದ್ಧವಾಗಿದೆ ಎಂದಿದ್ದಾರೆ: ಕೋವಿಡ್ ಬಗ್ಗೆ ಸಿಎಂ ಮಾತು

- Advertisement -

Latest Posts

Don't Miss