Wednesday, September 11, 2024

Latest Posts

ತಾನು ಓದಿದ ಕೆರಾಡಿ ಶಾಲೆಯನ್ನೇ ದತ್ತು ಪಡೆದ ನಟ ರಿಷಬ್ ಶೆಟ್ಟಿ

- Advertisement -

Movie News: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಮೂಲಕ, ಸರ್ಕಾರಿ ಶಾಲೆಯ ಮಹತ್ವ ಸಾರಿದ್ದ ಸ್ಯಾಂಡಲ್‌ವುಡ್ ನಟ ರಿಷಬ್ ಶೆಟ್ಟಿ, ತಾನು ಓದಿದ ಕೆರಾಡಿ ಶಾಲೆಯನ್ನೇ ದತ್ತು ಪಡೆದಿದ್ದಾರೆ.

ಕುಂದಾಪುರದ ಕೆರಾಡಿ ನಟ ರಿಷಬ್ ಶೆಟ್ಟಿಯ ಹುಟ್ಟೂರಾಗಿದೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ರಿಷಬ್ ಕಲಿತಿದ್ದು. ಹಾಗಾಗಿ ಇಂದು ಶಾಲೆಗೆ ಭೇಟಿ ಕೊಟ್ಟು, ಆಡಳಿತ ಮಂಡಳಿ ಬಳಿ ಮಾತನಾಡಿ, ಶಾಲೆಯನ್ನು ದತ್ತು ಪಡೆದಿದ್ದಾರೆ. ಈ ವೇಳೆ ಊರಿನ ಮುಖ್ಯಸ್ಥರು, ಹಿರಿಯರು ರಿಷಬ್‌ರನ್ನು ಅಭಿನಂದಿಸಿದರು.

ಕುಂದಾಪುರದ ಕೆರಾಡಿಯಲ್ಲೇ ಕಾಂತಾರದ ಶೂಟಿಂಗ್ ನಡೆದಿತ್ತು. ಇದೀಗ ಕಾಂತಾರ ಭಾಗ 1 ಟೀಸರ್ ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ಟೀಸರೇ ಹೀಗಿರುವಾಗ, ಇನ್ನು ಸಿನಿಮಾ ಎಷ್ಟು ಸೂಪರ್ ಇರಬಹುದು ಎಂದು ಅಭಿಮಾನಿಗಳು ಈಗಾಗಲೇ ಲೆಕ್ಕ ಹಾಕಿದ್ದಾರೆ. ಇನ್ನು ದಕ್ಷಿಣ ಭಾರತದ ಪ್ರಸಿದ್ಧ ನಟರಾದ ಪ್ರಭಾಸ್, ಪ್ರಥ್ವಿರಾಜ್ ಸುಕುಮಾರನ್ ಸೇರಿ, ಹಲವು ನಟ-ನಟಿಯರು ಕಾಂತಾರ ಭಾಗ 1ರ ಟೀಸರ್‌ಗೆ ಹಾಡಿ ಹೊಗಳಿದ್ದಾರೆ. ಈ ಸಿನಿಮಾ ನೋಡಲು ನಾವು ಕಾತುರರಾಗಿದ್ದೇವೆ ಎಂದಿದ್ದಾರೆ.

ಕಿರಿಕ್ ಪಾರ್ಟಿ ಬಳಿಕ ಬರುತ್ತಿದೆ ಬ್ಯಾಚುಲರ್ಸ್ ಪಾರ್ಟಿ: ಈ ಸಲ ಶೆಟ್ರ ಪಾರ್ಟಿ ಜೋರು

ಶಿರಡಿ ಸಾಯಿಬಾಬಾ ದೇಗುಲಕ್ಕೆ ಶಾರುಖ್ ಖಾನ್ ಭೇಟಿ!

ಮಗಳು ಐರಾಳ ಬರ್ತ್‌ಡೇಯನ್ನು ಎಷ್ಟು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ ನೋಡಿ ರಾಕಿ ಭಾಯ್

- Advertisement -

Latest Posts

Don't Miss