Dharwad News: ಧಾರವಾಡ: ಪ್ರತಿಪಕ್ಷಗಳ ಸಂಸತ್ ಸದಸ್ಯರ ಅಮಾನತು ಹಿನ್ನೆಲೆ, ಅಮಾನತು ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ ಮಾಡಲಾಯಿತು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದ್ದು, ಕೆಲ ಹೊತ್ತು ನಗರದ ಜ್ಯುಬಿಲಿ ಸರ್ಕಲ್ ಬಂದ್ ಮಾಡಲಾಗಿತ್ತು. ಈ ವೇಳೆ ಕಾಂಗ್ರೆಸ್ಸಿಗರು, ಕೇಂದ್ರ ಬಿಜೆಪಿ ಸರ್ಕಾಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿದರು. ಅಲ್ಲದೇ, ಕಪ್ಪು ಬಟ್ಟೆಯ ಧ್ವಜ ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದರು.
ಡಿಸಿಎಂ ಡಿಕೆಶಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಇಟ್ಟ ಬೇಡಿಕೆಗಳಿವು..




