Political News: ಧಾರವಾಡ: ಲೋಕಸಭೆ ಚುನಾವಣೆಗೆ ಧಾರವಾಡದಿಂದ ಸ್ಪರ್ಧೆ ಮಾಡಲು ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆಗೆ ಅಭ್ಯರ್ಥಿ ಯಾರೇ ಆದರೂ ಆ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ವೈಯಕ್ತಿಕ ಹಿತಾಸಕ್ತಿ ಇರಬೇಕು. ಶಾಸಕರಿರಲಿ, ಮಾಜಿ ಶಾಸಕರಿರಲಿ, ಸಚಿವರಾಗಲಿ ಅಥವಾ ಪ್ರಬಲ ಆಕಾಂಕ್ಷಿ ಯಾರೇ ಆದರೂ ಪಕ್ಷ ಯಾರು ಗೆಲ್ಲುತ್ತಾರೋ ಅಂತವರನ್ನು ನೋಡಿ ಟಿಕೆಟ್ ಕೊಡುತ್ತದೆ. ಪಕ್ಷ ಹೇಳಿದಾಗ ಚುನಾವಣೆಗೆ ನಿಲ್ಲಲೇಬೇಕಾಗುತ್ತದೆ. ನನಗೆ ಮಾತ್ರ ವೈಯಕ್ತಿಕವಾಗಿ ಲೋಕಸಭೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದರು.
ಚುನಾವಣೆಗೆ ನಿಲ್ಲಲೇಬೇಕಾಗುತ್ತದೆ. ನನಗೆ ಮಾತ್ರ ವೈಯಕ್ತಿಕವಾಗಿ ಲೋಕಸಭೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದರು. ಧಾರವಾಡ ಜಿಲ್ಲೆಯಲ್ಲಿ 15 ಜನ ಅಭ್ಯರ್ಥಿಗಳು ಅರ್ಜಿ ಕೊಟ್ಟಿದ್ದಾರೆ. ಯಾವ ಶಾಸಕರೂ ಅರ್ಜಿ ಕೊಟ್ಟಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಇಲ್ಲಿ ಬಂದು ಅರ್ಜಿ ತೆಗೆದುಕೊಂಡು ಹೋಗಿದ್ದಾರೆ. ಅವರಿಗೆ ಮತ್ತೆ ವೈಯಕ್ತಿಕವಾಗಿ ಅರ್ಜಿ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು.
ಚುನಾವಣೆ ಸಂದರ್ಭದಲ್ಲಿ ಬೇರೆ ಪಕ್ಷದಿಂದ ಮುಖಂಡರೂ ಬರುತ್ತಾರೆ. ಇದರ ಜೊತೆಗೆ ಎಷ್ಟು ಅರ್ಜಿಗಳು ಬಂದಿವೆ ಎಂಬುದನ್ನೂ ಪರಿಗಣಿಸಬೇಕಾಗುತ್ತದೆ. ಅಳೆದು ತೂಗಿ ಪಕ್ಷ ಟಿಕೆಟ್ ಕೊಡುತ್ತದೆ ಎಂದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಮಾಹಿತಿ ಇದೆ. ಅವರು ವೈಯಕ್ತಿಕವಾಗಿ ನನ್ನ ಸಂಪರ್ಕದಲ್ಲಿಲ್ಲ. ಅವರು ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದರು.
ಜಗದೀಶ್ ಶೆಟ್ಟರ್ ರೆಡಿ ಆಗೋಕೆ ನಮ್ಮಂತ ಎಷ್ಟೋ ಕಾರ್ಯಕರ್ತರು ಬಲಿ ಆಗಿದ್ದಾರೆ – ಶಾಸಕ ಟೆಂಗಿನಕಾಯಿ ವಾಗ್ದಾಳಿ
ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ರಚನಾ ಸಮಿತಿಯಲ್ಲಿ ಸಿಎಂಗೆ ಸದಸ್ಯ ಸ್ಥಾನ