Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಐದು ರಾಜ್ಯಗಳ ಸೋಲಿನಿಂದ ಕಾಂಗ್ರೆಸ್ ಅತ್ಯಂತ ತಲೆ ಕೆಟ್ಟೋರ ರೀತಿಯಲ್ಲಿ ವರ್ತಿಸುತ್ತಿದೆ. ಲೋಕಸಭೆ, ವಿಧಾನಸಭೆ ಅಧಿವೇಶನ ನಡೆಸೋಕೆ ಬಿಡೋದಿಲ್ಲ ಅನ್ನೋ ಮನಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಸೋಲಿನ ಹತಾಶೆಯಿಂದ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದೆ. ಜನ ಇದನ್ನು ಗಮನಿಸುತ್ತಿದ್ದಾರೆ.ಪಾರ್ಲಿಮೆಂಟ್ ಘಟನೆ ನೆಪ ಮಾಡಿ, ಸೆಸೆನ್ ನಡೆಸಲ್ಲ ಅನ್ನೋ ಮಾನಸಿಕತೆಗೆ ಬಂದರು. ಸೋಲಿನ ಸಿಟ್ಟನ್ನು ತೀರಿಸಿಕೊಳ್ತೀದಾರೆ. ಅಮಾನತ್ತು ಮಾಡಿ ಬಿಲ್ ಪಾಸ್ ಮಾಡಿದ್ದಾರೆಂದು ಪ್ರಚಾರ ಮಾಡ್ತೀದಾರೆ. ಹಿಂದೆ ಕೂಡಾ ಕೆಲ ಘಟನೆ ನಡೆದಿವೆ. ಪಾಸ್ ಮೂಲಕ ಪಾರ್ಲಿಮೆಂಟ್ ನಲ್ಲಿ ವೆಪನ್ಸ್ ತಗೆದುಕೊಂಡು ಬಂದ ಉದಾಹರಣೆ ಇದೆ.
ಯಾವ ಕ್ರಮ ಕೈಗೊಳ್ಳಬೇಕ ಅನ್ನೋದು ಸ್ಪೀಕರ್ ಗೆ ಬಿಟ್ಟಿರೋದು. ಹಿಂದೆ ಲೋಕಸಭೆಯಲ್ಲಿ ಡ್ಯಾಗನ್ ತಂದಿದ್ರು. ಸದನ ನಡೆಸಲ್ಲ ಅನ್ನೋದು ಸರ್ವಾಧಿಕಾರಿ ಮಾನಸಿಕತೆ. ಪಾರ್ಲಿಮೆಂಟ್ ನಲ್ಲಿ ಘಟನೆ ನಡೆದ ದಿನವೂ ಚರ್ಚೆಯಲ್ಲಿ ಭಾಗಿಯಾಗಿದ್ರು. ಅದಾದ ಬಳಿಕ ಎಲ್ಲಿಂದಲೋ ಸೂಚನೆ ಬರುತ್ತೆ. ಸೂಚನೆ ಬಂದ ಮೇಲೆ ಡಿಸ್ಟರ್ಬ್ ಮಾಡ್ತಾರೆ. ಸೂಚನೆ ಬಂದ ಬಳಿಕ ಸದನ ಡಿಸ್ಟರ್ಬ್ ಮಾಡಿದ್ರು. ಕಾಂಗ್ರೆಸ್ ಅಂದ್ರೆ ಕನಫ್ಯೂಶನ್ ಪಾರ್ಟಿ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನವರು ಸದನಕ್ಕೆ ಬಿತ್ತಿ ಪತ್ರ ತಂದ್ರು. ಯಾಕೆ ಅಂತಾ ಕೇಳಿದ್ರೆ ನಾವ ಸಸ್ಪೆಂಡ್ ಮಾಡಬೇಕು ಅಂದರು. ಆಗ 13 ಜನ ಅಮಾನತ್ತು ಮಾಡಲಾಯಿತು. ನಂತರ ಕೆಲವರು ನಮ್ಮನ್ನು ಸಸ್ಪೆಂಡ್ ಮಾಡಿ ಅಂದ್ರು. ನಿಮಗೆ ಒಳಗೆ ಬರೋಕೆ ನೈತಿಕತೆ ಇಲ್ಲ. ಸುಮ್ನೆ ನಮ್ಮನ್ನ ಹೊರಗಿಟ್ಟು ಮಾಡಿದ್ರು ಅಂತಾರೆ. ಹಳೇ ಬಿಲ್ ಗಳ ಕುರಿತು ನಿಮಗೆ ಮಾತಾಡೋಕೆ ಧೈರ್ಯ ಇಲ್ಲ. ಚರ್ಚೆಯಲ್ಲಿ ಭಾಗವಹಿಸಲು ನೈತಿಕತೆ ಇಲ್ಲ. ಬಿಲ್ ಗಳನ್ನ ಪಾಸ್ ಮಾಡೋಕೆ ಇದು ಕೊನೆ ಅಧಿವೇಶನ. ಪುರಾತನ ಭಾರತೀಯ ನ್ಯಾಯಶಾಸ್ತ್ರದ ಆಧಾರದ ಮೇಲೆ ನಾವು ಕಾನೂನು ರಚನೆ ಮಾಡಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹಿಜಾಬ್ ನಿಷೇಧ ವಿಷಯದಲ್ಲಿ ಸಿದ್ದರಾಮಯ್ಯ ಮೂರ್ಖರಂತೆ ಮಾತಾಡ್ತಿ ಇದ್ದಾರೆ. ಇಲ್ಲದ ಹಿಜಾಬ್ ಆದೇಶ ಹಿಂದೆ ಪಡೀತೀನಿ ಅಂತಾರೆ. ಸಿದ್ದರಾಮಯ್ಯ ಅವರ ಮುಟ್ಟಾಳತನ ಇದು. ಅವರ ವೈಫಲ್ಯ ಮುಚ್ಚಿಕೊಳ್ಳೋಕೆ ಹೀಗೆ ಮಾಡ್ತಾ ಇದ್ದಾರೆ. ನೀವು ಗೊತ್ತಿದ್ದೂ ಮಾಡ್ತಾ ಇದ್ರೆ ಸಮಾಜಕ್ಕೆ ಮಾಡುವ ಅನ್ಯಾಯ. ಗೊತ್ತಿಲ್ಲದೇ ಹೇಳಿದ್ರೆ ನೀವು ಸಿಎಂ ಖುರ್ಚಿಗೆ ಅನರ್ಹರು. ಮಿಸ್ಟರ್ ಸಿದ್ದರಾಮಯ್ಯ ಎಲ್ಲಿ ಹಿಜಾಬ್ ಬ್ಯಾನ್ ಇದೆ ಎಂದು ಜೋಶಿ ಪ್ರಶ್ನಿಸಿದ್ದಾರೆ.
ಹಿಜಾಬ್ ಬ್ಯಾನ್ ವಿಷಯದಲ್ಲಿ ಮೂರ್ಖರಂತೆ ಮಾತಾಡ್ತಿ ಇದ್ದೀರಿ. ರಾಹುಲ್ ಗಾಂಧಿ ಅವರ ಸಹವಾಸ ದೋಷ ಕಾರಣ ಇರಬಹುದು. ತುಷ್ಟಿಕಾರಣದಲ್ಲಿ ಮತ ಪಡೆಯುವ ಹುನ್ನಾರ ಇದು. ಮುಸ್ಲಿಂ ಭಾಂದವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಮಾಡಿ ಅಶಾಂತಿ ಉಂಟುಮಾಡುವ ಕೆಲಸ ಇದು ಎಂದು ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಕೆ ಹರಿಪ್ರಸಾದ್ ಹೇಳಿಕೆಗೆ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಹರಿಪ್ರಸಾದ್ ರನ್ನ ಬೂಟ್ ಕ್ಕಿಂತ ಕಡೆ ಮಾಡಿದ್ದಾರೆ. ಅವರ ಭಾಷೆಯಲ್ಲಿ ನನಗೆ ಉತ್ತರ ಕೊಡೋಕೆ ಬರಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಬೂಟ್ ಕ್ಕಿಂತ ಕಡೆ ಮಾಡಿದ್ದಾರೆ. ಅದಕ್ಕೆ ಆ ರೀತಿ ಅವರು ಹೇಳ್ತಾ ಇದ್ದಾರೆ. ಕಾಂಗ್ರೆಸ್ ನಲ್ಲಿ ಆಗ್ತಿರುವ ಅವಮಾನಕ್ಕೆ ಹೀಗೆ ಮಾಡ್ತಾ ಇದ್ದಾರೆ. ನೀವೇನು ಮಾಡಿದ್ರು ಸಿದ್ದರಾಮಯ್ಯ ನಿಮ್ಮನ್ನ ಮಂತ್ರಿ ಮಾಡಲ್ಲ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ.
ಡಿಕೆ ಶಿವಕುಮಾರ್ ಅವರು ಸಹ ನಿಮ್ಮ ಬಗ್ಗೆ ತಲೆ ಕೆಡಿಸ್ಕೊಳ್ಳಲ್ಲ. ನಾನು ಧಾರವಾಡ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀನಿ. ಇಲ್ಲಿ ಜನ ಹಿಂದೆ ಆಶೀರ್ವಾದ ಮಾಡಿದ್ದಾರೆ. ಮುಂದೆನೂ ಜನ ಆಶೀರ್ವಾದ ಮಾಡ್ತಾರೆ. ನಾನು ಪದೇ ಪದೇ ಹೇಳಲ್ಲ ಎಂದಿದ್ದಾರೆ.
ಇನ್ನು ಖರ್ಗೆ ಪ್ರಧಾನಿ ಅಭ್ಯರ್ಥಿ ಎಂಬ ಬಗ್ಗೆ ಜೋಶಿ ಮಾತನನಾಡಿದ್ದು, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮಂತ್ರಿ ಅಭ್ಯರ್ಥಿಯಾಗಲು ಇನ್ನು ಒಪ್ಪಿಲ್ಲ. ರಾಹುಲ್ ಗಾಂಧಿ ಅವರೇ ಒಪ್ಪಿಲ್ಲ ಎಂದು ಹೇಳಿದ್ದಾರೆ.
ಲೋಕಸಭೆಗೆ ಸ್ಪರ್ಧಿಸಲು ನನಗೆ ವೈಯಕ್ತಿಕವಾಗಿ ಆಸಕ್ತಿ ಇಲ್ಲ – ಸಚಿವ ಸಂತೋಷ್ ಲಾಡ್
ಕಿವಿಗೆ ಪೆಟ್ಟು ಬೀಳುವಷ್ಟು ಕೆಟ್ಟದಾಗಿ ಪತ್ನಿಗೆ ಹೊಡೆದ್ರಾ ವಿವೇಕ್ ಬಿಂದ್ರಾ..?
ಭಜರಂಗ್ ಪುನಿಯಾ ಬೆನ್ನಲ್ಲೇ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಕುಸ್ತಿಪಟು ವೀರೇಂದ್ರ ಸಿಂಗ್




