ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಬಿಡುಗಡೆ

Bengaluru News: ಬೆಂಗಳೂರಿನ ಎಂ.ಜಿ.ರೋಡ್‌ನಲ್ಲಿ ಪ್ರತೀ ವರ್ಷ ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡಲಾಗುತ್ತದೆ.  ಹಾಗಾಗಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಇನ್ನೊಂದು ವಾರದಲ್ಲಿ ಹೊಸ ವರ್ಷಾಚರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರಲೆಂದು, ಬಿಬಿಎಂಪಿ ಮಾರ್ಗಸೂಚಿ ಹೊರಡಿಸಿದೆ. ಈ ಬಗ್ಗೆ ಗೃಹ ಸಚಿವರಾದ ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಈ ವೇಳೆ ಯಾವ ಯಾವ ನಿಯಮಗಳನ್ನು ಪಾಲಿಸಬೇಕೆಂದು ನಿರ್ಧರಿಸಲಾಗಿದೆ.

ಬೆಂಗಳೂರಿನಲ್ಲಿ ಹೆಚ್ಚು ಜನ ಸೇರುವ ಜಾಗದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಅಂಥಹ ಸ್ಥಳದಲ್ಲಿ ಅವಶ್ಯಕತೆ ಇದ್ದಾಗ, ಹೋಗಲು ಆ್ಯಂಬುಲೆನ್ಸ್ ವ್ಯವಸ್ಥೆ ಇರಬೇಕು.

ಹೆಚ್ಚಿನ ಜನ ಸೇರುವ ಸ್ಥಳದಲ್ಲಿ, ಬೀದಿ ದೀಪಗಳು ಸರಿಯಾಗಿ ಇರಬೇಕು. ಹೆಚ್ಚುವರಿಯಾಗಿ ಫೆಡ್‌ ಲೈಟ್‌ಗಳನ್ನು ಅಳವಡಿಸಬೇಕು.

ರಸ್ತೆ ರಿಪೇರಿಯಾಗುತ್ತಿರುವ ಜಾಗದಲ್ಲಿ ಬ್ಯಾರಿಕೇಡ್ ವ್ಯವಸ್ಥೆ, ಸೂಚನಾ ಫಲಕಗಳಿರಬೇಕು. ರಸ್ತೆ ಗುಂಡಿಗಳನ್ನು ಸರಿಯಾಗಿ ಮುಚ್ಚಬೇಕು.

ಬೆಂಗಳೂರಿನಲ್ಲಿ ಕ್ಲಬ್, ರೆಸ್ಟೋರೆಂಡಟ್, ದೊಡ್ಡ ದೊಡ್ಡ ಬಾರ್‌ಗಳಲ್ಲಿ ಹೆಚ್ಚಿನ ಜನ ಸೇರಲಿದ್ದು, ಅಲ್ಲೆಲ್ಲ ತೊಂದರೆಯಾಗದಂತೆ, ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ.

‘ಮಿಮಿಕ್ರಿ ಅನ್ನೋದು ಒಂದು ಕಲೆ, ಅದನ್ನು ಸಾವಿರ ಬಾರಿ ಮಾಡುತ್ತೇನೆ’

‘ಬಿಜೆಪಿಗರು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ’

‘ಅಶೋಕ್ ಅವರೇ, ಯಾಕೆ ನಮ್ಮ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ತೀರಿ?’

About The Author