Crime News: ಮರ್ಯಾದೆಗೆ ಅಂಜಿ ತಂದೆಯಿಂದಲೇ ಮಗಳ ಕೊಲೆ

Kolar News: ಮದುವೆಯಾಗಿದ್ದರೂ ಗಂಡನ ಮನೆಯಲ್ಲಿ ಸಂಸಾರ ಮಾಡಲು ಕಿರಿಕಿರಿ ಮಾಡುತ್ತಿದ್ದಾಳೆ ಎಂದು ಕೋಪಗೊಂಡ ತಂದೆಯೊಬ್ಬ, ತನ್ನ ಅಪ್ರಾಪ್ತ ಮಗಳನ್ನೇ ಕೊಂದು ಸುಟ್ಟುಹಾಕಿರುವ ಘಟನೆಯು ಕೋಲಾರದಲ್ಲಿ ನಡೆದಿದೆ. ಅಪರಿಚಿತರು ಪೊಲೀಸ್ ಠಾಣೆಗೆ ರವಾನಿಸಿದ ಮೂಗರ್ಜಿಯಿಂದಾಗಿ ಈ ಬಾಲಕಿಯ ಹತ್ಯೆಯ ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.

ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮರವೇಮನೆ ಎನ್ನುವ ಹಳ್ಳಿಯಿದೆ. ಈ ಊರಿನ ರವಿ ಕುಡಿತದ ದಾಸನಾಗಿದ್ದಾನೆ. ತನ್ನ ಮಾತನ್ನು ಕೇಳಲಿಲ್ಲ ಎನ್ನುವ ಕಾರಣಕ್ಕಾಗಿ ಈ ಪಾಪಿ ತಂದೆ ತನ್ನ ಅಪ್ರಾಪ್ತ ಪುತ್ರಿಯನ್ನು ಕೊಂದು ಸುಟ್ಟು ಹಾಕಿದ್ದಾನೆ. ಕೊಂದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಮಗಳು ಕಾಣೆಯಾಗಿದ್ದಾಳೆ ಎನ್ನುವ ದೂರನ್ನು ಕೊಟ್ಟಿರುವುದು ಈ ಪ್ರಕರಣದ ವಿಶೇಷವಾಗಿದೆ.

ಮರವೆಮನೆ ಗ್ರಾಮದ ರವಿ ಮತ್ತು ಕೃಷ್ಣಮ್ಮ ದಂಪತಿಗಳಿಗೆ ನಾಲ್ವರು ಮಕ್ಕಳು. ಈ ಪೈಕಿ ಎರಡನೆ ಮಗಳು 17 ರ ಹರೆಯದ ಅರ್ಚಿತ ಸೋದರ ಸಂಬಂಧಿಯನ್ನು ಪ್ರೀತಿಸುತ್ತಿದ್ದಾಳೆ ಎನ್ನುವ ಅನುಮಾನ ತಂದೆ ರವಿಯದ್ದಾಗಿದೆ. ಈ ವಿಚಾರವಾಗಿ ಬುದ್ದಿ ಮಾತನ್ನು ಕೇಳದ ಮಗಳಿಗೆ ಇದೇ ಏಪ್ರಿಲ್ 20 ರಂದು ಬಲವಂತವಾಗಿ ಮದುವೆ ಮಾಡಲಾಗುತ್ತದೆ ಆದರೆ, ಗಂಡನ ಮನೆಗೆ ಹೋದ ಮಗಳು ಅಲ್ಲಿ ಕಿರಿಕಿರಿ ಶುರು ಮಾಡಿದ್ದಾಳೆ.

ಮದುವೆಯಾದ ಒಂದು ತಿಂಗಳಾದರೂ ಸರಿಹೋಗದ ಅರ್ಚಿತಾಳ ಬಗ್ಗೆ ತಂದೆ ರವಿಯನ್ನು ಕರೆಸಿಕೊಂಡು ಬೀಗರು ಪಂಚಾಯಿತಿ ಮಾಡಿದ್ದರು. ಮರವೇಮನೆಗೆ ಸ್ವಲ್ಪದಿನದ ಮಟ್ಟಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ರವೀ ತನ್ನ ಮಗಳನ್ನು ಬೈಕ್ನಲ್ಲಿ ಕರೆದುಕೊಂಡು ಅಂದೇ ಸ್ವಗ್ರಾಮದ ಕಡೆಗೆ ಪ್ರಯಾಣ ಮಾಡಿದ್ದ. ಮರವೇಮನೆ ಗ್ರಾಮಕ್ಕೆ ಸ್ವಲ್ಪ ದೂರದಲ್ಲಿದ್ದ ಮುಷ್ಟೂರು ಗ್ರಾಮದ ತೋಟದ ಮನೆಯೊಂದಕ್ಕೆ ಕರೆದೊಯ್ದ ತಂದೆ ರವಿ, ಅಲ್ಲಿ ಬುದ್ದಿ ಮಾತನ್ನು ಹೇಳಲು ಪ್ರಯತ್ನಿಸಿ ವಿಫಲವಾದಾಗ ಸಿಟ್ಟಿಗೆದ್ದಿದ್ದಾನೆ ಅಲ್ಲಿದ್ದ ಮರದ ತುಂಡೊಂದರಿಂದ ಮಗಳನ್ನು ಹೊಡೆದು ಕೊಂದಿದ್ದಾನೆ ಪುತ್ರಿ ಅರ್ಚಿತ ಸತ್ತಳೆಂದು ಖಚಿತವಾದ ನಂತರ ಆ ಜಾಗದಲ್ಲಿದ್ದ ಒಣಗಿದ ಮರದ ತುಂಡುಗಳನ್ನು ಹಾಕಿ ಸುಟ್ಟು ಏನೂ ತಿಳಿಯದವನಂತೆ ಮನೆಗೆ ಹಿಂದಿರುಗಿದ್ದಾನೆ.

ಮರವೇಮನೆ ಗ್ರಾಮದ ತನ್ನ ಮನೆಗೆ ಹಿಂದಿರುಗಿದ ರವೀ ಬಟ್ಟೆಗಳು ರಕ್ತದ ಕಲೆಯಾಗಿದ್ದ ಬಗ್ಗೆ ಪ್ರಶ್ನಿಸಿದಾಗ, ಆಟೋ ರಿಕ್ಷಾ ಡಿಕ್ಕಿ ಹೊಡೆದು ಬಿದ್ದೆನೆಂದು, ಅರ್ಚಿತ ಅಲ್ಲಿಂದ ಓಡಿ ಹೋದಳೆಂದು ಮನೆಯವರಿಗೆ ಸುಳ್ಳು ಹೇಳಿದ್ದ ಐದು ದಿನಗಳಾದ ನಂತರ ನಂಗಲಿ ಪೊಲೀಸ್ ಠಾಣೆಗೆ ತೆರಳಿದ್ದ ರವಿ, ತನ್ನ ಮಗಳು ಅರ್ಚಿತ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟು, ಹುಡುಕುವ ನಾಟಕವನ್ನೂ ಆಡಿದ್ದ. ಆದರೆ, ಪೊಲೀಸರಿಗೆ ದೊರೆತ ಅನಾಮಧೇಯ ಪತ್ರವೊಂದು ಇಡೀ ಪ್ರಕರಣವನ್ನು ಬಯಲು ಮಾಡಿದೆ.

ಒಟ್ನಲ್ಲಿ, ಬುದ್ದಿ ಹೇಳುವ ಭರದಲ್ಲಿ ಹೆತ್ತ ಕಂದನನ್ನು ಕೊಲ್ಲುವ ರಾಕ್ಷಸೀಯ ವರ್ತನೆಯನ್ನು ತೋರಿಸಿದ್ದು ಎಷ್ಟು ಸರಿ. ಆ ಮೂಲಕ ತನ್ನನ್ನು ನಂಬಿಕೊಂಡಿದ್ದ ಸಂಸಾರವನ್ನು ಅನಾಥ ಮಾಡಿದ ತಂದೆಯ ನಡವಳಿಕೆಯು ಒಪ್ಪಲು ಸಾಧ್ಯವಿಲ್ಲ ಎಂಬುದು ಈ ಪ್ರಕರಣದಲ್ಲಿ ಗೊತ್ತಾಗುತ್ತದೆ.

ಗಂಗಾಪುರ ಕುಮಾರ್ ಪ್ರೀಡಂ ಟಿವಿ ಕೋಲಾರ.

ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ..

‘ಕೋವಿಡ್ ಸಮಯದಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗಿದೆ’

‘ವಿಕೃತ ಮನಸ್ಸುಗಳನ್ನು ಹೊಂದಿರುವಂತಹ ಇವರಿಬ್ಬರು ಸೇರಿ ಒಂದು ಪಕ್ಷವನ್ನು ಪ್ರಾರಂಭಿಸುದು ಒಳ್ಳೆಯದು’

About The Author