Hubballi News: ಹುಬ್ಬಳ್ಳಿ: ಕರ್ನಾಟಕದಲ್ಲಿ ಕನ್ನಡದ ನಾಮಫಲಕ ಶೇ ೬೦ ರಷ್ಟು ಕಡ್ಡಾಯವಾಗಿ ಇರಬೇಕೆಂದು ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಪ್ರವೀಣ ಶೆಟ್ಟಿ ಬಣದ ವತಿಯಿಂದ, ಕರ್ನಾಟಕ ರಕ್ಷಣಾ ವೇದಿಕೆ ಧಾರವಾಡ ಜಿಲ್ಲಾಧ್ಯಕ್ಷರಾದ ಮಂಜುನಾಥ ಲೂತಿಮಠ ಇವರ ನೇತೃತ್ವದಲ್ಲಿ, ನಗರದ ತಹಶಿಲ್ದಾರಿಗೆ ಮನವಿ ಸಲ್ಲಿಸುವ ಮೂಲಕ ಬಾರಕೋಲ ಹಿಡಿದುಕೊಂಡು ವಿನೂತನ ಪ್ರತಿಭಟನೆ ನಡೆಸಲಾಯಿತು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚೆನ್ನಮ್ಮ ವೃತ್ತದ ಮೂಲಕ ಪ್ರತಿಭಟನೆ ರ್ಯಾಲಿಯನ್ನು ಕರವೇ ಪದಾಧಿಕಾರಿಗಳು ಹಮ್ಮಿಕೊಂಡಿದ್ದರು. ಈಗಾಗಲೇ ರಾಜ್ಯದಲ್ಲಿ ಸ್ವರೂಪ ಪಡೆದುಕೊಂಡಿರುವ ಕನ್ನಡ ನಾಮಫಲಕದ ವಿಚಾರವು ಈದೀಗ ಹುಬ್ಬಳ್ಳಿಗೂ ಕಾಲಿಟ್ಟಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಆಟೋ ಚಾಲಕರ ಸಂಘ ಸೇರಿದಂತೆ ಬಹುತೇಕ ಕನ್ನಡಪರ ಹೋರಾಟಗಾರರು ರಸ್ತೆಗೆ ಇಳಿದು ವಿನೂತನವಾಗಿ ಧೋತಿ ತೊಟ್ಟು, ಬಾರಕೋಲು ಹಿಡಿದು ಕಡ್ಡಾಯವಾಗಿ ನಾಮಫಲಕದಲ್ಲಿ ಕನ್ನಡ ಭಾಷೆ ಅಳವಡಿಸಬೇಕೆಂದು ಆಗ್ರಹಿಸಿ ಕರವೇ ಪದಾಧಿಕಾರಿಗಳು ಪ್ರತಿಭಟನೆಯನ್ನು ನಡೆಸಿದರು.
‘ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿ ನಾಮಫಲಕ ಹಾಕಿದರೆ ಏನು ತೊಂದರೆ? ಇದು ಬ್ರಿಟನ್ ಅಥವಾ ಇಂಗ್ಲೆಂಡ್ ಅಲ್ಲ’
‘ಕನ್ನಡ ನಾಮಫಲಕ ಹಾಕುವ ಬಗ್ಗೆ ಕಾಯ್ದೆ ಜಾರಿ ಮಾಡುತ್ತೇವೆ. ಅಲ್ಲಿಯವರೆಗೂ ಶಾಂತಿಯುತವಾಗಿರಿ’