‘ಹೊಸ ವರ್ಷದಲ್ಲಿ ಪ್ರಕೃತಿ ನಮಗೆಲ್ಲ ಒಲಿದು ಬರಲಿ. ಸಕಲ ಜೀವಾತ್ಮಗಳಿಗೆ, ಲೇಸನ್ನು ಉಂಟು ಮಾಡಲಿ’

Political News: ಇಂದು ಹೊಸ ವರ್ಷವಾಗಿದ್ದು, ನಾವೆಲ್ಲರೂ 2023ರ ವರ್ಷವನ್ನು ಮುಗಿಸಿ, 2024ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ವೀಡಿಯೋ ಮೂಲಕ, ನಾಡಿನ ಜನತೆಗೆ ಶುಬಾಶಯ ಕೋರಿದ್ದಾರೆ.

ಬದಲಾವಣೆಯ ವರ್ಷದಿಂದ, ಭರವಸೆಯ ವರ್ಷಕ್ಕೆ ಕಾಲಿಡುತ್ತಿರುವ, ನನ್ನ ಪ್ರೀತಿಯ ನಾಡಬಾಂಧವರಿಗೆ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹಳೆಯ ವರ್ಷದಲ್ಲಿ ಮುನಿಸಿಕೊಂಡಿದ್ದ ಪ್ರಕೃತಿ, ಹೊಸ ವರ್ಷದಲ್ಲಿ ನಮಗೆಲ್ಲ ಒಲಿದು ಬರಲಿ. ಸಕಲ ಜೀವಾತ್ಮಗಳಿಗೆ, ಲೇಸನ್ನು ಉಂಟು ಮಾಡಲಿ. 2024ರ ಇಡೀ ವರ್ಷ,  ನಮ್ಮ ಬದುಕು ಸುಖ, ಶಾಂತಿ, ಸಮೃದ್ಧಿಯಿಂದ ಕೂಡಿರಲಿ. ನಿಮ್ಮ ಎಲ್ಲ ಕನಸುಗಳು ನನಸಾಗಲಿ ಎಂದು ಮನದುಂಬಿ ಹಾರೈಸುತ್ತೇನೆ. ನಾವೆಲ್ಲರೂ ಕೂಡಿ, ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಉತ್ಸಾಹ, ಹೊಸ ಭರವಸೆಗಳೊಂದಿಗೆ, ಬರಮಾಡಿಕೊಳ್ಳೋಣ. ಮತ್ತೊಮ್ಮೆ ತಮ್ಮೆಲ್ಲರಿಗೂ ಹೊಸವರ್ಷದ ಶುಭಾಶಯಗಳು, ಧನ್ಯವಾದ ಎಂದು ಸಿಎಂ ಸಿದ್ದರಾಮಯ್ಯ, ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ: ಬಿ.ವೈ.ವಿಜಯೇಂದ್ರ ಆಗ್ರಹ

ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..

About The Author