Political News: ಬೆಂಗಳೂರು ನಿವಾಸಿಗಳ ಸಮಸ್ಯೆಗಳನ್ನು ಅವರ ಮನೆ ಬಾಗಿಲಲ್ಲೇ ಇತ್ಯರ್ಥಪಡಿಸಲು ಕೆಆರ್‌ಪುರಂನ ಅಂಬೇಡ್ಕರ್ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ “ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಬೃಹತ್ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಡಿಕೆಶಿ, ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಗೆ ಬರುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಿದ್ದೇವೆ. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಬಂದಂತಹ ದೂರುಗಳನ್ನು ಪರಿಶೀಲಿಸಲು ಹಲವು ತಾಂತ್ರಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ಎಲ್ಲಾ ಇಲಾಖೆಯ ಸಿಬ್ಬಂದಿ ನಿಮ್ಮ ಸೇವೆಗೆ ಲಭ್ಯರಿರುತ್ತಾರೆ. ನಮ್ಮ ಸರ್ಕಾರದ ಈ ಮಹತ್ವದ ಹೆಜ್ಜೆ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆಯಿದೆ. ಜನರ ಸೇವೆಯೇ ನಮ್ಮ ಧ್ಯೇಯವಾಗಿದ್ದು, ಅದರ ಸಾಕಾರಕ್ಕಾಗಿ ನಾವು ಬದ್ಧರಾಗಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜನರ ಸಮಸ್ಯೆಗೆ ಪರಿಹಾರದ ಆಸರೆ ! “ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಬೃಹತ್ ಜನಸ್ಪಂದನ ಕಾರ್ಯಕ್ರಮದಲ್ಲಿಇಂದು ಹಲವು ಸಮಸ್ಯೆಗಳನ್ನು ಹೊತ್ತು ಬಂದ ಜನರ ಮೊಗದಲ್ಲಿ ಪರಿಹಾರದ ಭರವಸೆ ಕಂಡು ನಮ್ಮ ಮಹತ್ವದ ಹೆಜ್ಜೆಗೊಂದು ಸಾರ್ಥಕತೆ ದೊರೆದಂತಾಯಿತು. ಅವರ ಏಳಿಗೆಯೇ ನಮ್ಮ ಗುರಿಯಾಗಿದ್ದು, ಇದು ನಮ್ಮ ಸರ್ಕಾರದ ಜನಪರ ಕಾಳಜಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. .
“ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ” ಬೃಹತ್ ಜನಸ್ಪಂದನ ಕಾರ್ಯಕ್ರಮದಲ್ಲಿ ಇಂದು ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದು, ಅದಕ್ಕೆ ಸೂಕ್ತ ಪರಿಹಾರ ದೊರಕಿಸಿಕೊಡುವುದು ನಮ್ಮ ದಿಟ್ಟ ಸಂಕಲ್ಪ. ಆ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಡಿಕೆಶಿ ತಿಳಿಸಿದ್ದಾರೆ.
ಬೆಂಗಳೂರು ನಿವಾಸಿಗಳ ಸಮಸ್ಯೆಗಳನ್ನು ಅವರ ಮನೆ ಬಾಗಿಲಲ್ಲೇ ಇತ್ಯರ್ಥಪಡಿಸಲು ಕೆಆರ್‌ಪುರಂನ ಅಂಬೇಡ್ಕರ್ ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ "ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಬೃಹತ್ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದೆ.
ನಾಗರಿಕರು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಈ… pic.twitter.com/SJb7pC7tKq
— DK Shivakumar (@DKShivakumar) January 3, 2024
ಜನರ ಸಮಸ್ಯೆಗೆ ಪರಿಹಾರದ ಆಸರೆ !
"ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ" ಬೃಹತ್ ಜನಸ್ಪಂದನ ಕಾರ್ಯಕ್ರಮದಲ್ಲಿಇಂದು ಹಲವು ಸಮಸ್ಯೆಗಳನ್ನು ಹೊತ್ತು ಬಂದ ಜನರ ಮೊಗದಲ್ಲಿ ಪರಿಹಾರದ ಭರವಸೆ ಕಂಡು ನಮ್ಮ ಮಹತ್ವದ ಹೆಜ್ಜೆಗೊಂದು ಸಾರ್ಥಕತೆ ದೊರೆದಂತಾಯಿತು. ಅವರ ಏಳಿಗೆಯೇ ನಮ್ಮ ಗುರಿಯಾಗಿದ್ದು, ಇದು ನಮ್ಮ ಸರ್ಕಾರದ ಜನಪರ ಕಾಳಜಿ. pic.twitter.com/DLyflHLAgl
— DK Shivakumar (@DKShivakumar) January 3, 2024
ಗೋದ್ರಾ ದುರಂತ ಮರುಕಳಿಸುತ್ತದೆ ಅಂದ್ರೆ ಏನು..? ಹಿಂದೂಗಳನ್ನು ಸುಡ್ತೀರಾ..?: ಬೆಲ್ಲದ್ ಪ್ರಶ್ನೆ..
ನಾವು ರಾಮ ಭಕ್ತರಾಗಿ ಬಂದಿದ್ದೇವೆ,ಆಂಜನೇಯ ಆಗೋಕೆ ಬಿಡಬೇಡಿ: ಪೊಲೀಸರಿಗೆ ಆರ್.ಅಶೋಕ್ ಎಚ್ಚರಿಕೆ




