National News:ಭಾರತದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಕೋರಿಯನ್ ಡ್ರಾಮಾ, ಕೋರಿಯನ್ ಹಾಡುಗಳು, ಬಿಟಿಎಸ್ ಪಾಪ್ ಸಾಂಗ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಕೆಲವರಂತೂ ತಾನು ಮದುವೆಯಾದ್ರೆ ಕೋರಿಯಾದ ಹುಡುಗನನ್ನೇ ವಿವಾಹವಾಗುತ್ತೇನೆ ಅನ್ನೋ ಮಟ್ಟಿಗೆ, ಹುಚ್ಚರಂತಾಗಿದ್ದಾರೆ. ಡಿಪಿ, ಮೊಬೈಲ್ ಕವರ್ ಫೋಟೋ ಕೂಡ ಕೋರಿಯಾ ನಟರದ್ದೇ ಹಾಕಿಕೊಂಡವರು ಸಾಕಷ್ಟು ಜನರಿದ್ದಾರೆ.
ಇನ್ನು ಕೆಲ ಹುಡುಗಿಯರು ಕೋರಿಯನ್ ಡ್ರಾಮಾ ನೋಡದೇ ಇರಲು ಸಾಧ್ಯವೇ ಇಲ್ಲ ಅನ್ನುವಷ್ಟು ಹುಚ್ಚರಾಗಿದ್ದಾರೆ. ಇನ್ನು ತಮಿಳುನಾಡಿನ ಎಂಟನೇ ತರಗತಿ ಹುಡುಗಿಯರು, ಬಿಟಿಎಸ್ ತಂಡವನ್ನು ಭೇಟಿಯಾಗಬೇಕು ಎಂದು, ಮನೆಯಲ್ಲಿ ಹೇಳದೇ, ಕೇಳದೇ ದುಡ್ಡು ಹೊಂದಿಸಿ, ಕೋರಿಯಾಗೆ ಹೊರಟಿದ್ದರು. ಅದೃಷ್ಟವಶಾತ್ ಬುದ್ಧಿ ಬಂದು, ಮತ್ತೆ ಮನೆಗೆ ವಾಪಸ್ ಬಂದಿದ್ದಾರೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ವೆಟ್ರಿಪಾಡಿಯ ಮಕ್ಕಳು ಈ ಕೆಲಸ ಮಾಡಿದ್ದು, ಮೂವರು ಸೇರಿ ತಮ್ಮ ಮನೆಯಿಂದ 14 ಸಾವಿರ ಹೊಂದಿಸಿ, ಕೋರಿಯಾಗೆ ಹೋಗಲು ನಿರ್ಧರಿಸಿದ್ದಾರೆ. ಮನೆಯಲ್ಲಿ ಹೇಳಿದ್ರೆ, ಇದಕ್ಕೆ ಒಪ್ಪಿಗೆ ಕೊಡಲ್ಲ ಅಂತಾ ಗೊತ್ತಿದ್ದು, ಮನೆಯವರಿಗೆ ಶಾಲೆಗೆ ಹೋಗುತ್ತೇವೆ ಎಂದು ಹೇಳಿ, ರೈಲು ಹತ್ತಿ, ಚೈನ್ನೈ ತಲುಪಿದ್ದಾರೆ.
ವಿಶಾಖಪಟ್ಟಣಂ ಬಂದಿರಿನಿಂದ ಕೋರಿಯಾಗೆ ಹೋಗಬಹುದು ಎಂದು ಲೆಕ್ಕ ಹಾಕಿದವರು, ರಾತ್ರಿ ಚೆನ್ನೈನಲ್ಲಿ ರೂಮ್ ಬುಕ್ ಮಾಡಿ ತಂಗಿದ್ದಾರೆ. ಹೀಗಿರುವಾಗ 14 ಸಾವಿರ ಹೊಂದಿಸಿಕೊಂಡು ಹೋಗಿದ್ದವರಿಗೆ, ಅಂದು ರಾತ್ರಿಯೊಳಗೆ 3 ಸಾವಿರ ರೂಪಾಯಿ ಖರ್ಚಾಗಿದೆ. ಬರೀ 11 ಸಾವಿರದಲ್ಲಿ ಕೋರಿಯಾಗೆ ಹೋಗಲಾಗುವುದಿಲ್ಲವೆಂದು, ಆ ವೇಳೆ ಬುದ್ಧಿ ಬಂದಿದ್ದು, ಮರಳಿ ಮನೆಗೆ ಹೋಗೋಣವೆಂದು ನಿರ್ಧರಿಸಿದ್ದಾರೆ.
ಮಕ್ಕಳು ರಾತ್ರಿಯಾದರೂ ಮನೆಗೆ ಬಂದಿಲ್ಲವೆಂದು ಪೋಷಕರು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದು, ಪೊಲೀಸರು ತನಿಖೆ ಆರಂಭಿಸಿ, ಚೆನ್ನೈ ಪೊಲೀಸರಿಗೂ ವಿಷಯ ಮುಟ್ಟಿಸಿದ್ದಾರೆ. ಇತ್ತ ರೈಲು ಹತ್ತಿ, ತಮ್ಮೂರಿಗೆ ಹೋಗಬೇಕೆಂದುಕೊಂಡಿದ್ದ ವಿದ್ಯಾರ್ಥಿನಿಯರು ರೈಲು ತಪ್ಪಿಸಿಕೊಂಡು, ಕಕ್ಕಾಬಿಕ್ಕಿಯಾಾಗಿದ್ದರು. ಆದರೆ ಆಗಲೇ ಅಲ್ಲಿನ ರೈಲ್ವೆ ಸಿಬ್ಬಂದಿಗೆ ವಿಷಯ ಮುಟ್ಟಿದ್ದು, ಆ ಬಗ್ಗೆ ಈರೋಡ್ ಪೊಲೀಸರಿಗೆ ವಿಷಯ ಮುಟ್ಟಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ಮಕ್ಕಳನ್ನು ಒಪ್ಪಿಸಿದ್ದಾರೆ. ಬಳಿಕ ಮಕ್ಕಳು ಸುರಕ್ಷಿತವಾಗಿ ಪೋಷಕರ ಕೈ ಸೇರಿದ್ದಾರೆ.
‘ಹೌದಪ್ಪಾ.. ನೀವ್ ಎಲ್ಲಿ ಅಕ್ಕಿ ಕೊಟ್ಟಿದ್ದೀರಿ..? ಸುಳ್ಳು ಹೇಳೋರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ’
ಮಹಿಳೆಯರ ಸ್ನಾನದ ವೀಡಿಯೋ ಮಾಡುತ್ತಿದ್ದ ಸೈಕೋಗೆ ಸಾರ್ವಜನಿಕರಿಂದ ಸಿಕ್ತು ಬಿಸಿ ಬಿಸಿ ಕಜ್ಜಾಯ
ಸಿದ್ದರಾಮಯ್ಯ ಆಡಳಿತವನ್ನು ಐಸಿಸ್ ಆಡಳಿತಕ್ಕೆ ಹೋಲಿಕೆ: ಜೋಶಿ ವಿರುದ್ಧ ಸಂತೋಷ್ ಲಾಡ್ ಆಕ್ರೋಶ