ಮತ್ತೆ ಬಿಜೆಪಿಗೆ ಬರುತ್ತೀರಾ..?: ಘರ್ ವಾಪ್ಸಿ ಬಗ್ಗೆ ಜಗದೀಶ್ ಶೆಟ್ಟರ್ ಸ್ಪಷ್ಟನೆ..

Hubballi News: ಹುಬ್ಬಳ್ಳಿ: ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆ. ಆದ್ರೆ ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ನನಗೆ ಆಗಿರೋ ಅಪಮಾನವನ್ನು ನಾನು ಇನ್ನೂ ಮರೆತಿಲ್ಲ. ನಾನು ಬಿಜೆಪಿ ತೊರೆದ ನಂತರ ಆಗಿರೋ ಹಾನಿ ಬಗ್ಗೆ ಅವರಿಗೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಕೆಲವರು ನನ್ನನ್ನು ವಾಪಸ್ ಕರೆತರೂ ಪ್ರಯತ್ನದಲ್ಲಿ ಇದ್ದಾರೆ. ದೊಡ್ಡ ಮಟ್ಟದ ಯಾವುದೇ ನಾಯಕರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಹಲವಾರು ನಾಯಕರು ವಾಪಸ್ ತರುವಂತೆ ಒತ್ತಡ ಹಾಕ್ತಿರೋ ಮಾಹಿತಿ ಇದೆ. ಯಾರು ಏನೇ ಪ್ರಯತ್ನ ಮಾಡಿದ್ರು ನಾನು ಬಿಜೆಪಿಗೆ ವಾಪಾಸ್ಸಾಗಲ್ಲ ಎಂದು ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಕುರಿತು ಅನಂತಕುಮಾರ್ ಹೆಗಡೆ ಏಕವಚನದಲ್ಲಿ ವಾಗ್ದಾಳಿ ವಿಚಾರದ ಬಗ್ಗೆ ಶೆಟ್ಟರ್ ಪ್ರತಿಕ್ರಿಯಿಸಿದ್ದು,  ಅನಂತ್ ಕುಮಾರ್ ಹೆಗಡೆ ಹದ್ದು ಮೀರಿ ವರ್ತಿಸುತ್ತಿದ್ದಾರೆ. ಲಕ್ಷ್ಮಣ ರೇಖೆ ದಾಟಿ ಮಾತನಾಡುತ್ತಿದ್ದಾರೆ. ಇಷ್ಟು ದಿನ ನಾಪತ್ತೆಯಾದವರು ಈಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ತುಂಬಾ ಆಕ್ಟಿವ್ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಜಿಲ್ಲೆಗೆ ಬಂದಾಗ ಇವರು ಎಲ್ಲಿ ಹೋಗಿದ್ದರು..? ಈಗ ಬಂದು ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿದ್ದವರ ಮೇಲೆ ಈ ರೀತಿ ಮಾತಾಡೋದು ಸರಿಯಲ್ಲ. ಪ್ರಧಾನಿ ಮೋದಿ ಬಗ್ಗೆ ಈ ರೀತಿ ಮಾತನಾಡಿದರೆ ಸುಮ್ಮನೆ ಇರುತ್ತಾರಾ..? ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.

ಶ್ರೀರಾಮ ಮಂದಿರವನ್ನು ಬಿಜೆಪಿ ದಾಳವನ್ನಾಗಿ ಮಾಡಿಕೊಳ್ಳುತ್ತಿದೆ ಎಂದು ಶೆಟ್ಟರ್ ಆರೋಪಿಸಿದ್ದು,  ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣವಿರಬಾರದು. ಆದರೆ ಬಿಜೆಪಿ ಧರ್ಮದಲ್ಲಿ ರಾಜಕಾರಣವನ್ನು ಬೆರೆಸೋ ಕೆಲಸ ಮಾಡ್ತಿದೆ. ಕಾಂಗ್ರೆಸ್ ಗೆ ಆಹ್ವಾನ ನೀಡಿರುವುದು ದೇವಸ್ಥಾನದ ಟ್ರಸ್ಟ್ ಹೊರತು ಬಿಜೆಪಿ ಅಲ್ಲ. ಕಾಂಗ್ರೆಸ್ ಆಹ್ವಾನ ನಿರಾಕರಿಸಿರೋದ್ರ ಕುರಿತು ಟ್ರಸ್ಟ್ ಬೇಕಿದ್ದರೆ ಮಾತನಾಡಲಿ.
ಅದನ್ನು ಬಿಟ್ಟು ಬಿಜೆಪಿಯವರು ಯಾಕೆ ಮಾತಾಡ್ತಿದ್ದಾರೆ.? ಬಿಜೆಪಿಗೂ ರಾಮ ಮಂದಿರಕ್ಕೂ ಏನು ಸಂಬಂಧ..? ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.

ರಾಮ ಮಂದಿರ ವಿಚಾರ ರಾಜಕಾರಣ ಆಗಲೇಬಾರದು. ನನ್ನನ್ನು ಸೇರಿಯೇ ರಾಮಮಂದಿರ ಆಗಬೇಕು ಎಂಬುದು ನೂರಾರು ಕೋಟಿ ಜನರ ಅಭಿಲಾಷೆ. ಸುಪ್ರೀಂ ಕೋರ್ಟ್ ತೀರ್ಪು ಆಗಿದೆ ಆ ರೀತಿ ಈಗ ನಿರ್ಮಾಣ ಕೂಡ ಆಗ್ತಿದೆ. ಇದು ಎಲ್ಲರಿಗೂ ಖುಷಿ ತರುವ ವಿಚಾರ. ಆಹ್ವಾನ ಮಾಡೋದು ರಾಮಮಂದಿರ ಟ್ರಸ್ಟ್, ಬಿಜೆಪಿ ಅಲ್ಲಾ. ಸೋನಿಯಾ ಗಾಂಧಿ, ಖರ್ಗೆ ಅವರಿಗೆ ಟ್ರಸ್ಟ್ ನವರು ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ. ಸಿಎಂ ಸಿಎಂ ಗೆ ಅಹ್ವಾನ ಕೊಟ್ಟಿಲ್ಲ. ಅದು ಟ್ರಸ್ಟ್ ನವರಿಗೆ ಬಿಟ್ಟಂತಹ ವಿಚಾರ. ಕಾಂಗ್ರೆಸ್ನ ನಾಯಕರು ನಾನು ಹೋಗುವುದಿಲ್ಲ ಅಂದಿದ್ದಾರೆ ಹೊರತು ಬಹಿಷ್ಕಾರ ಅಂದಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ಹೋಗಬೇಡಿ ಎಂದಿಲ್ಲ.
ಅವರು ಹೋಗೋದಿಲ್ಲ ಅಂದಾಗ ನೀವು ಬಲವಂತವಾಗಿ ಯಾಕೆ ಕರ್ಕೊಂಡು ಹೋಗ್ತೀರಿ..? ರಾಮ ಮಂದಿರ ಸ್ಥಾಪನೆ ವಿಚಾರ ಇದೆಯೋ ಅಥವಾ ಕಾಂಗ್ರೆಸ್ ಟೀಕೆ ಮಾಡುವ ವಿಚಾರ ಇದೆಯೋ..?

ರಾಮ ಮಂದಿರ ಉದ್ಘಾಟನೆಗೆ ಬರದೇ ಹೋದರೆ ಹಿಂದು ವಿರೋಧಿ ಅನ್ನೋದು ಸರಿಯಲ್ಲ. ಲೋಕಸಭಾ ಚುನಾವಣೆಗೆ ರಾಮ ಮಂದಿರವನ್ನು ಉಪಯೋಗಿಸಿಕೊಳ್ತಾಯಿದ್ದೀರಿ. ಕಾಂಗ್ರೆಸ್ ನಲ್ಲಿರುವಂತ ಎಷ್ಟೋ ನಾಯಕರು ರಾಮ ಭಕ್ತರಿದ್ದಾರೆ. ಆಯೋಧ್ಯ ಇಶ್ಯೂ ಈಗಿಂದಲ್ಲ 91 ರದ್ದು. ದತ್ತಪೀಠದ ಇಶ್ಯೂ ಕೂಡ ನಡೆದಿದೆ. ಬಿಜೆಪಿಯವರು ಹಿಂದುಗಳ ಬಗ್ಗೆ ಬಹಳ ಮಾತಾಡ್ತಾರೆ. ಆದರೂ ಮ್ಯಾಜಿಕ್ ನಂಬರ್ ದಾಟಿಲ್ಲ. ಕಾಂಗ್ರೆಸ್ನವರು ಹಿಂದೂ ವಿರೋಧಿಯಾಗಿದ್ದರೆ 136 ಸೀಟು ಬರುತ್ತಿದ್ದರಾ. ಧಾರ್ಮಿಕತೆಯನ್ನು ತೆಗೆದುಕೊಂಡು ರಾಜಕಾರಣ ಮಾಡಿದರೆ ಬಹಳ ದಿನ ನಡೆಯಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.

ಆಪರೇಷನ್ ಹಸ್ತದ ಬಗ್ಗೆ ಮಾತನಾಡಿದ ಶೆಟ್ಟರ್‌, ನಾನು ಯಾವತ್ತೂ ಆಪರೇಷನ್ ಮಾಡಿಲ್ಲ. ಅವರಾಗಿ ಕಾಂಗ್ರೆಸ್ ಸೇರ್ತೀನಿ ಅಂದವರಿಗಷ್ಟೇ ಸ್ವಾಗತ ಕೋರಿದ್ದೇನೆ. ಬೆಂಗಳೂರನಲ್ಲಿ ಪಬ್ಲಿಕ್ ಅಕೌಂಟ್ಸ್ ಸಭೆ ಇತ್ತು ಹೀಗಾಗಿ ಹೋಗಿದ್ದೆ. ಕಾಂಗ್ರೆಸ್ ಪಕ್ಷದ ಸಭೆಯಲ್ಲಿಯೂ ಭಾಗಿಯಾಗಿದ್ದೆ. ಯಾವುದೇ ಬಿಜೆಪಿ ನಾಯಕರನ್ನು ಕಾಂಗ್ರೆಸ್ ತರುವಂತ ಕೆಲಸ ನಾನು ಮಾಡಿಲ್ಲ. ತಾವಾಗಿ ಬಂದವರನ್ನು ಸಿಎಂ ಹಾಗೂ ಡಿಸಿಎಂ ಗೆ ಭೇಟಿ ಮಾಡಿಸಿದ್ದೇನೆ. ಕಾಂಗ್ರೆಸ್ ಗೆ ಸೇರಿಸುವಂತಹ ಪ್ರಯತ್ನ ಮಾಡಿದ್ದೇನೆ ಅಷ್ಟೇ. ಆಪರೇಷನ್ ಅಂತಾರಲ್ಲ ಆ ರೀತಿ ನಾನು ಯಾವತ್ತು ಮಾಡಿಲ್ಲ, ಈಗಲೂ ಮಾಡಲ್ಲ. ಶಂಕರ ಪಾಟೀಲ ಮುನಿಯಪ್ಪ ಅವರ ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಅವರೇ ಹೇಳ್ಬೇಕು. ಶಂಕರ ಪಾಟೀಲ ಅವರ ಜೊತೆಗೆ ನಾನು ಈವರೆಗೂ ಅದರ ಬಗ್ಗೆ ಮಾತನಾಡಿಲ್ಲ. ಅದರಲ್ಲಿ ಬಗ್ಗೆ ನಾನಾಗೆ ಏನು ಗೊತ್ತಿಲ್ಲ ಎಂದು ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸರ್ಕಾರದಿಂದ ಅನುದಾನ ತಾರತಮ್ಯ ವಿಚಾರವಾಗಿ ಸಿಟಿ ರವಿ ಹೇಳಿಕೆಗೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ್ದು, ಅದನ್ನು ಬಿಟ್ಟು ಸಿಟಿ ರವಿ ಮಾತನಾಡಿದರೆ ಪ್ರಯೋಜನವಿಲ್ಲ. ಸಿಟಿ ರವಿ ಯೂನಿಯನ್ ಮಿನಿಸ್ಟರ್ ಅಲ್ಲ. ಆತ ಕೇವಲ ಬಿಜೆಪಿ ನಾಯಕ. ಇಲ್ಲಿ ಕೇಂದ್ರದ ಮೂರ್ನಾಲ್ಕು ಜನ ಸಚಿವರು ಇದ್ದಾರೆ. ಯೂನಿಯನ್ ಮಿನಿಸ್ಟರ್, ಎರಡಮೂರು ಜನ ಸ್ಟೇಟ್ ಮಿನಿಸ್ಟರ್ ಇದ್ದಾರೆ. ಫೈನಾನ್ಸ್ ಮಿನಿಸ್ಟರ್ ನಿರ್ಮಲ ಸೀತಾರಾಮನ್ , ಯೂನಿಯನ್ ಮಿನಿಸ್ಟರ್ ರಾಜೀವ್ ಚಂದ್ರಶೇಖರ ಇದ್ದಾರೆ. ಅವರು ಇದಕ್ಕೆ ಉತ್ತರ ಕೊಡಬೇಕು, ಸಿಟಿ ರವಿ ಅಲ್ಲಾ ಎಂದು ಶೆಟ್ಟರ್ ಹೇಳಿದ್ದಾರೆ.

ಈ ವಿಷಯ ಮಾತನಾಡುವಾಗ, ಶೆಟ್ಟರ್, ಪ್ರಹ್ಲಾದ್ ಜೋಶಿ ಹೆಸರನ್ನು ಬಿಟ್ಟು ಮಾತನಾಡಿದ್ದಾರೆ. ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇದೇ ವಿಷಯವನ್ನು ಹಲವಾರು ಬಾರಿ ಎತ್ತಿದ್ದಾರೆ. ಅದಕ್ಕೆ ವಿರೋಧ ಪಕ್ಷದ ನಾಯಕ ಉತ್ತರ ಕೊಟ್ಟಿಲ್ಲ. ಯಾರ್ಯಾರೋ ಏನೇನೋ ಹೇಳ್ತಾ ಹೋಗ್ತಿದ್ದಾರೆ. ಅಂಕಿ ಅಂಶ ಮುಚ್ಚಿಡೋಕೆ ಆಗಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ ಬ್ರಿಟೀಷ್ ರಾಯಭಾರಿ: ಆಕ್ಷೇಪ ವ್ಯಕ್ತಪಡಿಸಿದ ಭಾರತ

ವಿಹೆಚ್‌ಪಿಯಿಂದ ಅಮಿತ್ ಷಾಗೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ

ವಂದೇ ಭಾರತ್ ರೈಲಿನಲ್ಲಿ ಹಳಸಿದ ಆಹಾರ ನೀಡಿದ್ದಾಗಿ ಪ್ರಯಾಣಿಕರ ಆರೋಪ..

About The Author