Saturday, July 5, 2025

Latest Posts

ಕೂಬಿಹಾಳ ಗ್ರಾಮದಲ್ಲಿ ಯೋಗ ತರಬೇತಿ ಪಡೆಯುತ್ತಿರುವ ಅಮೇರಿಕಾದ ಆಲಿಸನ್

- Advertisement -

Hubballi News: ಹುಬ್ಬಳ್ಳಿ : ಸೌತ್ ಅಮೆರಿಕದ ಚೀಲೆ ಪ್ರದೇಶದ ಆಲಿಸನ್ ಅವರು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದ ಬಸವ ಯೋಗ ಶಾಲೆಯಲ್ಲಿ ಯೋಗ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಹಿಂದೆ ಅವರು ಅಷ್ಟಾಂಗ ಯೋಗ ತರಬೇತಿಗಾಗಿ ಮೈಸೂರನ್ನು ಹುಡುಕಿಕೊಂಡು ಬಂದು ನಿರಂತರ ಒಂದು ತಿಂಗಳ ಕಾಲ ಯೋಗ ಅಭ್ಯಾಸವನ್ನು ಮಾಡಿದರು. ಅಲಿಸನ್ ಗೆ ಯೋಗದ ಮೇಲಿನ ವ್ಯಾಮೋಹ ಕಡಿಮೆಯಾಗದೆ, ಪ್ರಸ್ತುತ ಚಿಕ್ಕ ಗ್ರಾಮದಲ್ಲಿ ಯೋಗದ ತರಬೇತಿಯನ್ನು ಕಳೆದ ೧೩ ದಿನಗಳಿಂದ ಪಡೆದುಕೊಳ್ಳುತ್ತಿದ್ದಾರೆ.

ಸನಾತನ ಕಾಲದಿಂದಲೂ ಭಾರತೀಯರು ಯೋಗ ಮತ್ತು ಜ್ಞಾನದಿಂದ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದು, ಜಾಗತೀಕರಣದ ವೇಗದಿಂದ ಆರೋಗ್ಯದಲ್ಲಿ ಅನೇಕ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದು, ಪರಿಹಾರವನ್ನು ಕಂಡುಕೊಳ್ಳುವಲ್ಲಿ ಜಾಗತಿಕವಾಗಿ ಭಾರತ ಮುಂಚೂಣಿಯಲ್ಲಿದೆ ಎಂಬುದನ್ನು ಯೋಗದ ಮುಖಾಂತರ ಪರಿಹಾರವನ್ನು ಕಂಡುಕೊAಡಿದೆ. ಪರಿಣಾಮವಾಗಿ ೨೦೧೫ ಜೂನ್ ೨೧ ವಿಶ್ವ ಯೋಗ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದು, ಅದರಂತೆ ಪ್ರತಿ ವರ್ಷ ಯೋಗ ಆಚರಣೆಗೆ ಜಾಗತಿಕವಾಗಿ ಹೆಚ್ಚು ಹೆಚ್ಚು ಪ್ರಭಾವವನ್ನು ಬೀರುತ್ತಿದೆ. ಹೀಗಾಗಿ ಯೋಗ ಅಭ್ಯಾಸಕ್ಕೆ ಇಲ್ಲಿಗೆ ಬಂದಿದ್ದೇನೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇಂದಿನ ಯುವಕ ಯುವತಿಯರು ಯೋಗಕ್ಕೆ ಮಾರು ಹೋಗುತ್ತಿರುವುದು ಸಂತಸದ ವಿಷಯವಾಗಿದೆ. ಭಾರತೀಯರಾದ ನಾವೆಲ್ಲಾ ಸನಾತನ ಕಾಲದ ಯೋಗವನ್ನು ಇನ್ನಷ್ಟು ಜಾಗತಿಕವಾಗಿ ಪ್ರಚಾರ ಪಡೆದುಕೊಳ್ಳುವಂತೆ ಮಾಡಲು ಶಪಥ ಮಾಡೋಣ. ಯೋಗ ತರಬೇತಿಗಾಗಿ ನಮ್ಮ ಗ್ರಾಮಕ್ಕೆ ಅಮೇರಿಕಾದ ಆಲಿಸನ್ ಅವರು ಬಂದಿರುವುದು ಹೆಮ್ಮೆ ತರುವ ವಿಷಯವಾಗಿದೆ ಎಂದು ಯೋಗ ಶಿಕ್ಷಕರಾದ ಬಸವರಾಜ.ಚ.ಸಂಶಿ ಅವರು ಸಂತಸ ವ್ಯಕ್ತಪಡಿಸಿದರು.

ಶಾನುಬೋಗರ ಮಾತು ಕೇಳಿದ್ದರೆ ನಾನು ಕುರಿ ಕಾಯ್ಕೊಂಡು ಇರಬೇಕಾಗಿತ್ತು: ಸಿಎಂ ಸಿದ್ದರಾಮಯ್ಯ

‘ಪ್ರಧಾನಿಯ ಗಾಢ ನಿದ್ರೆ, ಕರ್ನಾಟಕದ ಅಭಿವೃದ್ಧಿಗದೇ ಪ್ರಮುಖ ತೊಂದ್ರೆ’

‘ನನ್ನ ಕನಸಿನಲ್ಲಿ ಬಂದ ರಾಮ, ನಾನು ಜ.22ರಂದು ಅಯೋಧ್ಯೆಗೆ ಹೋಗುವುದಿಲ್ಲವೆಂದು ಹೇಳಿದ್ದಾನೆ’

- Advertisement -

Latest Posts

Don't Miss