Sunday, December 22, 2024

Latest Posts

‘ದೇವರ ದಯೆಯಿಂದಲೇ ನಾನು ಇಲ್ಲಿವರೆಗೂ ಬಂದಿದ್ದು, ನಾನಂತೂ ಅಯೋಧ್ಯೆ ಕಾರ್ಯಕ್ರಮಕ್ಕೆ ಹೋಗುತ್ತೇನೆ’

- Advertisement -

Sports News: ಯಾರಿಗೆ ಇಷ್ಟ ಇದೆಯೋ ಇಲ್ಲವೋ, ನಾನಂತೂ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಏಕೆಂದರೆ ನಾನು ದೇವರ ದಯೆಯಿಂದಲೇ ಇಲ್ಲಿಯವರೆಗೂ ಬಂದಿದ್ದು ಎಂದು ಮಾಜಿ ಕ್ರಿಕೇಟಿಗ ಮತ್ತು ಸಂಸದ ಹರಭಜನ್ ಸಿಂಗ್ ಹೇಳಿದ್ದಾರೆ.

ಮಾಧ್ಯಮದ ಸಂದರ್ಶನವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಕ್ರಿಕೇಟಿಗ ಹರಭಜನ್ ಸಿಂಗ್, ನನಗೆ ದೇವರ ಮೇಲೆ ನಂಬಿಕೆ ಇದೆ. ನಾನು ದೇವರ ದಯೆಯಿಂದಲೇ ಇಲ್ಲಿಯತನಕ ಬಂದಿದ್ದೇನೆ. ಯಾರಿಗೆ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಲು ಇಷ್ಟವಿಲ್ಲವೋ ಅವರು ಹೋಗುವುದು ಬೇಡ. ಕಾಂಗ್ರೆಸ್‌ನವರಿಗೆ ಈ ಕಾರ್ಯಕ್ರಮಕ್ಕೆ ಹೋಗಲು ಇಷ್ಟವಿಲ್ಲ. ಹಾಗಾಗಿ ಅವರು ಹೋಗು್ತ್ತಿಲ್ಲ. ಅದು ಅವರ ಇಷ್ಟ. ಆದರೆ ನಾನು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

ಶ್ರೀರಾಮ ಎಲ್ಲರಿಗೂ ದೇವರು. ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣವಾಗಿರುವುದು ಮತ್ತು ಅಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯಾಗುತ್ತಿರುವುದು ಖುಷಿಯ ವಿಚಾರ. ಈ ಸಮಾರಂಭ ಒಂದು ಐತಿಹಾಸಿಕ ದಿನವಾಗಿದೆ. ಇದು ನನಗೆ ಖುಷಿಯ ವಿಚಾರ. ಹಾಗಾಗಿ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಹರ್ಭನ್‌ಸಿಂಗ್ ಹೇಳಿದ್ದಾರೆ.

ಇಸ್ಲಾಂ ದೇಶದಲ್ಲೂ ರಾಮನಾಮ ಜಪ: ಕೇಸರಿ ಧ್ವಜ ಹಿಡಿದು ಜೈ ಶ್ರೀರಾಮ್ ಎಂದ ಪಾಕ್ ಮಾಜಿ ಕ್ರಿಕೇಟಿಗ

ಸಾನಿಯಾ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟು ಪಾಕ್ ನಟಿ ಕೈಹಿಡಿದ ಶೊಯೇಬ್ ಮಲ್ಲಿಕ್‌

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಯಾಪ್ಟನ್ ಕೂಲ್ ಧೋನಿಗೆ ಆಹ್ವಾನ

- Advertisement -

Latest Posts

Don't Miss