Monday, December 23, 2024

Latest Posts

ಸಾನಿಯಾ ಮಿರ್ಜಾ-ಶೊಯೇಬ್ ವಿಚ್ಛೇದನಕ್ಕೆ ಕಾರಣವೆನೆಂದು ಹೇಳಿದ ಪಾಕ್ ಮೀಡಿಯಾ

- Advertisement -

International Sports News: ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮಾಜಿ ಪತಿ ಶೊಯೇಬ್ ಮಲ್ಲಿಕ್, ಸಾನಿಯಾಗೆ ವಿಚ್ಛೇದನ ನೀಡಿ, ಇದೀಗ ಮೂರನೇ ಮದುವೆಯಾಗಿದ್ದಾರೆ. ಪಾಕ್ ನಟಿ ಸನಾ ಜೊತೆ ಶೊಯೇಬ್ ಮೂರನೇ ಬಾರಿ ಹಸೆಮಣೆ ಏರಿದ್ದಾರೆ. ಸನಾಗೂ ಕೂಡ ಇದು ಎರಡನೇಯ ಮದುವೆಯಾಗಿದೆ. ಹಾಗಾದ್ರೆ ವಿಚ್ಛೇದನ ಪಡೆಯುವ ಹಂತಕ್ಕೆ ಹೋಗಿರುವ ಇವರ ವೈವಾಹಿಕ ಜೀವನದಲ್ಲಿ ಅಂಥಾದ್ದೇನಾಗಿತ್ತು ಎಂಬುದು ಅವರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು.

ಇದೀಗ ಪಾಕ್ ಮೀಡಿಯಾಗಳು ಯಾಕೆ ಸಾನಿಯಾ ಮತ್ತು ಶೊಯೇಬ್ ವಿಚ್ಛೇದನ ತೆಗೆದುಕೊಂಡಿದ್ದಾರೆಂಬ ಬಗ್ಗೆ ವರದಿ ಮಾಡಿದೆ. ರಿಯಾಲಿಟಿ ಶೋ ಒಂದರಲ್ಲಿ ಸನಾ ಮತ್ತು ಶೊಯೇಬ್‌ ಮೀಟ್ ಆಗಿದ್ದರು. ಬಳಿಕ ಇವರಿಬ್ಬರು ಪ್ರೀತಿಸತೊಡಗಿದ್ದು, ಪದೇ ಪದೇ ಭೇಟಿಯಾಗುತ್ತಲೇ ಇದ್ದರು. ಮೂರು ವರ್ಷದಿಂದ ಇವರಿಬ್ಬರ ನಡುವೆ ಸಂಬಂಧ ಏರ್ಪಟ್ಟಿದ್ದು, ಇದೇ ಕಾರಣಕ್ಕೆ ಶೊಯೇಬ್ ಮತ್ತು ಸಾನಿಯಾ ನಡುವಿನ ಸಂಬಂಧ ಹಳಸಿತ್ತು.

2020ರಲ್ಲಿ ಸನಾ ಜಾವೇದ್ ಎಂಬುವವರನ್ನು ವಿವಾಹವಾಗಿದ್ದರೂ, ಆದರೂ ಕೂಡ ಶೊಯೇಬ್ ಜೊತೆ ಅಫೇರ್ ನಡೆಸುತ್ತಿದ್ದರು. ಈ ವಿಷಯದಿಂದಾಗಿ, ಸನಾ ಕೂಡ ಜಾವೇದ್ ಜೊತೆ ವಿಚ್ಛೇದನ ಪಡೆದಿದ್ದಾರೆ. ಇನ್ನು ರಿಯಾಲಿಟಿ ಶೋಗೆ ಶೊಯೇಬ್‌ರನ್ನು ಅತಿಥಿಯಾಗಿ ಕರೆದಾಗ, ಸನಾ ಬಂದರಷ್ಟೇ ನಾನು ಬರುವೆ ಎಂದು ಶೊಯೇಬ್ ಹೇಳುತ್ತಿದ್ದರಂತೆ. ಇನ್ನು ಶೊಯೇಬ್ ಕುಟುಂಬಸ್ಥರು ಶೊಯೇಬ್ ನಿರ್ಧಾರದ ವಿರುದ್ಧವಿದ್ದು, ಸಾನಿಯಾ ಪರವಾಗಿ ಇದ್ದಾರೆನ್ನಲಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಶೊಯೇಬ್ ಕುಟುಂಬಸ್ಥರು ಯಾರೂ, ಶೊಯೇಬ್ ಸನಾ ಮದುವೆಗೆ ಹಾಜರಿರಲಿಲ್ಲವೆನ್ನಲಾಗಿದೆ.

ಸಾನಿಯಾ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟು ಪಾಕ್ ನಟಿ ಕೈಹಿಡಿದ ಶೊಯೇಬ್ ಮಲ್ಲಿಕ್‌

ಭಾರತೀಯರಿಗೆ ರಾಮಮಂದಿರದ ಶುಭಾಶಯ ತಿಳಿಸಿದ ದಕ್ಷಿಣ ಆಫ್ರಿಕಾ ಕ್ರಿಕೇಟಿಗ ಕೇಶವ್ ಮಹಾರಾಜ್

ರಾಮಮಂದಿರಕ್ಕಾಗಿ ಭಾರತೀಯರಿಗೆ ಶುಭಾಶಯ ತಿಳಿಸಿದ ಕ್ರಿಕೇಟಿಗ ಡೇವಿಡ್ ವಾರ್ನರ್

- Advertisement -

Latest Posts

Don't Miss