Hassan Political News: ಹಾಸನ: ಹಾಸನ ಜಿಲ್ಲೆ, ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆದಿದ್ದು, ಸಭೆಯಲ್ಲಿ ಪುತ್ರ ಎಚ್.ಡಿ.ರೇವಣ್ಣ ಅವರಿಗೆ ಮಾಜಿಪ್ರಧಾನಿ ದೇವೇಗೌಡರು ಬುದ್ಧಿಮಾತು ಹೇಳಿದ್ದಾರೆ.
ನನಗೆ ತುಂಬಾ ಅನುಭವವಿದೆ ರೇವಣ್ಣ ಅವರು ಏಕೆ 2500 ಮತಗಳಿಂದ ಗೆದ್ದರು. ಈ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ನಿನ್ನೆ ಹುಬ್ಬಳಿಗೆ ಹೋಗಿ ರೈಲ್ವೆ ಅಧಿಕಾರಗಳನ್ನು ಭೇಟಿ ಮಾಡಿ ಬಂದಿದ್ದಾರೆ. ರೇವಣ್ಣ ಅವರು ತುಂಬಾ ಕೆಲಸ ಮಾಡ್ತಾರೆ. ಬಹಳ ಕೆಲಸ ಮಾಡಿದ್ದಾರೆ ರೇವಣ್ಣ ಅವರು. ಆದರೆ ಸ್ವಲ್ಪ ಕೋಪ ಜಾಸ್ತಿ ಅವರಿಗೆ. ಕೆಲಸ ಮಾಡುವಾಗ ಯಾರಾದರೂ ಬಂದರೆ ಕೋಪದಲ್ಲಿ ಮಾತನಾಡುವ ಒಂದೇ ಒಂದು ಮನೋಭಾವನೆ ತಿದ್ದಿಕೊಳ್ಳಬೇಕು ಎಂದು ನಿಮ್ಮೆಲ್ಲರ ಮುಂದೆ ನಾನು ತುಂಬಾ ವಿನಯದಿಂದ ಹೇಳ್ತಿನಿ ಎಂದು ದೇವೇಗೌಡರು ಹೇಳಿದ್ದಾರೆ.
ಕೆಲಸ ಎಷ್ಟೇ ಮಾಡಿದರು ಕೋಪ ಇರಬಾರದು. ನಿನ್ನೆ ನನ್ನ ಲೆಟರ್ ತಗೊಂಡು ಝೋನಲ್ ಆಫೀಸರ್ ಭೇಟಿ ಮಾಡಿ ತಡವಾಗಿ ಬಂದರೂ, ನಾನು ಎಲ್ಲಿದ್ದಾರೆ ಅಂತ ಕೇಳಿದೆ. ಹೀಗೆ ತುಂಬಾ ಕೆಲಸ ಮಾಡ್ತಾರೆ ರೇವಣ್ಣ ಅವರು. ಅವರು ಏನೇನ್ ಮಾಡಿದ್ದಾರೆ ಎನ್ನುವುದನ್ನು ಪಟ್ಟಿ ಮಾಡುವುದಾದರೆ. ಬಹುಶಃ ಈ ರಾಜ್ಯದಲ್ಲಿ ಯಾವ ಮಂತ್ರಿಯೂ ಅವರಿಗೆ ಸರಿಸಾಟಿಯಾಗಲೂ ಸಾಧ್ಯವಿಲ್ಲ. ಆದರೆ ದುರಂತ ಮುಂಗೋಪ. ಆ ಕಡೆ ಇರೋ, ಈ ಕಡೆ ಬಾರೋ ಎಂದು ಹೇಳುವ ಮಾತನ್ನು ಸ್ವಲ್ಪ ಮಾರ್ಪಾಡು ಮಾಡಿಕೊಂಡರೆ ತುಂಬಾ ಒಳ್ಳೆಯದು. ಇದೇ ಈ ಸಭೆಯಲ್ಲಿ ನಿಮ್ಮ ಎಲ್ಲರ ಮುಂದೆ ಹೇಳ್ತಿನಿ ಎಂದು ದೇವೇಗೌಡರು ರೇವಣ್ಣ ಅವರಿಗೆ ಬುದ್ಧಿ ಮಾತು ಹೇಳಿದ್ದಾರೆ.
ನಾನು ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ಯಾವ ಕಾಂಗ್ರೆಸ್ ನನ್ನ ಒಂದು ಸಣ್ಣ ತಪ್ಪು ಕಂಡು ಹಿಡಿಯಲು ಆಗಲಿಲ್ಲ. ನನ್ನನ್ನು ತೆಗೆದರು, ಏಕೆ ತೆಗೆದರು, ಏಕೆ ತೆಗೆದರು..? ಕುಮಾರಣ್ಣನನ್ನ ಹದಿಮೂರು ತಿಂಗಳಿಗೆ ಕಾಂಗ್ರೆಸ್ನವರು ಏಕೆ ತೆಗೆದರು..? ಕುಮಾರಸ್ವಾಮಿ ಇಪ್ಪತ್ತೈದು ಸಾವಿರ ಸಾಲಮನ್ನಾ ಮಾಡಿದರು. ಪ್ರಚಾರಕ್ಕೆ ಹೋದ ಕಡೆಯಲೆಲ್ಲಾ ಜನವೋ ಜನ. ಜನತಾ ಜಲಧಾರೆ, ಪಂಚರತ್ನ ಯಾತ್ರೆ ಮಾಡಿ ಹತ್ತು ತಿಂಗಳು ಒದ್ದಾಡಿದರು. ತುಮಕೂರಿನಲ್ಲಿ ನನ್ನನ್ನು ಸೋಲಿಸಿದರು. ಯಾಕೆ ಸೋಲಿಸಿದರು ಹೇಳಲು ಯೋಗ್ಯತೆ ಇದೆಯಾ..? ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಬರಗಾಲವಿದ್ದಾಗ ತಮಿಳುನಾಡಿಗೆ ನೀರು ಬಿಡಲು ಆದೇಶ ಬಂತು. ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟಿತು. ಕಾವೇರಿ ವಿಚಾರವಾಗಿ ರಾಜ್ಯಸಭೆಯಲ್ಲಿ ಕುರ್ಚಿಯಿಂದ ಮೇಲೆದ್ದು ಕೈ ಮುಂದೆ ಮಾಡಿ ಹೋರಾಟ ಮಾಡ್ತಿನಿ. ಜೆಡಿಎಸ್ ದೇವೇಗೌಡರ ಆಸ್ತಿಯಾ ಅಂತಾರೆ. ಅಲ್ಲ ಇದು ದೇವೇಗೌಡರ ಕುಟುಂಬದ ಆಸ್ತಿ ಅಲ್ಲ. ಮುಸ್ಲಿಂರಿಗೆ ಮೀಸಲಾತಿ ಕೊಟ್ಟಿದ್ದೇನೆ. ಮಾಡುವ ಯೋಗ್ಯತೆಯಿಲ್ಲ, ಮಾಡಿದ್ದನ್ನು ಸಹಿಸಿಕೊಳ್ಳುವ ಯೋಗ್ಯತೆಯಿಲ್ಲ. ಏನಾಗಿದೆ ಈ ರಾಜ್ಯ ಇವತ್ತು..? ಯಾವ ಸಿದ್ದರಾಮಯ್ಯ ಅವರ ಬಗ್ಗೆ ಎತ್ತರದಲ್ಲಿ ಯೋಚನೆ ಮಾಡ್ದೆ. ಇವತ್ತು ಸಿದ್ದರಾಮಯ್ಯ ಕಾಲದಲ್ಲಿ ಯಾವ ಪರಿಸ್ಥಿತಿ ಇದೆ. ಇವತ್ತು ರಾಜ್ಯ ಕೆಟ್ಟ ಸ್ಥಿತಿಗೆ ಬಂದಿದೆ. ನಾನು ಅವರ ಬಗ್ಗೆ ಲಘುವಾಗಿ ಮಾತನಾಡಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
ಜನತಾದರ್ಶನದಲ್ಲಿ ಉಪಮುಖ್ಯಮಂತ್ರಿ ಮುಂದೆ ಮಹಿಳೆಯೊಬ್ಬರು ಅಧಿಕಾರ ವಿರುದ್ಧ ದೂರು ಹೇಳ್ತಾರೆ. ಕೂಡಲೇ ಅವರನ್ನು ಸಸ್ಪೆಂಡ್ ಮಾಡಿ ಅಂತಾರೆ. ಈ ದೇಶದಲ್ಲಿ ಕಾಂಗ್ರೆಸ್ ಈ ಸ್ಥಿತಿಗೆ ಬರಬೇಕಾದರೆ ಕಾರಣ ಇವರೇ. ಕುಮಾರಸ್ವಾಮಿ ಸರ್ಕಾರ ಏಕೆ ತೆಗೆದರು. ಹದಿನೆಂಟು ಜನರನ್ನು ಬಾಂಬೆಗೆ ಯಾರು ಕಳುಹಿಸಿದವರು ಹೇಳಲಿ. ಕುಮಾರಸ್ವಾಮಿ ಅವರು ಹದಿನಾಲ್ಕು ತಿಂಗಳು ಸಿಎಂ ಆಗಿದ್ದರು. ಯಾರಿಂದಲಾದರೂ ವರ್ಗಾವಣೆಗೆ ಹಣ ಪಡೆದಿದ್ದರೆ ಹೇಳಲಿ. ನಾನು ಕ್ಷಮೆ ಕೇಳುತ್ತೇನೆ ಎಂದು ದೇವೇಗೌಡರು ಸವಾಲ್ ಹಾಕಿದ್ದಾರೆ.
ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ
ಬಿಜೆಪಿಗೆ ಜಗದೀಶ್ ಶೆಟ್ಟರ್ ಅನಿವಾರ್ಯತೆ ಇಲ್ಲ: ಶಾಸಕ ಮಹೇಶ ಟೆಂಗಿನಕಾಯಿ..!




