- Advertisement -
Budget News: ಬಹುನಿರೀಕ್ಷಿತ 2024ರ ಬಜೆಟ್‌ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ. 6 ಬಾರಿಗೆ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿದ್ದು, ಬಜೆಟ್ ಶುರುವಾಗುವ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ನಿರ್ಮಲಾ ಸೀತಾರಾಮನ್‌ಗೆ ಹಲ್ವಾ ತಿನ್ನಿಸಿ, ಶುಭ ಹಾರೈಸಿದರು. ಇನ್ನು ಈವರೆಗೆ ಬಿಜೆಪಿ ಸರ್ಕಾರ ಯಾವ ಯಾವ ಯೋಜನೆಗಳನ್ನು ಕೊಟ್ಟಿದೆ. ಅದರಿಂದ ಜನರಿಗೆ ಎಷ್ಟೆಲ್ಲ ಪ್ರಯೋಜನವಾಗಿದೆ ಎಂದು ಹಣಕಾಸು ಸಚಿವೆ ವಿವರಿಸಿದರು.
- ದೇಶದಲ್ಲಿ ತ್ರಿಬಲ್ ತಲಾಖ್ ನಿಷೇಧಿಸಲಾಗಿದೆ.
- ಕ್ರೀಡಾವಲಯದಲ್ಲಿ ದೇಶ ಉನ್ನತಿ ಕಾಣುತ್ತಿದೆ.
- ಮಹಿಳೆಯರ ಶಿಕ್ಷಣದ ಪ್ರಮಾಣ ಶೇ.28ರಷ್ಟು ಹೆಚ್ಚಾಗಿದೆ.
- ಮಹಿಳಾಾ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ.
- ದಾಖಲೆ ಅವಧಿಯಲ್ಲಿ ಮೂಲ ಸೌಕರ್ಯ ಜಾರಿ ಮಾಡಲಾಗಿದೆ.
- ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಹೆಚ್ಚಳವಾಗಿದೆ.
- ಜಿಎಸ್‌ಟಿ ಮೂಲಕ ದೇಶದಲ್ಲಿ ಒಂದು ತೆರಿಗೆ ಪದ್ಧತಿ ತರಲಾಗಿದೆ.
- ಸರ್ಕಾರ ಜಿಡಿಪಿ ಕಡೆಗೆ ಆದ್ಯತೆ ನೀಡುತ್ತಿದೆ.
- ಬೆಳೆ ವಿಮೆಯಿಂದ ರೈತರಿಗೆ 4 ಕೋಟಿ ಲಾಭವಾಗಿದೆ.
- ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ.
- ಪಿಎಂ ಸ್ವನಿಧಿ ಯೋಜನೆ ಯಶಸ್ವಿಯಾಗಿದೆ.
- ದೇಶದಲ್ಲಿ ಮಹಿಳಾ ಉದ್ಯಮಿಗಳ ಸಂಖ್ಯೆ ಹೆಚ್ಚಾಗಿದೆ.
- ಉನ್ನತ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ.
- ಮುದ್ರಾ ಯೋಜನೆಯಡಿ 30 ಕೋಟಿ ಮುದ್ರಾ ಸಾಲ.
- ಮಹಿಳಾ ಉದ್ಯಮಿಗಳಿಗೂ ಸಾಲ ನೀಡಲಾಗಿದೆ.
- NEP ಮೂಲಕ ಯುವಕರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
- ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣ ಮಾಡಲಾಗಿದೆ.
- ಸರ್ಕಾರದ ಆವಾಸ್ ಯೋಜನೆಯಡಿ ಬಡವರಿಗೆ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ.
- 33 ಕೋಟಿ ಜನರಿಗೆ ಮುದ್ರಾ ಯೋಜನೆಯಡಿ ಸಾಲ ವಿತರಿಸಲಾಗಿದೆ.
- ಆಶಾ ಕಾರ್ಯಕರ್ತೆಯರಿಗೆ ಆಯುಶ್ಮಾನ್ ಭಾರತ್ ಯೋಜನೆ
- ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಈ ಯೋಜನೆಗಳ ಲಾಭವಾಗಿದೆ.
- ಸರ್ವೈವಲ್ ಕ್ಯಾನ್ಸರ್ ತಡೆಗಟ್ಟಲು ಬಾಲಕಿಯರಿಗೆ ಲಸಿಕೆ ತರಲಾಗಿದೆ.
- ಸಾರ್ವಜನಿಕ ಡಿಜಿಟಲ್ ಮೂಲ ಸೌಕರ್ಯ
- ಮತ್ಸ್ಯ ಸಂಪದಾ ಯೋಜನೆಯಡಿ ಮೀನುಗಾರಿಕೆ ಉದ್ಯಮಕ್ಕೆ ಬೆಂಬಲ
- ಆತ್ಮನಿರ್ಭರ್ ಆಯಿಲ್ ಸೀಡ್ಸ್ ಅಭಿಯಾನ
- ಹೊಸಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಸಮಿತಿ ರಚನೆ
- ಕಿಸಾನ್ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಲಾಭ
- ಮತ್ಸ್ಯ ಯೋಜನೆಯಿಂದ 55 ಲಕ್ಷ ಹೊಸ ಉದ್ಯೋಗ ರಚನೆ
- 1 ಕೋಟಿ ಮಹಿಳೆಯರು ಲಕ್ಷಾಧಿಪತಿ ದೀದಿ ಆಗಲಿದ್ದಾರೆ.
- ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಬದಲಾವಣೆ
- ಮೆಟ್ರೋ, ನಮೋಭಾರತ್ ರೈಲುಗಳಿಗೆ ಹೆಚ್ಚಿನ ಒತ್ತು
- 40 ಸಾವಿರ ರೈಲ್ವೆ ಕೋಚ್ ಬದಲಾವಣೆಗೆ ಸಮ
- ಮಹಾನಗರದಲ್ಲಿ ಮೆಟ್ರೋ ರೈಲುಗಳ ವಿಸ್ತರಣೆ
- ಸಣ್ಣಪುಟ್ಟ ನಗರಗಳಿಗೂ ಮೆಟ್ರೋ ವಿಸ್ತರಿಸಲು ಕ್ರಮ
- ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಆದ್ಯತೆ
- ಪ್ರವಸೋದ್ಯಮ ಕ್ಷೇತ್ರದಲ್ಲಿ ಭಾರೀ ಬದಲಾವಣೆ
- ಲಕ್ಷದ್ವೀಪ ಇದೀಗ ಪ್ರಸಿದ್ಧ ಪ್ರವಾಸಿ ತಾಣ
- ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು
- ವಿಮಾನಯಾನ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ
- ಅಮೃತಕಾಲ, ಕರ್ತವ್ಯ ಕಾಲ ಆರ್ಥಿಕತೆಗೆ ಬೂಸ್ಟ್
- ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ತಯಾರಿ
- ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿರಹಿತ ಸಾಲ
- 7 ಲಕ್ಷ ಆದಾಯ ಇರುವವರಿಗೆ ತೆರಿಗೆ ಇಲ್ಲ
(ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ)
ಸಾವರ್ಕರ್ ಪತ್ನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ನಟಿ, ಬಿಗ್‌ಬಾಸ್ ಚೆಲುವೆ ಅಂಕಿತಾ ಲೋಖಂಡೆ
- Advertisement -