Sunday, August 10, 2025

Latest Posts

ಪಾಕಿಸ್ತಾನದ ವಿರುದ್ಧ ಡೆವೀಸ್ ಕಪ್ ಟೈಗಾಗಿ ಹೊರಟ ಭಾರತ ತಂಡ

- Advertisement -

Sports News: ರಾಮಕುಮಾರ್ ರಾಮನಾಥನ್ ನೇತೃತ್ವದ ಭಾರತ ತಂಡ ಪಾಕ್ ವಿರುದ್ಧ ಫೆಬ್ರವರಿ 3 ಮತ್ತು 4ರಂದು ಇಸ್ಲಾಮಾಬಾದ್‌ನ ಗ್ರಾಸ್ ಕೋರ್ಟ್‌ನಲ್ಲಿ ನಡೆಯಲಿರುವ ಡೆವೀಸ್ ಕಪ್ ವರ್ಲ್ಡ್ ಗ್ರೂಪ್ 1 ಪ್ಲೇ ಆಫ್ ಟೈಗಾಗಿ ಹೊರಟಿದೆ.

ಕೋಚ್ ಜೀಶಾನ್ ಅಲಿ ತರಬೇತಿ ನೀಡಿದ್ದು, ಈ ತಂಡ ದೆಹಲಿಯ ಜಿಮ್‌ಖಾನಾ ಕ್ಲಬ್‌ನ ಗ್ರಾಸ್ ಕೋರ್ಟ್‌ನಲ್ಲಿ ಈ ತಂಡಕ್ಕೆ ಟ್ರೇನಿಂಗ್ ಕೊಟ್ಟಿದ್ದರು. ಇನ್ನು ಅಖಿಲ ಭಾರತ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷ ಅನಿಲ್ ಜೈನ್ ತರಬೇತಿ ಕೇಂದ್ರಕ್ಕೆ ಆಗಮಿಸಿ, ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಗೆದ್ದು ಬರುವಂತೆ ಶುಭ ಹಾರೈಸಿದ್ದಾರೆ.

ಇನ್ನೊಂದು ವಿಶೇಷತೆ ಅಂದ್ರೆ 60 ವರ್ಷಗಳ ನಂತರ ಭಾರತ ತಂಡ ಟೆನ್ನಿಸ್ ಟೂರ್ನ್‌ಮೆಂಟ್‌ಗಾಗಿ ಪಾಕಿಸ್ತಾನಕ್ಕೆ ಕಾಲಿರಿಸಿದೆ. ತಂಡವನ್ನು ಮಾಜಿ ರಾಷ್ಟ್ರೀಯ ಚಾಂಪಿಯನ್ ಆಶುತೋಷ ಸಿಂಗ್ ಕೂಡ ಚೆನ್ನಾಗಿ ತರಬೇತು ಮಾಡಿದ್ದಾರೆನ್ನಲಾಗಿದೆ.

ಪಾಕ್ ತಂಡದಲ್ಲಿ ಐಸಾಮ್ ಉಲ್‌ ಹಕ್ ಖುರೇಷಿ ಮತ್ತು ಅಖಿಲ್ ಖಾನ್‌ ಉತ್ತಮ ಆಟಗಾರರಾಗಿದ್ದಾರೆ. ಇಬ್ಬರೂ ಅಸಾಧಾರಣ ದಾಖಲೆ ಹೊಂದಿದವರರಾಗಿದ್ದಾರೆ. ಜೊತೆಗೆ ಮುಝಮ್ಮಿಲ್ ಮುರ್ತಾಜಾ ಅವರು ಕೂಡ ಉತ್ತಮ ಶ್ರೇಯಾಂಕ ಹೊಂದುವ ನಿರೀಕ್ಷೆ ಇದೆ. ಪಾಕಿಸ್ತಾನ ತಂಡಕ್ಕೆ ಮುಹಮ್ಮದ್ ಅಬೀದ್ ನಾಯಕರಾಗಿದ್ದಾರೆ.

ಎರಡು ದಿನಗಳ ಕಾಲ ನಡೆಯುವ ಈ ಪಂದ್ಯ ನಾಲ್ಕು ಸಿಂಗಲ್ಸ್ ಮತ್ತು ಡಬಲ್ಸ್ ಒಳಗೊಂಡಿದೆ. ಡೆವಿಸ್ ಕಪ್ ಕರ್ತವ್ಯದಿಂದ ನಿವೃತ್ತರಾದ ರೋಹನ್ ಬೋಪಣ್ಣ ಇಲ್ಲದೇ, ಈ ತಂಡ ಈ ಬಾರಿ ಪಂದ್ಯವಾಡಲಿದೆ.

ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ

ಕ್ರಿಕೇಟಿಗ ಮಯಂಕ್ ಅಗರ್ವಾಲ್ ಆಸ್ಪತ್ರೆಗೆ ದಾಖಲು

ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೊಸ ದಾಖಲೆ ಬರೆದ ರೋಹನ್ ಬೋಪಣ್ಣ

- Advertisement -

Latest Posts

Don't Miss