Thursday, October 16, 2025

Latest Posts

ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ.ಕೆ.ಸುರೇಶ್ ಹೇಳಿಕೆ ಖಂಡನೀಯ- ಬಿ ವೈ ವಿಜಯೇಂದ್ರ…

- Advertisement -

Hubli News: ಹುಬ್ಬಳ್ಳಿ:  ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ.ಕೆ.ಸುರೇಶ ಹೇಳಿಕೆ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದ ಅವರಿಗೆ ಬಿಜೆಪಿ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು.

ಬಳಿಕ ಮಾತನಾಡಿದ ಅವರು, ಡಿ.ಕೆ.ಸುರೇಶ ಅವರು ತಮ್ಮ ಜವಾಬ್ದಾರಿ ಅರಿತು ಮಾತನಾಡಬೇಕಾಗುತ್ತದೆ. ಸಂವಿಧಾನದ 75 ನೇ ವರ್ಷದ ರಥಯಾತ್ರೆ ಆಚರಣೆ ಮಾಡಲಾಗುತ್ತಿದೆ. ಡಿ.ಕೆ.ಸುರೇಶ ಅವರು ಈ ರೀತಿ ಮಾತನಾಡುವುದು ಖಂಡನೀಯ. ಒಬ್ಬ ಜನಪ್ರತಿನಿಧಿಗಳು ಈ ರೀತಿ ಮಾತನಾಡಬಾರದು. ಭಾರತದ ಅಖಂಡತೆಯನ್ನ ಕಾಪಾಡುವುದಾಗಿ ಪ್ರಮಾಣ ವಚನ‌ ತೆಗೆದುಕೊಂಡಿರುತ್ತಾರೆ. ಈ ರೀತಿ ರಾಷ್ಟ್ರ ಇಬ್ಬಾಗದ ಮಾತುಗಳನ್ನಾಡುವುದು ಖಂಡನೀಯ ಎಂದರು.

ಯುಪಿಎ ಸರ್ಕಾರ ಇದ್ದಾಗ 81 ಕೋಟಿ‌ ಹಣ ತೆರಿಗೆ ಹಣ ಬಂದಿದೆ. ನಮ್ನ ಸರ್ಕಾರ ಬಂದಮೇಲೆ 2 ಲಕ್ಷ ಕೋಟಿ‌ ತೆರಿಗೆ ಹಣ ರಾಜ್ಯಕ್ಕೆ ಬಂದಿದೆ. ಆದರೂ ಅವರು ಅನುದಾನದಲ್ಲಿ ತಾರತಮ್ಯವಾಗುತ್ತಿದೆ ಅಂತಾ ಆರೋಪ ಮಾಡುತ್ತಿದ್ದಾರೆ ಎಂದರು.

ಗ್ಯಾರಂಟಿ ರದ್ದು ಕುರಿತು ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯ ಆರ್ಥಿಕ‌ ಸಂಕಷ್ಟದಲ್ಲಿ‌ ಸಿಲುಕಿಕೊಂಡಿದೆ ಹಣ ಕ್ರೂಢಿಕರಣ ಮಾಡುವುದಕ್ಕೆ‌ ಸಿಎಂ‌ ಪರದಾಡುತ್ತಿದ್ದಾರೆ. ಕೊಟ್ಟ ಗ್ಯಾರಂಟಿಗಳನ್ನ ರಾಜ್ಯದ ಜನತೆಗೆ ಈಡೇರಿಸಲು ಸರ್ಕಾರಕ್ಕೆ‌ ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಸಕರ ಮೂಲಕ‌ ಗ್ಯಾರಂಟಿ ರದ್ದಿನ ಬಗ್ಗೆ ಹೇಳಿಕೆ ಕೊಡಿಸುತ್ತಿದ್ದಾರೆ ಎಂದರು.

ಧಾರವಾಡ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಬಣ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜ್ಯ ಅಧ್ಯಕ್ಷನಾಗಿ ನಾನು‌ ಎಲ್ಲವನ್ನೂ ಸರಿಪಡಿಸುತ್ತೇನೆ. ಪರೋಕ್ಷವಾಗಿ ಧಾರವಾಡ ಬಿಜೆಪಿಯಲ್ಲಿ ಬಣ ರಾಜಕೀಯ ಇದೆ ಎಂದು ಒಪ್ಪಿಕೊಂಡರು‌. ಆಪರೇಶನ್ ಕಮಲ ವಿಚಾರ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಆಪರೇಶನ್ ನಿಮಗೆ ಹೇಳಿ ಮಾಡಬೇಕಾ..?ಇನ್ನೂ ಕಾಂಗ್ರೆಸ್ ನಿಂದ ಬಹಳ ಜನ ಬಿಜೆಪಿಗೆ ಬರುವವರಿದ್ದಾರೆ. ಲೋಕಸಭೆಯಲ್ಲಿ 28 ಸ್ಥಾನ ಗಳಿಸುವುದೇ ನಮ್ಮ ಗುರಿ ಎಂದರು.‌

‘ಜ್ಞಾನ ವ್ಯಾಪಿ ಎಂಬ ಹೆಸರಿನ ಮಸೀದಿ ಎಲ್ಲಿಯೂ ಇಲ್ಲ. ಔರಂಗಜೇಬ್ ಒಡೆದ ದೇವಸ್ಥಾನ ಅದು.’

2024ರ ಕೇಂದ್ರ ಬಜೆಟ್‌ನಲ್ಲಿ ಲಕ್ಷದ್ವೀಪದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

ತಮ್ಮ ಅಧಿಕಾರಾವಧಿಯ ಯೋಜನೆಗಳ ಸಾಧನೆ ವಿವರಿಸಿದ ಸಚಿವೆ ನಿರ್ಮಲಾ ಸೀತಾರಾಮನ್

- Advertisement -

Latest Posts

Don't Miss