Friday, June 20, 2025

Latest Posts

ಇನ್ನೆಂದೂ ಭಾರತಕ್ಕೆ ಭೇಟಿ ನೀಡುವುದಿಲ್ಲವೆಂದ ಟೆನ್ನಿಸ್ ತಾರೆ.. ಕಾರಣವೇನು..?

- Advertisement -

Sports News: ಭಾರತಕ್ಕೆ ತಾನು ಇನ್ನೆಂದಿಗೂ ಭೇಟಿ ನೀಡುವುದಿಲ್ಲವೆಂದು ಸೆರ್ಬಿಯಾ ಟೆನ್ನಿಸ್ ತಾರೆ ಡೆಜಾನಾ ರಾಡಾನೋವಿಕ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ಬಾರತದ ಟ್ರಾಫಿಕ್, ಆಹಾರ ಮತ್ತು ಸ್ವಚ್ಛತೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಭಾರತದಲ್ಲಿ ಡೆಜೆನಾ ಎರಡು ವಾರ ಉಳಿದುಕೊಂಡಿದ್ದರು. ಇದಾದ ಬಳಿಕ ಭಾರತ ಬಿಟ್ಟು ಹೋಗುವಾಗ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ, ವಿಮಾನ ನಿಲ್ದಾಣದಲ್ಲಿ ಕ್ಲಿಕ್ಕಿಸಿದ ಫೋಟೋ ಹಾಕಿ, ಬಾರತಕ್ಕೆ ವಿದಾಯ ಹೇಳಿದ್ದು, ಇನ್ನೆಂದಿಗೂ ಭಾರತಕ್ಕೆ ಬರುವುದಿಲ್ಲ ಎಂದಿದ್ದಾರೆ.

ಅಲ್ಲದೇ, ಭಾರತದಲ್ಲಿ ಇದ್ದ ವಿದೇಶಿಗರಿಗೆ ಮಾತ್ರ, ನನ್ನ ಮಾತು ಅರ್ಥವಾಗುತ್ತದೆ ಎಂದಿದ್ದಾರೆ. ಟ್ರಾಫಿಕ್ ಬಗ್ಗೆ ವ್ಯಂಗ್ಯವಾಡಿರುವ ಡೆಜೆನಾ, ಭಾರತದ ಡ್ರೈವರ್‌ಗಳು ಅದ್ಭುತವಾಗಿದ್ದಾರೆ. ಅಲ್ಲಿನ ಟ್ರಾಫಿಕ್ ಕೂಡ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ರಶ್ ಗೇಮ್‌ನಂತೆ ಇರುತ್ತದೆ. ಏಕಕಾಲಕ್ಕೆ ಎಲ್ಲರೂ ಹಾರ್ನ್ ಮಾಡುತ್ತಿರುತ್ತಾರೆ. ಇಲ್ಲಿನ ಆಹಾರದಲ್ಲಿ ನನಗೆ ಹುಳು ಸಿಕ್ಕಿತ್ತು, ನನಗೆ ಸಿಕ್ಕ ತಲೆದಿಂಬು ಹಳದಿ ಬಣ್ಣವಾಗಿತ್ತು. ನೀವು ನಮ್ಮ ದೇಶ ಸರ್ಬಿಯಾಗೆ ಬನ್ನಿ. ನಿಮಗೆ ಎಂದಿಗೂ ಇಂಥ ಅನುಭವವಾಗುವುದಿಲ್ಲ ಎಂದಿದ್ದಾರೆ.

ಇನ್ನು ಈಕೆಯ ಈ ಪೋಸ್ಟ್‌ಗೆ ಹಲವರು ಆಕ್ರೋಶ ಹೊರಹಾಕಿದ್ದು, ಕೆಲ ಪೋಸ್ಟ್‌ಗಳು ಅಪ್ಡೇಟ್ ಮಾಡಿ, ಸಮಜಾಯಿಷಿ ಕೊಟ್ಟಿದ್ದಾಳೆ ಈ ಆಟಗಾರ್ತಿ.

ವಿರಾಟ್ ಕೊಹ್ಲಿ ಬಗ್ಗೆ ನಾನು ಕೊಟ್ಟ ಹೇಳಿಕೆ ಸುಳ್ಳು: ಯೂಟರ್ನ್ ಹೊಡೆದ ಎಬಿಡಿ

ಪತ್ನಿಯ ಮಾತು ಕೇಳಿ ನನ್ನನ್ನು ದೂರ ಮಾಡಿದ: ಕ್ರಿಕೇಟಿಗ ರವೀಂದ್ರ ಜಡೇಜಾ ಬಗ್ಗೆ ತಂದೆಯ ಆರೋಪ

ಶೋಯೇಬ್ ಸನಾಗೂ ಡಿವೋರ್ಸ್ ಕೊಟ್ಟು ಇನ್ನೊಬ್ಬಳನ್ನು ಮದುವೆಯಾಗ್ತಾನೆ: ಬಾಂಗ್ಲಾ ಲೇಖಕಿಯ ಭವಿಷ್ಯ

- Advertisement -

Latest Posts

Don't Miss