ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮನೆಯಿಂದ ದುಬಾರಿ ಮೊಬೈಲ್ ಕಳ್ಳತನ

Sports News: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮನೆಯಿಂದ ದುಬಾರಿ ಮೊಬೈಲ್ ಕಳ್ಳತನವಾಗಿದ್ದು, ಮೊಬೈಲ್ ಹುಡುಕಿಕೊಂಡುವಂತೆ ಗಂಗೂಲಿ ಪೊಲೀಸರ ಮೊರೆ ಹೋಗಿದ್ದಾರೆ.

ಕಳ್ಳತನವಾದ ಮೊಬೈಲ್‌ನಲ್ಲಿ ಹಲವು ಮುಖ್ಯವಾದ ಡೇಟಾಗಳಿದ್ದು, ಅದನ್ನು ರಕ್ಷಿಸಬೇಕು ಎಂದು ಸೌರವ್ ಗಂಗೂಲಿ, ಪೊಲೀಸರಲ್ಲಿ ಮನವಿ ಮಾಡಿದ್ದು, ಠಾಕೂರ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ಗಂಗೂಲಿಗೆ ಯಾರ ಮೇಲೆ ಅನುಮಾನವಿದೆ ಎಂದು ಕೇಳಿದಾಗ, ಅವರು, ನಾನು ಶನಿವಾರ ಬೆಳಿಗ್ಗೆ 11 ಗಂಟೆಗೆ ಕೊನೆಯದಾಗಿ ಆ ಮೊಬೈಲ್ ನೋಡಿದ್ದು, ಆ ವೇಳೆ ನಮ್ಮ ಮನೆಗೆ ಪೇಂಟಿಂಗ್ ಮಾಡಲು ಕಾರ್ಮಿಕರು ಬಂದಿದ್ದರು. ಬಳಿಕ ಆ ಮೊಬೈಲ್ ಕಾಣೆಯಾಗಿದೆ ಎಂದಿದ್ದಾರೆ. ಪೊಲೀಸರು ಕೆಲಸಕ್ಕೆ ಬಂದ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಸೆಲೆಬ್ರಿಟಿಗಳಿಗೆ ವಸ್ತು ಕಳ್ಳತನವಾಗಿರುವ ಬಗ್ಗೆ ಚಿಂತೆ ಇರುವುದಿಲ್ಲ. ಆದರೆ ಅದರಲ್ಲಿರುವ ವೈಯಕ್ತಿಕ ವಿಷಯಗಳು ಸೋರಿಕೆಯಾಗಬಾರದು ಎಂಬ ಭಯವಿರುತ್ತದೆ. ಅದೇ ರೀತಿ ಗಂಗೂಲಿ ಕಳೆದುಕೊಂಡ ಮೊಬೈಲ್ ಒಂದೂವರೆ ಲಕ್ಷದ್ದು. ಆ ಮೊತ್ತ ಅವರಿಗೆ ಹೆಚ್ಚಲ್ಲದಿದ್ದರೂ, ಆ ಮೊಬೈಲ್‌ನಲ್ಲಿರುವ ವೈಯಕ್ತಿಕ ಡಾಟಾ ಸೋರಿಯಾಗಿಬಿಡಬಹುದು ಎಂಬ ಚಿಂತೆ ಅವರಿಗಿದೆ.

ಈ ಬಗ್ಗೆ ಮಾತನಾಡಿರುವ ಅವರು, ನನ್ನ ಮೊಬೈಲ್ ಕಳೆದು ಹೋಗಿದೆ ಎಂಬ ಚಿಂತೆಗಿಂತ, ಅದರಲ್ಲಿರುವ ಡಾಟಾ, ಬ್ಯಾಂಕ್ ಅಕೌಂಟ್ ಮಾಹಿತಿ, ಹಲವರ ನಂಬರ್ ಎಲ್ಲಿ ಸೋರಿಕೆಯಾಗುತ್ತದೆಯೋ ಎಂಬ ಚಿಂತೆ ನನಗಿದೆ ಎಂದಿದ್ದಾರೆ. ಅಲ್ಲದೇ ಬೇಗ ಮೊಬೈಲ್ ಹುಡುಕಿ ಕೊಡುವಂತೆ ಪೊಲೀಸರಿಗೆ ಗಂಗೂಲಿ ಮನವಿ ಮಾಡಿದ್ದಾರೆ.

ಇನ್ನೆಂದೂ ಭಾರತಕ್ಕೆ ಭೇಟಿ ನೀಡುವುದಿಲ್ಲವೆಂದ ಟೆನ್ನಿಸ್ ತಾರೆ.. ಕಾರಣವೇನು..?

ವಿರಾಟ್ ಕೊಹ್ಲಿ ಬಗ್ಗೆ ನಾನು ಕೊಟ್ಟ ಹೇಳಿಕೆ ಸುಳ್ಳು: ಯೂಟರ್ನ್ ಹೊಡೆದ ಎಬಿಡಿ

ಪತ್ನಿಯ ಮಾತು ಕೇಳಿ ನನ್ನನ್ನು ದೂರ ಮಾಡಿದ: ಕ್ರಿಕೇಟಿಗ ರವೀಂದ್ರ ಜಡೇಜಾ ಬಗ್ಗೆ ತಂದೆಯ ಆರೋಪ

About The Author