ಹಸೆಮಣೆ ಏರಲು ಸಿದ್ಧರಾದ ನಟಿ ರಾಕುಲ್ ಪ್ರೀತ್ ಸಿಂಗ್: ಗೋವಾದಲ್ಲಿ ಮದುವೆ

Bollywood News: ಬಾಲಿವುಡ್ ಮತ್ತು ತೆಲುಗು ನಟಿ ರಾಕುಲ್ ಪ್ರೀತ್ ಸಿಂಗ್ ಹಸೆಮಣೆ ಏರಲು ಸಿದ್ಧರಾಗಿದ್ದಾರೆ. ಫೆಬ್ರವರಿ 21ಕ್ಕೆ ಪ್ರೀತಿಸಿದ ಹುಡುಗನೊಂದಿಗೆ ರಾಕುಲ್, ಗೋವಾದಲ್ಲಿ ವಿವಾಹವಾಗಲಿದ್ದಾರೆ.

31 ವರ್ಷದ ರಾಕುಲ್ ಕನ್ನಡದಲ್ಲಿ ಗಿಲ್ಲಿ ಸಿನಿಮಾ ಸೇರಿ ಹಲವು ಹಿಂದಿ, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್ ನಟ, ನಿರ್ಮಾಪಕನಾಗಿರುವ ಜಾಕಿ ಭಗ್ನಾನಿ ರಾಕುಲ್ ಅವರ ಬಾಯ್‌ಫ್ರೆಂಡ್ ಆಗಿದ್ದು, ಇವರೊಂದಿಗೆ ರಾಕುಲ್, ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇವರಿಬ್ಬರು ಹಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು ಎಂಬ ಸುದ್ದಿ ಇದೆ.

ರಾಕುಲ್‌ಗೆ ಮದುವೆ ಬಗ್ಗೆ ಕೇಳಿದಾಗಲೆಲ್ಲ, ರಾಕುಲ್ ಮೊದಲು ಕೆಲಸದ ಬಗ್ಗೆ ಮಾತನಾಡುತ್ತೇನೆ. ಮದುವೆ ಮುಂದೊಂದು ದಿನ ಆಗುತ್ತೇನೆ ಎಂದು ಹೇಳಿ, ಮಾತು ಮರೆಸುತ್ತಿದ್ದರು. ಅಲ್ಲದೇ, ಇವರಿಬ್ಬರು ಪ್ರೀತಿಸುತ್ತಿದ್ದಾರೆಂದು ಇವರೆಂದು ಹೇಳಿಕೊಂಡಿರಲಿಲ್ಲ. ಬದಲಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಇವರು ಹಾಕುತ್ತಿದ್ದ ಪೋಸ್ಟ್ ಕಂಡು, ಅಭಿಮಾನಿಗಳೇ ಜಾಕಿ- ರಾಕಿ ಲವ್ವರ್ಸ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಿದ್ದರು. ಇದೀಗ ಸತ್ಯವಾಗಿದೆ.

ಇದೀಗ ರಾಕುಲ್ ಜಾಕಿ ಮದುವೆ ಆಮಂತ್ರಣ ಪತ್ರ ವೈರಲ್ ಆಗಿದ್ದು, ಗೋವಾದಲ್ಲಿ ಮದುವೆ ನಡೆಯಲಿದೆ. ಮದುವೆಗೆ ಆಪ್ತರು, ಸಂಬಂಧಿಕರನ್ನು ಮಾತ್ರ ಆಹ್ವಾನಿಸಲಾಗಿದೆ. ಮುಂಬೈನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.

ಸಂಸತ್‌ನತ್ತ ರಜತ್ ಚಿತ್ತ: ವಿವಿಧ ಮಠದ ಸ್ವಾಮೀಜಿಗಳ ಬೆಂಬಲ

‘ಇಂಥವರಿಗೆ ರಾಮನ ದಯೆಯೂ ಇರಲಾರದು, ಚಾಮುಂಡೇಶ್ವರಿ ಆಶೀರ್ವಾದವೂ ಸಿಗಲಾರದು’

ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್‌: ಸಚಿವ ಕೆ.ಎನ್.ರಾಜಣ್ಣ

About The Author