ಕಟ್ಟಡ ಕಾಮಗಾರಿ ನಿಲ್ಲಿಸಿದ್ದಕ್ಕೆ, ಕೋಲಾರದ ಗ್ರಾಮಸ್ಥರಿಂದ ಪ್ರತಿಭಟನೆ

Kolar News: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೆ ಹೆಚ್ಚು , ಅಲ್ಲಿ ಸೌಕರ್ಯಗಳ ಕೊರತೆಯ ಆಗರ ಒಂದು ಕಡೆಯಾದರೆ ಮತ್ತೊಂದು ಕಡೆ ಶಿಕ್ಷಕರ ಬೇಜವಾಬ್ದಾರಿ, ಇನೊಂದು ಕಡೆಯಲ್ಲಿ ಸರ್ಕಾರಿ ಶಾಲೆಗಳಿಗೆ ರಾಜ್ಯದಲ್ಲಿ ಮುಖ್ಯವಾಗಿ ಕಾಡುತ್ತಿರುವುದು ಕಟ್ಟಡದ ಸಮಸ್ಯೆ, ಕಟ್ಟಡಗಳಿಲ್ಲದೆ ಸರ್ಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂಬ ಕೂಗು ಎಲ್ಲೆಡೆ ಕೇಳಿತ್ತಿದೆ. ಇದಕ್ಕೆ ನೈಜ ಉದಾರಣೆಯಾಗಿ ಗಡಿಬಾಗದ ತೊರಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ. ಶಾಲಾ ಕಟ್ಟಡ ಮಂಜೂರಾಗಿ ಕಾಮಗಾರಿ ಪ್ರಗತಿ ಹಂತದಲ್ಲಿ ಇದ್ದರು ಗ್ರಾಮದ ಕೆಲವೊಬ್ಬರ ಹಿತಾಸಕ್ತಿಗೆ ಕಾಮಗಾರಿ ನಿಲ್ಲಿಸಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತೊರಹಳ್ಳಿ ಗ್ರಾಮದಲ್ಲಿ ಹತ್ತಾರು ವರ್ಷಗಳ ಹಿಂದೆ ನಿರ್ಮಾಣ ವಾಗಿದ್ದ ಶಾಲಾ ಕಟ್ಟಡ ಶಿತಿಲಾವಸ್ಥೆ ತಲುಪಿದ್ದು ಗ್ರಾಮದ 1-5 ನೇ ತರಗತಿಯ ಮಕ್ಕಳು ಸಮುದಾಯ ಭವನದಲ್ಲಿನ ಒಂದೇ ಕೊಟ್ಟಡಿಯಲ್ಲಿ ಶಾಲೆ ನಡೆಸುತ್ತಿದ್ದು ಒಬ್ಬ ಶಿಕ್ಷಕರು ಒಂದು ತರಗತಿಗೆ ಪಾಠ ಮಾಡುತ್ತಿದ್ದರೆ ಮತ್ತೊಂದು ಶಿಕ್ಷಕರು ಸುಮ್ಮನೆ ಕುಳಿತಿರ ಬೇಕಾದ ಪರಸ್ಥಿತಿ ಇದೆ , ಸರ್ಕಾರಿ ಶಾಲೆಯ ಈ ಪರಸ್ಥಿತಿಯನ್ನು ಕಂಡ ಕೆಲ ಪೋಷಕರು ಮಕ್ಕಳನ್ನು ಬೇರೆ ಖಾಸಗಿ ಶಾಲೆಗಳಿಗೆ ಸೇರಿಸಿದರೆ , ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಬೇರೆ ದಾರಿ ಇಲ್ಲದೆ ಅಲ್ಲೇ ಉಳಿಯ ಬೇಕಾದ ಅನಿವಾರ್ಯತೆ ಉಂಟಾಗಿದೆ .

ಶಿಕ್ಷಣ ಇಲಾಖೆ ಕಡೆಯಿಂದ ತೋರಹಳ್ಳಿ ಗ್ರಾಮಕ್ಕೆ ಹೊಸ ಶಾಲಾ ಕಟ್ಟಡ ಮಂಜೂರಾಗಿದ್ದು ಕಟ್ಟಡ ಕಾಮಗಾರಿ ಪ್ರಾರಂಭವಾಗಿದ್ದು ಜಾಗದ ವಿಚಾರವಾಗಿ ಪಕ್ಕದ ಜಮೀನಿನ ಮಾಲಿಕ ನಿರ್ಮಾಣದ ಮೇಲೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಸದ್ಯಕ್ಕೆ ಕಾಮಗಾರಿಯನ್ನು ನಿಲ್ಲಿಸಲಾಗಿದ್ದು , ಗ್ರಾಮಸ್ಥರು ಪ್ರತಿಭಟನೆ ನಡೆಸುವ ಮೂಲಕ ನಮ್ಮ ಮಕ್ಕಳಿಗೆ ಶಾಲೆ ಯನ್ನು ಕರುಣಿಸಿ ಎಂದು ಆಗ್ರಹಿಸಿದ್ದಾರೆ.

ಐದನೇ ತರಗತಿ ಬಾಲಕ ಮಾತನಾಡಿ ಸಮುದಾಯ ಭವನದಲ್ಲಿ ಪಾಠ ಕೇಳುತ್ತಿದ್ದು ಅಲ್ಲಿ ಸಾಕಷ್ಟು ತೊಂದರೆಗಳು ಎದುರಿಸುತ್ತಿದ್ದೇವೆ, ಜತೆಗೆ ಒಂದೇ ಒಂದು ಹಳೆಯ ಶೌಚಾಲಯ ವಿದ್ದು ಶೌಚಕ್ಕೆ ಹೋಗಬೇಕಾದರೆ ಸರತಿ ಸಾಲಿನಲ್ಲಿ ನಿಂತು ಹೋಗ ಬೇಕಾದ ಪರಿಸ್ಥಿತಿ ಇದೆ ಎಂದು ವಿವರಿಸಿದ್ದಾನೆ . ಇನ್ನು ಎಸ್ ಡಿ ಎಮ್ ಸಿ ಅದ್ಯಕ್ಷ ಮುರಳಿ ಮಾತನಾಡಿ ಹೊಸ ಶಾಲಾ ಕಟ್ಟಡ ಮಂಜೂರಾಗಿ ನಿವೇಶನದ ಎಲ್ಲಾ ದಾಖಲಾತಿಗಳು ಸರ್ಕಾರದ ಪರವಾಗಿದ್ದರೂ ಕೆಲವೊಬ್ಬರು ರಾಜಕೀಯ ಹಿತಾಸಕ್ತಿಗಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನ ವಾಗುತ್ತಿಲ್ಲ ಅದ್ದರಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದೇವೆ, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಕೂಡಲೇ ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಮಕ್ಕಳ ವಿದ್ಯಾಬ್ಯಾಸಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ರೈತರ ಮೇಲಿನ ದಾಳಿ ಖಂಡನೀಯ. ರೈತರಿಗೆ ಕನಿಷ್ಠ ಬೆಂಬಲ ಬೆಲೆ, ಇದು ʼಇಂಡಿಯಾʼ ಗ್ಯಾರಂಟಿ: ಡಿಸಿಎಂ ಡಿಕೆಶಿ

ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ್ ಚೌಹಾಣ್ ಬಿಜೆಪಿ ಸೇರ್ಪಡೆ

ಅಯೋಧ್ಯೆ ಶ್ರೀರಾಮನ ದರ್ಶನದ ವೇಳೆ ಭಾವುಕರಾದ ಮಾಜಿ ಸಚಿವ ಸಿ.ಟಿ.ರವಿ

About The Author