ಪತ್ನಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ, ಪತಿ ಆತ್ಮಹತ್ಯೆಗೆ ಶರಣು..!

Chamarajanagara News: ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಫೇಮಸ್ ಆಗಿರುವ ರೀಲ್ಸ್ ಅಂದ್ರೆ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡು. ಹಳೆಯ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿ, ಯಾರೂ ನೋಡಿದರೂ ಇದೇ ರೀಲ್ಸ್ ಮಾಡುತ್ತಿದ್ದಾರೆ. ಆದರೆ ಈ ರೀಲ್ಸ್‌ನಿಂದ ಓರ್ವ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಚಾಮರಾಜನಗರದ ಹನೂರು ತಾಲೂಕಿನ ಪಿ.ಜಿ.ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, 33 ವರ್ಷದ ಕುಮಾರ್ ಎಂಬುವವನ ಪತ್ನಿ, ತನ್ನ ಸಹೋದರಿ ಮತ್ತು ಸೋದರಮಾವನ ಮಗನೊಂದಿಗೆ, ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಳು. ಇದಕ್ಕೆ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ತಾರಕ್ಕೆ ಹೋಗಿ, ಮನನೊಂದು ಕುಮಾರ್ ಆತ್ಮಹತ್ಯೆಗೀಡಾಗಿದ್ದಾನೆ.

ಇನ್ನು ರೀಲ್ಸ್ ಮಾಡಿದ್ದಕ್ಕೇ ಕೋಪ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹಿಂದೆ ಹಲವು ವಿಚಾರಗಳಿದೆ. ಕುಮಾರ್ ಪತ್ನಿ ರೀಲ್ಸ್ ಮಾಡಿ, ಸುಮ್ಮನೆ ಉಳಿದಿರಲಿಲ್ಲ. ಬದಲಾಗಿ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಳು. ಹಾಗಾಗಿ ಇದನ್ನು ನೋಡಿದ್ದ ಕುಮಾರ್ ಸ್ನೇಹಿತರು ಮತ್ತು ಕುಟುಂಬಸ್ಥರು ಕುಮಾರ್‌ನನ್ನು ರೇಗಿಸಿದ್ದರು, ಕೆಲವರು ಇದನ್ನು ಪ್ರಶ್ನಿಸಿ, ಹಂಗಿಸಿದ್ದರು. ಇದರಿಂದ ಬೇಸರಗೊಂಡಿದ್ದ ಕುಮಾರ್ ಪತ್ನಿ ಜೊತೆ ಜಗಳವಾಡಿ, ಕೊನೆಗೆ ಮನನೊಂದು ನೇಣಿಗೆ ಶರಣಾಗಿದ್ದಾನೆ.

ನಾಳೆ ಮಂಡಿಸಲಾಗುವ ಬಜೆಟ್ ಹೊಸ ದಿಕ್ಸೂಚಿ ಆಗಲಿದೆ ಮತ್ತು ಆಶಾದಾಯಕವಾಗಿರಲಿದೆ: DCM

ಅಬುದಾಬಿಯಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟನೆ: ಸಂಸದೆ ಸುಮಲತಾ ಅಂಬರೀಷ್ ಭಾಗಿ

ಇಸ್ಪಿಟ್ ಅಡ್ಡೆ ಮೇಲೆ ಇನ್ಸ್‌ಪೆಕ್ಟರ್ ಮುರುಗೇಶ್ ಚೆನ್ನಣ್ಣನವರ್ ನೇತೃತ್ವದಲ್ಲಿ ದಾಳಿ: 6 ಮಂದಿ ಬಂಧನ

About The Author