Hubballi News: ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ನಾಗರಿಕರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಹುಬ್ಬಳ್ಳಿಯಿಂದ (Hubballi News) ದೇಶದ ಪ್ರಮುಖ ನಗರಕ್ಕೆ ಇದ್ದ ವಿಮಾನ ಸೇವೆಯಲ್ಲಿ (Hubballi To Mumbai Flights) ವ್ಯತ್ಯಯ ಉಂಟಾಗುತ್ತಿದೆ.
ಇಂಡಿಗೋ ಏರ್ಲೈನ್ಸ್ ಫೆಬ್ರವರಿ 15 ರಿಂದ ಹುಬ್ಬಳ್ಳಿ-ಮುಂಬೈ ಏರ್ಬಸ್ A320 ಕ್ರಾಫ್ಟ್ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವುದಾಗಿ ಘೋಷಿಸಿದೆ. ಈ ಕುರಿತು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮುಂಬೈನಲ್ಲಿ ವಿಮಾನ ವಿಳಂಬವೇ ಕಾರಣ
ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರೀ ATC ದಟ್ಟಣೆಯಿಂದಾಗಿ ಹುಬ್ಬಳ್ಳಿ-ಮುಂಬೈ ಏರ್ಬಸ್ A320 ಕ್ರಾಫ್ಟ್ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವುದಾಗಿ ಎಂದು ಇಂಡಿಗೋ ಏರ್ಲೈನ್ಸ್ ಮಾಹಿತಿ ನೀಡಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳು ವಿಳಂಬವಾಗುತ್ತಿದ್ದು, ಪ್ರಯಾಣಿಕರು ಬಹಳ ಹೊತ್ತು ಕಾಯಬೇಕಾಗಿರುವುದರಿಂದ ಅನಾನುಕೂಲತೆ ಎದುರಿಸುತ್ತಿದ್ದಾರೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಮಹತ್ವದ ಸೂಚನೆ
ಈ ಕಾರಣ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ತಮ್ಮ ವಿಮಾನಗಳನ್ನು ಕಡಿಮೆ ಮಾಡಲು ಕೇಳಿದೆ. ಈ ಸೂಚನೆಯ ಅನುಸಾರ ಇಂಡಿಗೋ ತನ್ನ ಮುಂಬೈ-ಹುಬ್ಬಳ್ಳಿ ವಿಮಾನ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಮಾರ್ಚ್ನಲ್ಲಿ ಮತ್ತೆ ವಿಮಾನ ಸೇವೆ ಆರಂಭ
ಅಂದಹಾಗೆ ಇಂಡಿಗೋ ಏರ್ಲೈನ್ಸ್ ತಾತ್ಕಾಲಿಕವಾಗಿ ರದ್ದುಗೊಳಿಸಿದ ಹುಬ್ಬಳ್ಳಿ-ಮುಂಬೈ ಏರ್ಬಸ್ A320 ಕ್ರಾಫ್ಟ್ ಸೇವೆಯನ್ನು ಮಾರ್ಚ್ ಮೊದಲ ವಾರದಿಂದ ಸೇವೆಯನ್ನು ಪುನರಾರಂಭಿಸುವ ನಿರೀಕ್ಷೆಯಿದೆ.
ಅಬುಧಾಬಿಯ ಮೊದಲ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿದ ಬಾಲಿವುಡ್ ದಿಗ್ಗಜರು
ಪಾರ್ಕಿಂಗ್ ವಿಚಾರಕ್ಕಾಗಿ ಗಲಾಟೆ: ಡಾಕ್ಟರ್ಗೆ ಕಪಾಳ ಮೋಕ್ಷ ಮಾಡಿದ ಕಾಂಗ್ರೆಸ್ ಮುಖಂಡ ಅರೀಫ್ ದೇಸಾಯಿ
ಪತ್ನಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಕ್ಕೆ, ಪತಿ ಆತ್ಮಹತ್ಯೆಗೆ ಶರಣು..!




