National News: ಪ್ರತಿದಿನ ಅಯೋಧ್ಯೆ ರಾಮಮಂದಿರವನ್ನು ಒಂದು ಗಂಟೆ ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ. ಇದಕ್ಕೆ ಕಾರಣವೇನು ಎಂದರೆ, ರಾಮಲಲ್ಲಾ 5 ವರ್ಷದ ಮಗು. ಹಾಗಾಗಿ ಅವನಿಗೆ 1 ಗಂಟೆಯ ವಿಶ್ರಾಂತಿಯ ಅಗತ್ಯವಿದೆ ಎಂದು ಆಡಳಿತ ಮಂಡಳಿ ಕಾರಣ ಕೊಟ್ಟಿದೆ.
ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಂದ್ರೆ 4 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದು, ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 6 ಗಂಟೆಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಮತ್ತು ರಾತ್ರಿ ಹತ್ತು ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಆದರೆ ಫೆಬ್ರವರಿ 16ರಿಂದ ಅಯೋಧ್ಯೆ ರಾಮಮಂದಿರವನ್ನು ಮಧ್ಯಾಹ್ನದ ಹೊತ್ತು 1 ಗಂಟೆ ಕ್ಲೋಸ್ ಮಾಡಲಾಗುತ್ತದೆ.
ಈ ಮೊದಲೇ ಹೇಳಿದ ಹಾಗೆ, ಬಾಲಕರಾಮ 5 ವರ್ಷದ ಮಗು. ಅವನಿಗೆ ವಿಶ್ರಾಂತಿಯ ಅಗತ್ಯವಿದೆ. ಹಾಗಾಗಿ ಮಧ್ಯಾಹ್ನ 12.30ರಿಂದ 1.30ರವರೆಗೆ ಬಾಲಕರಾಮ ವಿಶ್ರಾಂತಿ ಪಡೆಯಬೇಕು. ಈ ವೇಳೆಯಲ್ಲಿ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಈಗಲೂ ಕೂಡ ರಾಮನ ದರ್ಶನಕ್ಕಾಗಿ ಪ್ರತಿದಿನ ಲಕ್ಷ ಲಕ್ಷ ಜನರು ದೇವಸ್ಥಾನಕ್ಕೆ ಬರುತ್ತಾರೆ. ಸರತಿ ಸಾಲಲ್ಲಿ ನಿಂತು ಬಾಲಕರಾಮನ ದರ್ಶನ ಪಡೆದು ಹೋಗುತ್ತಿದ್ದಾರೆ. ಪ್ರತಿದಿನ ಬಾಲಕರಾಮನಿಗೆ ಲಕ್ಷ ಲಕ್ಷ ದೇಣಿಗೆ ಬರುತ್ತಿದೆ.
ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ
ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್




