Hubli Political News: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ರಾಮ ಮಂದಿರ ಕಟ್ಟಿರೋ ಸರಿಯಾದ ಜಾಗ ಇಲ್ಲ. ರಾಮ ಮಂದಿರ ಕಟ್ಟಿರೋದಕ್ಕೆ ಬಡತನ ನಿರ್ಮೂಲಣೆ ಆಗಲ್ಲ ಎಂದಿದ್ದಾರೆ.
ರಾಮ ಮಂದಿರ ಕಟ್ಟಿರೋದು ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ. ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ವಿರೋಧ ಇಲ್ಲ. ಆದ್ರೆ ರಾಮಮಂದಿರ ಕಟ್ಟಿರೋ ಜಾಗ ಸರಿ ಇಲ್ಲ. ಸುಪ್ರೀಂ ಕೋರ್ಟ್ ಹೇಳಿರೋ ಜಾಗದಲ್ಲಿ ಇವರು ಮಂದಿರ ಕಟ್ಟಿಲ್ಲ. ಬೇರೆ ಜಾಗದಲ್ಲಿ ಕಟ್ಟಿದ್ದಾರೆ. ಅದು 40 ಪರ್ಸೆಂಟ್ ಕಟ್ಟಿದಾರೆ. ರಾಮ ಮಂದಿರದಿಂದ ನಿಮ್ಮ ನಿರ್ಮೂಲನೆ ಆಗಿದೆಯಾ? ಅದನ್ನ ಹೇಳಿ ಯಾಕೆ ವೋಟ್ ಕೇಳತೀರಿ ಎಂದು ಲಾಡ್ ಪ್ರಶ್ನಿಸಿದ್ದಾರೆ.
ದೇಶದಲ್ಲಿ ಹತ್ತು ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆತಿದೆ. ಹತ್ತು ವರ್ಷದಲ್ಲಿ ಏನೇ ಉದ್ಘಾಟನೆ ಮಾಡಿದ್ರು ಮೋದಿ ಒಬ್ಬರೇ. ದೇಶ ಹಳ್ಳ ಹಿಡಿದು ಹೋಗಿದೆ. ಹತ್ತು ವರ್ಷದಲ್ಲಿ ಬಡವರಿಗೆ ಅನಕೂಲ ಅಗಿರೋ ಒಂದು ಕಾರ್ಯಕ್ರಮ ಇಲ್ಲ. ಹತ್ತು ವರ್ಷದಲ್ಲಿ ಇವರ ಸಾಧನೆ ಏನೂ.? ಪೆಟ್ರೋಲ್ ಡಿಸೇಲ್ ರೇಟ್ ಕಡಿಮೆ ಆಗಿದೆಯಾ.? ಚುನಾವಣೆ ಬಂದಾಗ ಒಂದು ಅಜೆಂಡಾ ಸೆಟ್ ಮಾಡ್ತಾರೆ ಎಂದು ಲಾಡ್ ಅಸಮಾಧಾನ ಹೊರಹಾಕಿದ್ದಾರೆ.
ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವು ಪ್ರಭಾವಿಯಾಗಿದ್ರೆ ಟಿವಿ ಆಫ್ ಮಾಡಿ. ರಾಮ ರಹೀಮ್, ಪಾಕಿಸ್ತಾನ ಅಪಘಾನಿಸ್ತಾನ ಹೆಸರು ಮೂಲಕ ಜನರನ್ನು ಹುಚ್ಚು ಮಾಡ್ತಾರೆ. ಕಳೆದ ಚುನಾವಣೆಯಲ್ಲಿ ಪುಲ್ವಾಮಾ ದಾಳಿ ಬಗ್ಗೆ ಮಾತಾಡಿದ್ರು. ಹಾಗಿದ್ರೆ RDX ಹೇಗೆ ಬಂತು ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ದೇಶದಲ್ಲಿ ಈ ತರಹ ಚರ್ಚೆಗಳೇ ಆಗುತ್ತಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಕೇವಲ ರಾಮ ಮಂದಿರ, ನಿತೀಶ್ ಕುಮಾರ್, ಸೋತ ಕಮಲನಾಥ್ ತಗೊಂಡ್ರಿ. ಇವರಿಂದ ಯಾವ ಹಿಂದೂ ಗೆ ಲಾಭ ಆಗಿಲ್ಲ. ಇದಕ್ಕೆಲ್ಲ ಅಂತ್ಯ ಇದೆ, ದೇವರಿದ್ದಾನೆ. ಬಿಜೆಪಿ ಏನೂ ಮಾಡಿಲ್ಲ. ಗ್ಯಾರಂಟಿಗಳನ್ನು ನೋಡಿ ಮತ ಹಾಕಿದ್ರೆ ಬಿಜೆಪಿಯವರು ಗೆಲ್ಲಲ್ಲ. ಗ್ಯಾರಂಟಿ ತಪ್ಪಿಸೋಕೆ ರಾಮ, ರಹೀಮ್ ಬರ್ತಾರೆ. ಅಭಿವೃದ್ದಿ ವಿಚಾರದ ಮೇಲೆ ಹೋದ್ರೆ ಬಿಜೆಪಿ ಗೆಲ್ಲಲ್ಲ. ಬರೋ 100 ದಿನಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಜನರಿಗೆ ಮೋಸ ಮಾಡಿ ವೋಟ್ ತಗೋತಾರೆ. ಮೋದಿ ಸಾಹೇಬರು ಟಿವಿಯಲ್ಲಿ ಬರಲಾರದೆ ಒಂದು ವೋಟ್ ಕೇಳಿ ಎಂದು ಸಂತೋಷ್ ಲಾಡ್ ಸವಾಲು ಹಾಕಿದ್ದಾರೆ.
ಇನ್ನು ತಾವು ಚುನಾವಣೆಗೆ ಸ್ಪರ್ಧಿಸೋ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, ನನಗೆ ಲೋಕಸಭೆ ಚುನಾವಣೆಗೆ ನಿಲ್ಲೋಕೆ ಮನಸಿಲ್ಲ ಎಂದ ಲಾಡ್.. ಲೋಕಸಭೆ ಚುನಾವಣೆ ಸ್ಪರ್ಧೆ ಮಾಡೋಕೆ ನನಗೆ ಆಸಕ್ತಿ ಇಲ್ಲ ಎಂದಿದ್ದಾರೆ.
ಈ ದೇಶ ಎಲ್ಲರಿಗೂ ಸೇರಿದ್ದು. ಬಿಜೆಪಿಯವರು ದೇಶಕ್ಕೆ ಏನೋ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ತಿದಾರೆ. ಈ ದೇಶಕ್ಕೆ ಬಿಜೆಪಿಯವರು ಏನೂ ಮಾಡಿದ್ದಾರೆ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ದೇಶ ಸಾಲದಲ್ಲಿ ಮುಳುಗಿ ಹೋಗಿದೆ. ಮೋದಿ ಸಾಹೇಬರು ಮುಖ್ಯಮಂತ್ರಿ ಇದ್ದಾಗ ಮಾತಾಡಿರೋ ವಿಡಿಯೋ ಇದೆ ಅದನ್ನು ಬಿಜೆಪಿಯವರು ಕೇಳಬೇಕು. ನಾವು ತೆರಿಗೆ ಕೇಳಿದ್ರೆ ಸುಳ್ಳು ರಾಮಯ್ಯ ಅಂತೀದಾರೆ ಎಂದು ಲಾಡ್ ಕಿಡಿಕಾರಿದ್ದಾರೆ.
ಹೌದು ಸುಳ್ಳ ರಾಮಯ್ಯ ಅಂದ್ರೆ ಹತ್ತು ವರ್ಷದಲ್ಲಿ ಇವರು ಏನೂ ಮಾಡಿದಾರೆ..? ಮೇಕ್ ಇನ್ ಇಂಡಿಯಾ, ರೈತರ ಆದಾಯ ದುಪ್ಪಟ್ಟು, ಭಯೋತ್ಪಾದನೆ ನಿರ್ಮೂಲನೆ ಬಗ್ಗೆ ಮಾತಾಡಿದ್ರು. ಇದೀಗ ನಾವ ಯಾವ ಬಗ್ಗೆ ಚರ್ಚೆ ಮಾಡಿದ್ರು. ಬರೋ 90 ದಿನದಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿ. ನಿರ್ಮಲಾ ಸೀತಾರಾಮನ್ ಮೂರು ಕೋಟಿ ಮನೆ ನಿರ್ಮಾಣ ಅಂದ್ರೆ, ಮೋದಿ ಅವರು ನಾಲ್ಕು ಕೋಟಿ ಮನೆ ನಿರ್ಮಾಣ ಅಂತಾರೆ.. ನರೇಗಾದಲ್ಲಿ ಇವರ ಸಾಧನೆ ಏನು..? ಕಾಂಟ್ರವರ್ಸಿ ಬಗ್ಗೆ ಮಾತಾಡದೆ, ಅಭಿವೃದ್ಧಿ ಬಗ್ಗೆ ಮಾತಾಡಲಿ ಎಂದು ಸಂತೋಷ್ ಲಾಡ್ ಆಗ್ರಹಿಸಿದ್ದಾರೆ.
ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮ: ದರ್ಶನ್ ಸಹಾಯ ನೆನೆದು ಭಾವುಕರಾದ ಸಂಸದೆ ಸುಮಲತಾ ಅಂಬರೀಷ್
ಕರಿಮಣಿ ಮಾಲೀಕ ಹಾಡು ಹಾಡಿ, ತುಳು ಹಾಡಿಗೆ ರೀಲ್ಸ್ ಮಾಡಿದ ಕಿಲಿ ಪೌಲ್..
ಕಿಂಗ್ ಚಾರ್ಲ್ಸ್‌ಗೆ ಕ್ಯಾನ್ಸರ್: ತಂದೆಯ ಆರೋಗ್ಯ ವಿಚಾರಿಸಲು ತೆರಳಿದ ಪ್ರಿನ್ಸ್ ಹ್ಯಾರಿ..