Uttar Pradesh: ಪರೀಕ್ಷೆ ಹತ್ತಿರ ಬರುತ್ತಿಂದಂತೆ, ವಿದ್ಯಾರ್ಥಿಗಳು ಓದಲು ಶುರು ಮಾಡುತ್ತಾರೆ. ಪರೀಕ್ಷೆಯಲ್ಲಿ ಓದಿದ್ದು ನೆನಪಿರಬೇಕು ಎಂದು, ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ನಿದ್ರೆಗೆಟ್ಟು ಓದುತ್ತಾರೆ. ಇನ್ನು ಕೆಲವರು ನಿದ್ರೆ ಬರಬಾರದೆಂದು ಟೀ, ಕಾಫಿ ಸೇವಿಸಿ, ಓದಲು ಶುರು ಮಾಡುತ್ತಾರೆ. ಆದರೆ ಇಲ್ಲೋರ್ವ ವಿದ್ಯಾರ್ಥಿನಿ, ತನಗೆ ರಾತ್ರಿ ಬೇಗ ನಿದ್ರೆ ಬರಬಾರದು. ತಾನು ನಿದ್ರೆಗೆಟ್ಟು ಓದಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ಪಾಸಾಗಬೇಕು ಎಂದು, ಉಗ್ರರು ಬಳಸುವ ಮಾತ್ರೆಯನ್ನು ಸೇವಿಸಿದ್ದಾಳೆ.
ಈ ವಿದ್ಯಾರ್ಥಿನಿಯ ಹೆಸರು ಪ್ರಜಕ್ತಾ. ಈಕೆ ಉತ್ತರಪ್ರೇದಶದವಳು. 10ನೇ ತರಗತಿ ಓದುತ್ತಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಶಾಲೆಯಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಹತ್ತನೇ ಕ್ಲಾಸಿನಲ್ಲಿ ಉತ್ತಮ ಅಂಕ ಪಡೆದರೆ, ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಹೇಳಿರುತ್ತಾರೆ. ಹಾಗಾಗಿ ಈಕೆ ನಿದ್ದೆಗೆಟ್ಟು ಓದಿ, ಉತ್ತಮ ಅಂಕ ಗಳಿಸಲು ನಿರ್ಧರಿಸಿದ್ದಾಳೆ. ಆದರೆ ಈ ಕಾರಣಕ್ಕಾಗಿ ಆಕೆ ತೆಗೆದುಕೊಂಡ ನಿರ್ಧಾರ ಮಾತ್ರ ಭಯಂಕರವಾಗಿತ್ತು.
ಈಕೆ ಸೇವಿಸುತ್ತಿದ್ದ ಮಾತ್ರೆ, ಉಗ್ರರು ಬಲಸುತ್ತಾರೆ. ಒಂದು ಮಾತ್ರೆ ತೆಗೆದುಕೊಂಡರೆ, 40 ಗಂಟೆ ನಿದ್ರೆ ಬರುವುದಿಲ್ಲ. ಈ ಮಾತ್ರೆ ಸೇವಿಸಿ, ಪ್ರಜ್ಞೆತಪ್ಪಿ ಬಿದ್ದು, ವಿದ್ಯಾರ್ಥಿನಿ ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆಯುತ್ತಿದ್ದಾಳೆ. ಅವರ ಈ ಅನಾರೋಗ್ಯ ಕಾರಣವೇನೆಂದು ಕೇಳಿದಾಗ, ವೈದ್ಯರು ಅವಳು ತೆಗೆದುಕೊಂಡ ಮಾತ್ರೆಯ ಬಗ್ಗೆ ಹೇಳಿದ್ದಾರೆ.
ಗುಳಿಗೆ ತೆಗೆದುಕೊಂಡ ವೇಳೆ ಆಕೆಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ನರಗಳು ಊದಿಕೊಂಡಿದೆ. ಹಾಗಾಗಿ ಆಕೆಗೆ ಆಪರೇಷನ್ ಮಾಡಿ, ಆ ಸಮಸ್ಯೆಯಿಂದ ಆಕೆಗೆ ಮುಕ್ತಿ ಕೊಡಿಸಲಾಗಿದೆ. ಮಾಮೂಲಿ ತಲೆಸುತ್ತು ಎಂದು ತಂದೆ ತಾಯಿ ಸುಮ್ಮನಿದ್ದಿದ್ದರೆ, ಇಷ್ಟೊತ್ತಿಗಾಗಲೇ, ಆಕೆಯ ಪ್ರಾಣಪಕ್ಷಿ ಹೊರಟು ಹೋಗಿರುತ್ತಿತ್ತು. ಹಾಗಾಗಿಯೇ ಮಕ್ಕಳ ಚಲನ ವಲನಗಳ ಬಗ್ಗೆ ತಂದೆ ತಾಯಿ ಗಮನ ನೀಡಬೇಕು ಅಂತಾ ಹೇಳೋದು.
ಇನ್ನು ಈ ಮಾತ್ರೆಗಳು ಅಷ್ಟು ಸುಲಭವಾಗಿ ಮೆಡಿಕಲ್‌ನಲ್ಲಿ ಸಿಗುವುದಿಲ್ಲ. ಯಾಕಂದ್ರೆ ಅದು ಕಳ್ಳದಾರಿಯಲ್ಲಿ ಸಾಗಿಸುವ ಮಾತ್ರೆ, ಈ ಮಾತ್ರೆ ಈಕೆಗೆ ಯಾರು ಕೊಟ್ಟರೆಂಬ ಬಗ್ಗೆ ಮಾಹಿತಿ ಇನ್ನೂ ಸಿಗಬೇಕಿದೆ.
ಮೋದಿ ಸಾಹೇಬರು ಟಿವಿಯಲ್ಲಿ ಬರಲಾರದೆ ಒಂದು ವೋಟ್ ಕೇಳಿ: ಪ್ರಧಾನಿಗೆ ಲಾಡ್ ಸವಾಲ್