ಕಲ್ಲಂಗಡಿ ಹಣ್ಣು. ಬೇಸಿಗೆಗಾಲ ಬಂತೆಂದರೆ ಮೊದಲು ನೆನಪಿಗೆ ಬರುವುದೇ ಕಲ್ಲಂಗಡಿ ಹಣ್ಣು. ಬಿಸಿಲಿನ ದಾಹ ತಣಿಸುವಲ್ಲಿ ಕಲ್ಲಂಗಡಿ ಎಷ್ಟು ಸಹಕಾರಿಯೋ ಅಷ್ಟೇ ನಿಮ್ಮ ಆರೋಗ್ಯ ಮತ್ತು ಸೌಂದರ್ಯ ಕಾಪಾಡುವಲ್ಲಿಯೂ ಕಲ್ಲಂಗಡಿ ಹಣ್ಣು ಸಹಕಾರಿಯಾಗಿದೆ. ಹಾಗಾದ್ರೆ ಕಲ್ಲಂಗಡಿ ಹಣ್ಣಿನ ಸೇವನೆಯಿಂದಾಗುವ 10 ಪ್ರಯೋಜನಗಳೇನು ಅನ್ನೋದನ್ನ ನೋಡೋಣ ಬನ್ನಿ.
1.. ಕಲ್ಲಂಗಡಿ ಹಣ್ಣಿನ ಸೇವನೆ ಗರ್ಭಿಣಿಯರಿಗೆ ತುಂಬಾ ಒಳ್ಳೆಯದು, ಕಲ್ಲಂಗಡಿ ಹಣ್ಣಿನ ಸೇವನೆಯಿಂದ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಗರ್ಭಿಣಿಯಾಗಿದ್ದಾಗ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ. ಪದೇ ಪದೇ ವಾಂತಿಯಾಗುವ ಕಾರಣ, ಹೊತ್ತಿಗೆ ಸರಿಯಾಗಿ ಊಟ ಮಾಡದಿರುವ ಕಾರಣ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿರುತ್ತದೆ. ಈ ವೇಳೆ ಕಲ್ಲಂಗಡಿ ಸೇವನೆ ಮಾಡಿ.
2.. ಕಲ್ಲಂಗಡಿ ಹಣ್ಣಿನಲ್ಲಿ ವಿಟಾಮಿನ್ ಎ, ಬಿ6 ಮತ್ತು ಸಿ ಇರುತ್ತದೆ. ಇದಲ್ಲದೇ, ಮಿನರಲ್ಸ್ ಕೂಡ ಹೊಂದಿರುತ್ತದೆ. ಗರ್ಭಾವಸ್ಥೆಯಲ್ಲಿ ಇದನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು.

3.. ತೂಕ ಇಳಿಸಿಕೊಳ್ಳಲು ಇಚ್ಛಿಸುವವರು ಕಲ್ಲಂಗಡಿ ಹಣ್ಣು ಸೇವನೆ ಮಾಡಿ. ಇದರಿಂದ ನೀವು ವ್ಯಾಯಾಮ ಮಾಡುವಾಗ ಶಕ್ತಿ ಹೆಚ್ಚಾಗಿ, ವ್ಯಾಯಾಮದ ಸಮಯ ವಿಸ್ತರಿಸಲು ಅನುಕೂಲವಾಗುತ್ತದೆ.
4.. ಸುಂದರ ತ್ವಚೆಗಾಗಿ ಕಲ್ಲಂಗಡಿ ಹಣ್ಣಿನ ಬಳಕೆ ಮಾಡಬಹುದು. ಚಿಕ್ಕ ತುಂಡು ಕಲ್ಲಂಗಡಿ ಹಣ್ಣನ್ನ ತೆಗೆದುಕೊಂಡು ನಿಮ್ಮ ಮುಖದ ಮೇಲೆ ಮಸಾಜ್ ಮಾಡಿಕೊಳ್ಳಿ. 15 ನಿಮಿಷದ ಬಳಿಕ ಮುಖ ತೊಳೆದುಕೊಂಡರೆ ನಿಮ್ಮ ಮುಖ ಫ್ರೆಶ್ ಆಗಿ ಕಾಣುತ್ತದೆ.
5.. ಚಿಕ್ಕ ತುಂಡು ಕಲ್ಲಂಗಡಿ ಹಣ್ಣನ್ನ ಮ್ಯಾಶ್ ಮಾಡಿಕೊಂಡು, ಕೊಂಚ ನಿಂಬೆರಸ ಮತ್ತು ಕೊಂಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ಹಾಕಿ.15ರಿಂದ 20 ನಿಮಿಷದ ಬಳಿಕ ಮುಖ ತೊಳೆಯಿರಿ.
6.. ಚಿಕ್ಕ ಮಕ್ಕಳಿಗೆ ಕಲ್ಲಂಗಡಿ ಹಣ್ಣನ್ನು ತಿನ್ನಲು ಕೊಡುವುದರಿಂದ ಅಥವಾ ಜ್ಯೂಸ್ ಕುಡಿಸುವುದರಿಂದ ಅವರು ಉಲ್ಲಾಸದಿಂದಿರುತ್ತಾರೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಕಲ್ಲಂಗಡಿ ಸೇವನೆಯಿಂದ ಹೊಟ್ಟೆ ತುಂಬಿರುತ್ತದೆ. ಇದು ಮಕ್ಕಳು ಚಟುವಟಿಕೆಯಿಂದ ಕೂಡಿರುವಂತೆ ಮಾಡುತ್ತದೆ.
7.. ಚಿಕ್ಕ ಮಕ್ಕಳಲ್ಲಿ ಜೀರ್ಣಕ್ರಿಯೆ ಸಮಸ್ಯೆ ಹೆಚ್ಚಾಗಿ ಕಂಡುಬರುವ ಕಾರಣ, ಅವರಿಗೆ ಕಲ್ಲಂಗಡಿ ತಿನ್ನಿಸುವುದು ಉತ್ತಮ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
8.. ನಿಯಮಿತವಾಗಿ ಕಲ್ಲಂಗಡಿ ಹಣ್ಣಿನ ಸೇವನೆ ಮಾಡಿದ್ದಲ್ಲಿ ನಿಮ್ಮ ಕೂದಲಿನ ಬುಡ ಗಟ್ಟಿಗೊಳ್ಳುತ್ತದೆ. ಇದರಿಂದ ಕೂದಲು ಉದರುವ ಸಮಸ್ಯೆ ಕಡಿಮೆಯಾಗಿ, ಕೂದಲು ದಟ್ಟವಾಗಿ ಬೆಳೆಯುತ್ತದೆ.
9.. ಮೂಳೆಯನ್ನ ಗಟ್ಟಿಗೊಳಿಸುವುದರಲ್ಲಿ ಕಲ್ಲಂಗಡಿ ಹಣ್ಣು ಪ್ರಮುಖ ಪಾತ್ರ ನಿರ್ವಹಿಸುತ್ತೆ. ಏಂಕೆದರೆ ಕಲ್ಲಂಗಡಿ ಹಣ್ಣು ವಿಟಾಮಿನ್, ಮಿನರಲ್ಸ್, ಕ್ಯಾಲ್ಶಿಯಮ್ ಅಂಶ ಹೊಂದಿದೆ.
10.. ಮಧ್ಯಾಹ್ನದ ವೇಳೆ ಕಲ್ಲಂಗಡಿ ಸೇವನೆ ಉತ್ತಮವಾಗಿದ್ದು ರಾತ್ರಿ ಕಲ್ಲಂಗಡಿ ಹಣ್ಣು ಸೇವಿಸದಿರಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ