ಹಿಗ್ಗುತ್ತಿದೆ ಕೇಂದ್ರ ಬಜೆಟ್ ಗಾತ್ರ, ಕುಗ್ಗುತ್ತಿದೆ ರಾಜ್ಯದ ಪಾಲು: ಸಿಎಂ ಸಿದ್ದರಾಮಯ್ಯ

Political News: ಸಿಎಂ ಸಿದ್ದರಾಮಯ್ಯ ಕೇಂದ್ರ ಬಜೆಟ್ ಬಗ್ಗೆ ಟ್ವೀಟ್ ಮಾಡಿದ್ದು, ಕೇಂದ್ರ ಬಜೆಟ್‌ನ ಗಾತ್ರ ದೊಡ್ಡದಾಗಿದೆ, ರಾಜ್ಯಕ್ಕೆ ಸಿಗಬೇಕಾದ ಅಮಿದಾನದ ಗಾತ್ರ ಚಿಕ್ಕದಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

2014ರ ಕೇಂದ್ರ ಬಜೆಟ್‌ಗೆ ಹೋಲಿಸಿದರೆ 2024ನೇ ಸಾಲಿನ ಬಜೆಟ್ ಗಾತ್ರ ಮತ್ತು ಕರ್ನಾಟಕದಿಂದ ಸಂಗ್ರಹವಾಗುವ ತೆರಿಗೆ ಎರಡು ಪಟ್ಟು ಹೆಚ್ಚಾಗಿದೆ. ಆದರೆ ರಾಜ್ಯದ ಪಾಲಿನ ಅನುದಾನ ಹೆಚ್ಚಾಗಿರುವುದು ಬಿಡಿಗಾಸು ಮಾತ್ರ. ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಒಕ್ಕೂಟ ವ್ಯವಸ್ಥೆಗೆ ಮಾರಕವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಅವರೇ, ನೀವು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಒಕ್ಕೂಟ ವ್ಯವಸ್ಥೆಯ ವಿರೋಧಿಯಾಗಿದ್ದರೆ? ಅಂದು ನೀವು ಗುಜರಾತಿಗೆ ಅನ್ಯಾಯವಾಗುತ್ತಿದೆ ಎಂದು ಕೇಂದ್ರದ ವಿರುದ್ಧ ಮಾಡಿದ ಟೀಕೆಗಳನ್ನು ಇಷ್ಟು ಬೇಗ ಮರೆತುಬಿಟ್ಟಿರೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
https://twitter.com/siddaramaiah/status/1760309908141117461

ಜೂನಿಯರ್ ವಿರಾಟ್ ಆಗಮನ: ಅಕಾಯ್ ಎಂದು ನಾಮಕರಣ

ದಂತ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಸಾವನ್ನಪ್ಪಿದ ಮಧುಮಗ..

ಕ್ಲಾಸಿನಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್

About The Author