Hassan News: ಹಾಸನ: ಚಾಲಕನ ನಿಯಂತ್ರಣ ತಪ್ಪಿ ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಘಟನೆ ಹಾಸನದಲ್ಲಿ ನಡೆದಿದೆ. ಸ್ಥಳದಲ್ಲೇ ಟ್ರ್ಯಾಕ್ಟರ್ ಚಾಲಕ ಬಿ.ಪಿ.ಓಂಕಾರ್(55) ಮೃತಪಟ್ಟಿದ್ದಾನೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೆಬೀಡು ಕೆರೆ ಏರಿ ಮೇಲೆ ಘಟನೆ ನಡೆದಿದ್ದು, ಸುಮಾರು ಐವತ್ತು ಅಡಿ ಆಳಕ್ಕೆ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್ ಅಡಿ ಸಿಲುಕಿ, ಓಂಕಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿಸ ಪರಿಶೀಲನೆ ನಡೆಸಿದ್ದು, ಹಳೆಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ರಾಜ್ಯದಲ್ಲಿ ಹುಕ್ಕಾಬಾರ್ ನಿಷೇಧ, ಸಿಗರೇಟ್ ನಿಷೇಧ ವಯೋಮಿತಿ ಹೆಚ್ಚಳ: ಸಚಿವ ಗುಂಡೂರಾವ್




