Hassan News: ಹಾಸನ :ಎರಡುವರೆ ತಿಂಗಳ ಬಳಿಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಎರಡುವರೆ ತಿಂಗಳ ಹಿಂದೆ ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿ ಹೊಡೆದು, ಭವಾನಿ ಆ ವ್ಯಕ್ತಿಗೆ ಬೈದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಟ್ರೋಲ್ ಆಗಿ, ಭವಾನಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಅದಾದ ಬಳಿಕ ಭವಾನಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಕಾರಣ ಅವರು ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ನಿನ್ನೆ ನಡೆದ ಹೊಳೆನರಸೀಪುರ ತಾಲ್ಲೂಕಿನ, ಮಾವಿನಕೆರೆಯ ವೆಂಕಟರಮಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭವಾನಿ ರೇವಣ್ಣ ಭಾಗಿಯಾಗಿದ್ದಾರೆ. ಪತಿ ಎಚ್.ಡಿ.ರೇವಣ್ಣ ಪುತ್ರರಾದ ಸಂಸದ ಪ್ರಜ್ವಲ್ ಹಾಗೂ ಎಂಎಲ್‌ಸಿ ಸೂರಜ್ ಜೊತೆ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯದಲ್ಲಿ ಭವಾನಿ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನಂತರ ಹೊಳೆನರಸೀಪುರ ತಾಲ್ಲೂಕಿನ, ಕಲ್ಲೇನಹಳ್ಳಿ ಗ್ರಾಮದಲ್ಲಿ ಶ್ರೀರಾಮ ದೇವಸ್ಥಾನ ಹಾಗೂ ಗಣೇಶ ಪುನರ್ ಜೀರ್ಣೋದ್ದಾರ ಮತ್ತು ನೂತನ ವಿಗ್ರಹ ಪ್ರತಿಷ್ಠಾಪನೆ, ಕುಂಭಾಬಿಷೇಕದಲ್ಲಿ ಭವಾನಿ ರೇವಣ್ಣ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಭವಾನಿ ರೇವಣ್ಣ, ನಿಮ್ಮನ್ನೆಲ್ಲಾ ನೋಡಿ ಬಹಳ ಖುಷಿಯಾಯಿತು. ದೇವಸ್ಥಾನಕ್ಕೆ ಬಂದು ದೇವರ ನೋಡಿ ಮಂಗಳಾರತಿ ತೆಗೆದುಕೊಳ್ಳುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ಕಳೆದ ಒಂದು ತಿಂಗಳ ಹಿಂದೆ ಎರಡು ಮಂಡಿಗಳು ಸರ್ಜರಿ ಆಗಿದೆ. ಕಳೆದ ಭಾರಿ ವಿಧಾನಸಭಾ ಚುನಾವಣೆಯಲ್ಲಿ ಜಾಸ್ತಿ ಓಡಾಟ ಆಯ್ತು. ರೇವಣ್ಣ ಅವರ ಚುನಾವಣೆ ಕಳೆಯಲಿ ಎಂದು ಸುಮ್ಮನಿದ್ದೆ. ಹಾಗಾಗಿ ಹೊಳೆನರಸೀಪುರದಲ್ಲೂ ನಾನು ಕಾಣಿಸಿಕೊಂಡಿಲ್ಲ. ಎಲ್ಲಿ ಮೇಡಂ ನಾಪತ್ತೆಯಾಗಿ ಹೋದ್ರಾ ಅಂದ್ರು. ಇನ್ನೂ ಕೆಲವರು ಅವರ ಅನುಕೂಲಕ್ಕೆ ತಕ್ಕಂತೆ ಬೇರೆಯದನ್ನು ಹುಟ್ಟಾಕಿಕೊಂಡರು. ಏನೋ ಖಾಯಿಲೆ ಬಂದಿದೆ ಹಾಗೇ ಹೀಗೆ ಅಂತಾ.
ಆ ದೇವರ ಅನುಗ್ರಹದಿಂದ ನಾನು ಆರೋಗ್ಯವಾಗಿದ್ದೇನೆ. ಇನ್ನೂ ಇಪ್ಪತ್ತು ದಿನ ರೆಸ್ಟ್ ಮಾಡಿದ್ರೆ ಸಾಕು, ಬೇರೆ ಏನು ಇಲ್ಲ. ಇನ್ನೊಂದು ಹದಿನೈದು, ಇಪ್ಪತ್ತು ದಿವಸ. ಪ್ರಜ್ವಲ್‌ರೇವಣ್ಣ ಅವರ ಲೋಕಸಭೆ ಚುನಾವಣೆ ಬರುತ್ತೆ. ನೀವೇ ಕರ್ಕಂಡು ಹೋಗಿ ಪ್ರಚಾರಕ್ಕೆ ನಾನು ಬರ್ತಿನಿ. ನಿಮ್ಮ ಜೊತೆ ಸರಿಸಮನಾಗಿ ಓಡಾಡಿಕೊಂಡು ಕೆಲಸ ಮಾಡ್ತಿನಿ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಆಕ್ರೋಶ ಹೊರಹಾಕಿದ ಬಾಲಿವುಡ್ ಸೆಲೆಬ್ರಿಟಿಗಳು..
ತ್ರಿಷಾ ವಿರುದ್ಧ 25 ಲಕ್ಷ ಪಡೆದ ಆರೋಪ ಹಾಕಿದ್ದ ಮುಖಂಡನ ವಿರುದ್ಧ ಕಾನೂನು ಸಮರ..