Political News: ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಸಚಿವ ಸಿ.ಟಿ.ರವಿ ಕಾಂಗ್ರೆಸ್ ಪಕ್ಷದ ಅವನತಿಗೆ ಕಾರಣವೇನು ಅನ್ನೋ ಬಗ್ಗೆ ಮಾತನಾಡಿದ್ದಾರೆ.
ಯಾವಾಗ ಕಾಂಗ್ರೆಸ್ ತನ್ನ ವಿಚಾರವನ್ನು ಕಳೆದುಕೊಳ್ಳುತ್ತ ಬಂತೋ, ಆವಾಗಲೇ ಕಾಂಗ್ರೆಸ್ ಅವನತಿ ಆರಂಭವಾಯಿತು. ಕಾಂಗ್ರೆಸ್ ನಿರಂತರ ಹಗರಣ ಮಾಡಿತು. ಒಂದು ಕುಟುಂಬದ ಕಪಿಮುಷ್ಠಿಯಿಂದ ಹೊರಗೆ ಬರಬಾರದು, ನಮ್ಮ ಕಪಿಮುಷ್ಠಿಯಲ್ಲೇ ಇಟ್ಟುಕೊಳ್ಳಬೇಕು ಅನ್ನೋದು ಕಾಂಗ್ರೆಸ್ ವಿಚಾರ ಎಂದು ಸಿ.ಟಿ.ರವಿ ಹೇಳಿದ್ದಾರೆ.
ಇನ್ನು ಕಾಂಗ್ರೆಸ್‌ನವರನ್ನು ಭಯಪಡಿಸಿ, ಬಿಜೆಪಿ ಸೇರಿಸಿಕೊಳ್ಳಲಾಗುತ್ತಿದೆ ಎಂದು ಖರ್ಗೆಯವರು ಮಾಡಿದ ಆರೋಪಕ್ಕೆ ಉತ್ತರಿಸಿದ ಸಿ.ಟಿ. ರವಿ, ಹಂಗೆ ಭಯಪಡಿಸಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರಿಸಿಕೊಳ್ಳಬೇಕು ಅಂದ್ರೆ ಖರ್ಗೆಯವರನ್ನೇ ಭಯಪಡಿಸಲು ಬರೋದಿಲ್ವಾ..? ಯಾರನ್ನೂ ಹೆದರಿಸಿ ಬಿಜೆಪಿಗೆ ಕರೆಸಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಬಿಜೆಪಿಯನ್ನು ಒಪ್ಪಿಯೇ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಅಲ್ಲದೇ ಖರ್ಗೆಯವರು ಹಿರಿಯ ರಾಜಕಾರಣಿ ಅವರ ಹಿರಿತನಕ್ಕೆ ನಾವು ಗೌರವ ಕೊಡುತ್ತೇವೆ. ಅವರು ಅವರದ್ದೇ ಆದ ಪಕ್ಷದ ವಿಚಾರಕ್ಕೆ ಕಟಿಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಭಯಗೊಳ್ಳುವ ಸಂಗತಿಗಳು ಅವರಲ್ಲಿದ್ದರೆ, ಭಯಪಡಿಸಬಹುದು. ಇಲ್ಲವಾದಲ್ಲಿ ಯಾಕೆ ಭಯಗೊಳಿಸಲಾಗುತ್ತದೆ ಎಂದು ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ನವಲಗುಂದ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯಗೆ ದತ್ತು ನೀಡ್ತೇವೆ- ಶಾಸಕ ಕೋನರೆಡ್ಡಿ
ಯಾವ ನೈತಿಕತೆಯಿಂದ ಇನ್ನೂ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿದ್ದೀರಿ?: ಪ್ರೀತಂಗೌಡ