National Political News: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಏರುಪೇರು ಉಂಟಾಗಿದೆ. ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವರು ರಾಜೀನಾಮೆ ನೀಡುವ ಯೋಚನೆಯಲ್ಲಿದ್ದಾರೆ. ಬಿಜೆಪಿ ಕಾಂಗ್ರೆಸ್‌ನ ಹಲವು ನಾಯಕರನ್ನು ತನ್ನತ್ತ ಸೆಳೆದು, ಆಪರೇಷನ್ ಕಮಲ ಮಾಡಿ, ಹಿಮಾಚಲದಲ್ಲಿ ಸರ್ಕಾರ ರಚಿಸಲು ಕಾದು ಕುಳಿತಿದೆ. ಹಾಗಾಗಿ ಕಾಂಗ್ರೆಸ್ ಹೈ ಕಮಾಂಡ್ ಇದಕ್ಕೇನಿದ್ದರೂ, ನಮ್ಮ ಡಿಸಿಎಂ ಡಿ.ಕೆ.ಶಿವಕುಮಾರ್ ಸರಿ ಎಂದು, ಅವರನ್ನು ಹಿಮಾಚಲ ಪ್ರದೇಶಕ್ಕೆ ಕಳುಹಿಸಿದ್ದಾರೆ.
ಕಳೆದ ಬಾರಿ ಗುಜರಾತ್ ಚುನಾವಣೆ ವೇಳೆ, ಬಿಜೆಪಿಗರು ಆಪರೇಷನ್ ಕಮಲ ನಡೆಸಲು ಪ್ರಯತ್ನಿಸಿದಾಗ, ಡಿಕೆಶಿ ಹೋಗಿ, ಎಲ್ಲ ಸಚಿವ, ಶಾಸಕರನ್ನು ರೆಸಾರ್ಟ್‌ನಲ್ಲಿರಿಸಿ, ಆಪರೇಷನ್ ಕಮಲವಾಗುವುದನ್ನು ತಪ್ಪಿಸಿದ್ದರು. ಅದೇ ರೀತಿ ಹಿಮಾಚಲ ಪ್ರದೇಶದ ಈ ಸಮಸ್ಯೆಗೂ ಡಿಕೆಶಿನೇ ಪರಿಹಾರವೆಂದು ಅರಿತಿರುವ ಕಾಂಗ್ರೆಸ್, ಡಿಕೆಶಿಯನ್ನೇ ಹಿಮಾಚಲ ಪ್ರದೇಶಕ್ಕೆ ಕಳುಹಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆಶಿ, ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದಂತೆ ನಾನು ಹಿಮಾಚಲ ಪ್ರದೇಶಕ್ಕೆ ತಲುಪುತ್ತಿದ್ದೇನೆ. ಕಾಂಗ್ರೆಸ್ ಪಕ್ಷದ ಶಾಸಕರು ಪಕ್ಷಕ್ಕೆ ನಿಷ್ಠರಾಗಿರುತ್ತಾರೆ ಮತ್ತು ಅವರಿಗೆ ನೀಡಿರುವ ಜನಾದೇಶವನ್ನು ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿರುವ ಕಾರಣ, ಯಾವುದೇ ಮಾತುಗಳಲ್ಲಿ ಮುಳುಗುವ ಅಗತ್ಯವಿಲ್ಲ ಎಂದಿದ್ದಾರೆ.
ಅಲ್ಲದೇ, ಬಿಜೆಪಿಯು ಅಧಿಕಾರವನ್ನು ಪಡೆಯುವ ವಿಷಯದಲ್ಲಿ ಯಾವ ಅತಿರೇಕಕ್ಕೆ ಹೋಗುತ್ತಿದೆ, ಉದ್ದೇಶಪೂರ್ವಕವಾಗಿ ಈ ಪ್ರಕ್ರಿಯೆಯಲ್ಲಿ ಪ್ರಜಾಪ್ರಭುತ್ವ ಮತ್ತು ಜನಾದೇಶವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂಬುದು ಖಂಡಿಸುವ ಮತ್ತು ಪ್ರಶ್ನಿಸುವ ಸಂಗತಿಯಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.