ಸಿದ್ಧಾರೂಢರ ಮಠದಲ್ಲಿ ಗಲಾಟೆ: ಟ್ರಸ್ಟ್ ಹಾಗೂ ಭಕ್ತರ ನಡುವೆ ತೀವ್ರ ವಾಗ್ವಾದ..!

Hubli News: ಹುಬ್ಬಳ್ಳಿ: ಶಿವರಾತ್ರಿ ಉತ್ಸವ ಆಚರಣೆ ಹಾಗೂ ಲೆಕ್ಕಪತ್ರ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಸಿದ್ಧಾರೂಢರ ಮಠದ ಟ್ರಸ್ಟ್ ಹಾಗೂ ಭಕ್ತರ ನಡುವೆ ತೀವ್ರ ವಾಗ್ವಾದ ನಡೆದಿದೆ.

ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢ ಸ್ವಾಮಿಗಳ ಮಠದಲ್ಲಿ ಗದ್ದಲ ನಡೆದಿದ್ದು, ಮಠದ ಟ್ರಸ್ಟ್ ಕಮಿಟಿ ಮತ್ತು ಭಕ್ತರ ನಡುವೆ ತೀವ್ರ ವಾಗ್ವಾದ ಏರ್ಪಟ್ಟಿತು. ಶಿವರಾತ್ರಿ ಉತ್ಸವ ಆಚರಣೆ, ಲೆಕ್ಕಪತ್ರ ಮಂಡನೆ ವಿಚಾರಕ್ಕೆ ಕರೆದಿದ್ದ ಸಭೆಯಲ್ಲಿ ಮಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಖರ್ಚುವೆಚ್ಚದ ಕುರಿತು ಮಾಹಿತಿ ಕೇಳಿದ ಭಕ್ತರು, ಕಳಪೆ ಕಾಮಗಾರಿ, ಹಣ ದುರ್ಬಳಕೆ, ಅನವಶ್ಯಕ ಖರ್ಚಿನ ಕುರಿತು ಭಕ್ತರು ಆಕ್ಷೇಪ ವ್ಯಕ್ತಪಡಿಸಿದರು.

ಇನ್ನೂ ಟ್ರಸ್ಟ್ ಕಮಿಟಿ ಅಧ್ಯಕ್ಷರು ಮತ್ತು ಧರ್ಮದರ್ಶಿಗಳ ನಡೆಗೆ ಭಕ್ತರು ಆಕ್ರೋಶ ತೋರಿದ್ದು, ಸಭೆಯಲ್ಲಿ ಪರಸ್ಪರ ವಾಗ್ವಾದ, ಗದ್ದಲ ನಡೆಯಿತು. ಭಕ್ತರ ಒತ್ತಡ ಹೆಚ್ಚುತ್ತಿದ್ದಂತೆ ಸಭೆ ರದ್ದು ಪಡಿಸಿದ್ದು, ಎರಡು ದಿನದಲ್ಲಿ ಸಭೆ ನಡೆಸಿ ಭಕ್ತರ ಪ್ರಶ್ನೆಗೆ ಉತ್ತರ ಕೊಡಬೇಕು. ಕೊಡದಿದ್ದರೆ ಮಠದ ಎದುರು ಸತ್ಯಾಗ್ರಹ ಮಾಡುವುದಾಗಿ ಭಕ್ತರ ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಸರ್ಕಾರ ಬಂದಾಗೊಮ್ಮೆ ಬೆಂಕಿ ಹಚ್ಚುವ ಕೆಲಸ ನಡೆದಿದೆ-ಶಾಸಕ ಟೆಂಗಿನಕಾಯಿ ಕಿಡಿ

2ನೇಯ ಬಾರಿಗೆ ಪಾಕ್ ಪ್ರಧಾನಿಯಾಗಿ ಆಯ್ಕೆಯಾದ ಶೆಹಬಾಜ್ ಷರೀಫ್

ಜಮ್ಮು-ಕಾಶ್ಮೀರದಲ್ಲಿ ಧಾರಾಕಾರ ಮಳೆ: ಮನೆ ಕುಸಿದು ನಾಲ್ವರ ಸಾವು

About The Author