Movie News: ನಟಿ ರಶ್ಮಿಕಾ ಮಂದಣ್ಣರ ಎರಡ್ಮೂರು ಡೀಪ್ ಫೇಕ್ ವೀಡಿಯೋ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಟಿ, ಸೈಬರ್ ಕ್ರೈಮ್‌ಗೆ ದೂರು ನೀಡಿದ್ದರು. ಆರೋಪಿ ಕೂಡ ಅರೆಸ್ಟ್ ಆಗಿದ್ದಳು.
ಆದರೆ ಇದೀಗ ಇನ್ನೊಂದು ದೀಪ್ ಫೇಕ್ ವೀಡಿಯೋ ವೈರಲ್ ಆಗಿದ್ದು, ಯುವತಿಯೊಬ್ಬಳು ಚಿನ್ನದ ಬಣ್ಣದ ಬಟ್ಟೆ ಧರಿಸಿ, ದೇಹವನ್ನು ಎಕ್ಸ್‌ಪೋಸ್ ಮಾಡಿದ್ದಾಳೆ. ಇದಕ್ಕೆ ರಶ್ಮಿಕಾ ಮುಖವನ್ನು ಡೀಪ್ ಫೇಕ್ ಆ್ಯಪ್ ಮೂಲಕ, ಅಳವಡಿಸಲಾಗಿದೆ. ಮೊದಲ ಡೀಪ್‌ಫೇಕ್ ವೀಡಿಯೋ ವೈರಲ್ ಆದಾಗ, ಆತಂಕ ವ್ಯಕ್ತಪಡಿಸಿದ್ದ ರಶ್ಮಿಕಾ ಮಂದಣ್ಣ, ನಾನು ಓರ್ವ ನಟಿಯಾಗಿದ್ದಕ್ಕೆ, ನನ್ನ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಆದರೆ ನಾನು ನಟಿಯಾಗದೇ ಇದ್ದಿದ್ದರೆ, ಸಾಮಾನ್ಯ ಹೆಣ್ಣಾಗಿದ್ದು, ಶಾಲೆ ಕಾಲೇಜಿಗೆ ಹೋಗುವಾಗ ಹೀಗಾಗಿದ್ದರೆ, ನನ್ನ ಗತಿ ಏನಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದರು.
ಈ ಮೊದಲು ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವೀಡಿಯೋ ವೈರಲ್ ಆದಾಗ, ಹಲವು ಸೆಲೆಬ್ರಿಟಿಗಳು ರಶ್ಮಿಕಾ ಪರ ಮಾತನಾಡಿದ್ದರು. ಸಿಎಂ ಸಿದ್ದರಾಮಯ್ಯ ಈ ವರ್ಷದ ಬಜೆಟ್ ಮಂಡಿಸುವಾಗಲೂ, ಡೀಪ್ ಫೇಕ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳುವ ಮೂಲಕ, ರಶ್ಮಿಕಾ ಪರ ಬ್ಯಾಟ್ ಬೀಸಿದ್ದರು. ಇದೀಗ, ಮತ್ತೊಮ್ಮೆ ಈ ರೀತಿ ವೀಡಿಯೋ ಹರಿಬಿಡಲಾಗಿದ್ದು, ರಶ್ಮಿಕಾ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.
ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್

