Movie News: ತೆಲುಗು ನಿರ್ದೇಶಕ ಸೂರ್ಯ ಕಿರಣ್(48) ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಸೂರ್ಯ ಕಿರಣ್ ಆರೋಗ್ಯ ಸರಿಯಾಗಿರಲಿಲ್ಲ. ಅವರು ಚೈನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಇವರ ಮೊದಲ ಹೆಸರು ಸುರೇಶ್ ಆಗಿತ್ತು. ಮಾಸ್ಟರ್ ಸುರೇಶ್ ಎಂಬ ಹೆಸರಿನಲ್ಲಿ ಇವರು ಬಾಲ್ಯದಲ್ಲಿ ಹಲವು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ಬಳಿಕ ನಿರ್ದೇಶನಕ್ಕೆ ಇಳಿದಾಗ, ಸೂರ್ಯ ಕಿರಣ್ ಎಂದು ಹೆಸರು ಬದಲಿಸಿಕೊಂಡರು. ಸತ್ಯಂ ಸಿನಿಮಾದ ಮೂಲಕ ನಿರ್ದೇಶನಕ್ಕೆ ಇಳಿದಿದ್ದ ಸೂರ್ಯ ಕಿರಣ್, ರಾಜುಭಾಯ್, ಧನ 51 ಸಿನಿಮಾ ಕೂಡ ನಿರ್ದೇಶಿಸಿದ್ದರು. ಬಿಗ್‌ಬಾಸ್ ತೆಲುಗುನಲ್ಲೂ ಕೂಡ ಸೂರ್ಯ ನಾರಾಯಣ್ ಭಾಗವಹಿಸಿದ್ದರು.
ನಟಿ ಕಲ್ಯಾಣಿ ಅವರನ್‌ನು ಸೂರ್ಯ ಕಿರಣ್ ಪ್ರೀತಿ ಮದುವೆಯಾಗಿದ್ದರು. ಆದರೆ ಮನಸ್ತಾಪದಿಂದ ಸಂಸಾರ ಸರಿಯಾಗದೇ, ಡಿವೋರ್ಸ್ ಪಡೆದಿದ್ದರು. ಸೂರ್ಯ ಕಿರಣ್ ಸಾವಿಗೆ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದೆ.
ಮಾವನ ಮೇಲೆ ಸ್ಟಿಕ್‌ನಿಂದ ಹಲ್ಲೆ ಮಾಡಿದ ಸೊಸೆ: ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ, ಈ ದೇಶದಲ್ಲಿ ರಕ್ತಪಾತವಾಗುತ್ತದೆ: ಸಿಎಂ ಸಿದ್ದರಾಮಯ್ಯ