ಕರ್ನಾಟಕ ಟಿವಿ ಮಂಡ್ಯ : ಮೈಷುಗರ್ ಕಾರ್ಖಾನೆ ಪುನರಾರಮಭ ವಿಚಾರವಾಗಿ ರಾಜವಂಶಸ್ಥ ಯದುವೀರ್ ಎಂಟ್ರಿಯಾಗಿದ್ದಾರೆ. ಫೇಸ್‌ಬುಕ್ನಲ್ಲಿ ಕಾರ್ಖಾನೆ ಸಂಬಂಧ ಪೋಸ್ಟ್ ಮಾಡಿದ್ದಾರೆ. ಕಾರ್ಖಾನೆಯ ಸಮಯೋಚಿತ ಆರಂಭದ ಅಗತ್ಯವಿದೆ. ಕಾರ್ಖಾನೆಯ ಖಾಸಗೀಕರಣಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಆದರೆ ಈ ಪ್ರತಿರೋಧ ಕಳವಳಕ್ಕೆ ಕಾರಣವಾಗಿದೆ. ರೈತರು ಬೆಳೆದ ಕಬ್ಬನ್ನ ಮಾರಾಟ ಮಾಡಲು ಕಾರ್ಖಾನೆಯ ಅಗತ್ಯವಿದೆ. ಕಾರ್ಖಾನೆ ನಡೆಸಲು ಸರ್ಕಾರದ ವೈಫಲ್ಯ ಹಾಗೂ ಸಂಪೂರ್ಣ ಖಾಸಗೀಕರಣ ವಿರುದ್ದ ಸಾರ್ವಜನಿಕರ ಭಾವನೆ ಒಂದು ಆಯ್ಕೆ. ಆದರೆ ಕಾರ್ಯಚರಣೆ ಹಾಗೂ ನಿರ್ವಹಣೆ ಅಡಿಯಲ್ಲಿ ಕಾರ್ಖಾನೆ ನಡೆಸಬೇಕಿದೆ. ಖಾಸಗೀಕರಣ ವಿರುದ್ದ ಸಾರ್ವಜನಿಕರ ಭಾವನೆಯನ್ನ ತೃಪ್ತಿಪಡಿಸಬೇಕಿದೆ. ಆ ಮೂಲಕ ಕಾರ್ಖಾನೆ ಸಮೃದ್ದಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ ಎಂದು ಯದುವೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಷುಗರ್ ಕಾರ್ಖಾನೆ ಮೈಸೂರಿನ ಮಹಾರಾಜರು ಸ್ಥಾಪಿಸಿದ ಸಕ್ಕರೆ ಕಾರ್ಖಾನೆಯಾಗಿದ್ದು ಕೆಲವರು ಓ ಅಂಡ್ ಎಂ ಹಾಗೂ ಖಾಸಗೀಕರಣ ವಿರೋಧಿಸಿ ಸರ್ಕಾರವೇ ನಡೆಸಲು ಒತ್ತಾಯ ಮಾಡ್ತಿದ್ದಾರೆ. ಈ ವೆಳೆ ಯದುವೀರ್ ಅವರ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ. ಮಂಡ್ಯ ಜಿಲ್ಲೆಯ ಬಹುತೇಕ ರೈತರು ಯಾರಾಧ್ರೂ ಸರಿ ಮೊದಲು ಕಾರ್ಖಾನೆ ಶುರು ಮಾಡಿ ನಮ್ಮ ಕಬ್ಬನ್ನಅರೆದು ಸರಿಯಾದ ಟೈಂ ಗೆ ಸರಿಯಾದ ಬೆಲೆ ಕೊಡಲಿ ಅಂತ ಒತ್ತಾಯ ಮಾಡ್ತಿದ್ದಾರೆ.
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ, ಮಂಡ್ಯ