ಬಿಜೆಪಿ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದ ಶೆಟ್ಟರ್

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ‌ಸಿಎಂ ಜಗದೀಶ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದು, ಬಿಜೆಪಿ ಎರಡನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗದ ವಿಚಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಧಾರವಾಡ ಹಾಗೂ ಹಾವೇರಿ ಬಗ್ಗೆ ಚರ್ಚೆಗಳಾಗಿದ್ದವು. ಆದ್ರೆ ಈಗಾಗಲೇ ಟಿಕೆಟ್ ಘೋಷೇಯಾಗಿದೆ ಅದರ ಬಗ್ಗೆ ನಾನೇನೂ ಮಾತನಾಡಲ್ಲ. ಈಗ ಬೆಳಗಾವಿ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂಜೆಯೊಳಗಾಗಿ ಎಲ್ಲವೂ ತೀರ್ಮಾನವಾಗಲಿದೆ. ಹೈಕಮಾಂಡ್ ನಾಯಕರು‌ ಯಾವ ನಿರ್ಧಾರ ಮಾಡುತ್ತಾರೋ ಅದಕ್ಕೆ ನಾನು ಬದ್ಧ. ಬೆಳಗಾವಿ‌ ಕ್ಷೇತ್ರದ ಬಗ್ಗೆ ಪಕ್ಷದ ನಾಯಕರ‌ ಜೊತೆ ಚರ್ಚೆಗಳಾಗುತ್ತಿವೆ. ಸಂಜೆ ನಂತರ ಎಲ್ಲವೂ ಗೊತ್ತಾಗಲಿದೆ. ಈಗಲೇ ಯಾವುದೇ ನಿರ್ಣಯಕ್ಕೆ‌ ಬರಲು‌ ಸಾಧ್ಯವಿಲ್ಲ. ಚರ್ಚೆಯ ನಂತರ ಹೈಕಮಾಂಡ್ ನಿರ್ಧಾರದ ನಂತರ ನನ್ನ‌‌ ನಿರ್ಣಯ ಪ್ರಕಟ ಮಾಡುತ್ತೇನೆ ಎಂದು ಮತ್ತೆ ಪರೋಕ್ಷವಾಗಿ ಪಕ್ಷದ ನಾಯಕರ‌ ವಿರುದ್ಧ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಸ್ಪರ್ಧೆಗೆ ಸ್ಥಳೀಯ ನಾಯಕರಿಂದ ವಿರೋಧ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್,  ಕೆಲವೊಂದು‌ ಕಡೆ‌ ಆ ರೀತಿ‌ ಅಸಮಾಧಾನ ಇರುವುದು‌ ಸಹಜ.ಬೆಳಗಾವಿಯಲ್ಲಿ ಪರಿಸ್ಥಿತಿ ಸರಿ ಇಲ್ಲ‌ ಎನ್ನುವುದು ಸುಳ್ಳು.  ಬೆಳಗಾವಿ ಬಗ್ಗೆ ಅಲ್ಲಿಯ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದೇನಿ. ಹೈಕಮಾಂಡ್ ಜೊತೆಗೂ ಚರ್ಚೆ ನಡೆಸುತ್ತೇನೆ. ಹೈಕಮಾಂಡ್ ತೀರ್ಮಾಣಕ್ಕೆ ಅಂತಿಮವಾಗಿ ಬದ್ದವಾಗಿರುತ್ತೇನೆ. ಸ್ಥಳೀಯ ಕಾರ್ಯಕರ್ತರೊಂದಿಗಿನ ಸಂಬಂಧ ಎಂದಿಗೂ ದೂರ ಆಗುವುದಿಲ್ಲ. ನರೇಂದ್ರ ಮೋದಿಯವರನ್ನ 3ನೇ ಬಾರಿ ಪ್ರಧಾನಿ‌ ಮಾಡುವುದೇ ನಮ್ ಗುರಿ. ಟಿಕೆಟ್ ಘೋಷಣೆಯ ಬಳಿಕ ರಾಜ್ಯದ ವರಿಷ್ಠರು ಮಾತನಾಡಿದ್ದಾರೆ. ರಾಜ್ಯಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪನವರು ಮಾತನಾಡಿದ್ದಾರೆ. ಎಲ್ಲವನ್ನು ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.

ಲೋಕಸಭಾ ಟಿಕೆಟ್ ಘೋಷಣೆ ಬಳಿಕ ಶೆಟ್ಟರ ಪಶ್ಚಾತ್ತಾಪ ಪಡುತ್ತಾರೆ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, ನಾನು ಎಲ್ಲಿ ಇದ್ದರೂ ಸಂತೋಷವಾಗಿ ಇರುತ್ತೇನೆ. ಈಗ ಬಿಜೆಪಿಗೆ ಬಂದ ನಂತರವೂ ನಾನು ಸಂತೋಷವಾಗಿದ್ದೇನೆ. ದೇಶದಲ್ಲಿ ಬಿಜೆಪಿ ಪರ ಅಲೆ ಇದೆ. ವಾತಾವರಣ ತುಂಬಾ ಚೆನ್ನಾಗಿವೆ, ಮೋದಿಯವರು ಮತ್ತೊಮ್ಮೆ ಪ್ರಧಾನಿ‌ ಆಗುತ್ತಾರೆ. ಬೆಳಗಾವಿ ಬಗ್ಗೆ ವರಿಷ್ಠರು ನಮ್ಮೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಮುಂಜಾನೆಯಿಂದ ವರಿಷ್ಠರು ನಮ್ಮೊಂದಿಗೆ ಪೋನ್ ಸಂಪರ್ಕದಲ್ಲಿ‌ ಇದ್ದಾರೆ. ಇಂದು ಬೆಂಗಳೂರಿಗೆ ಹೋಗುವ ಸಾಧ್ಯತೆ ಇದೆ, ನೋಡೋಣ ಎಂದಿದ್ದಾರೆ.

ಶೆಟ್ಟರ್ ಕುಟುಂಬವನ್ನ ರಾಜಕೀಯವಾಗಿ ಮುಗಿಸಲಾಗುತ್ತಿದೆ ಎಂಬ ವಿಚಾರಕ್ಕೆ‌ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು,  ಈಗ ಅದರ ಬಗ್ಗೆ ಏನೂ ಮಾತನಾಡುವುದಿಲ್ಲ. ಯಾವ ವೇದಿಕೆಯಲ್ಲಿ ಯಾರ ಮುಂದೆ ಹೇಳಬೇಕೋ‌ ಆ‌ ಸಂದರ್ಭ ತಿಳಿಸುತ್ತೇನೆ ಎಂದಿದ್ದಾರೆ.

3 ಲಕ್ಷ ಲೀಡ್ ನಿಂದ ಗೆಲ್ತಿನಿ: ಶೆಟ್ಟರ್ ಟಿಕೆಟ್ ತಪ್ಪಿಸುವ ತಂತ್ರ ಮಾಡಿಲ್ಲ ಎಂದ ಕೇಂದ್ರ ಸಚಿವ ಜೋಶಿ..!

ಪ್ರತಾಪ್‌ ಸಿಂಹಗೆ ಟಿಕೆಟ್ ಮಿಸ್: ಹಿಂದೂ ಹುಲಿ ಪ್ರಮೋದ್ ಮುತಾಲಿಕ್ ಆಕ್ರೋಶ.

ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ. ದೇಶಕ್ಕಾಗಿ, ಮೋದಿಗಾಗಿ: ಸಂಸದ ಪ್ರತಾಪ್ ಸಿಂಹ

About The Author