ಆಡಳಿತ ಚುಕ್ಕಾಣಿ ಹಿಡಿದು 50 ದಿನಗಳಾದರೂ ರಾಜ್ಯದ ಪರಿಸ್ಥಿತಿ ಮಾತ್ರ ತೀರಾ ಶೋಚನೀಯ: ನಿಖಿಲ್ ಕುಮಾರ್

Political News: ಸಿಎಂ ಡಿ.ಕೆ.ಶಿವಕುಮಾರ್ ಇಂದಿಗೆ ಆಡಳಿತ ಶುರು ಮಾಡಿದೆ 50 ದಿನ ಪೂರ್ಣವಾಗಿದೆ. ಈ ಬಗ್ಗೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಎಕ್ಸ್ ಖಾತೆಯಲ್ಲಿ ಬರೆದಿದ್ದು, 50 ದಿನವಾದರೂ ಯಾವ ಅಭಿವೃದ್ಧಿಯೂ ಆಗಿಲ್ಲವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ಅವರಿಗೆ 50 ದಿನಗಳ ಆಡಳಿತ ಪೂರೈಸಿದ್ದಕ್ಕೆ ಅಭಿನಂದನೆಗಳು! ಆಡಳಿತ ಚುಕ್ಕಾಣಿ ಹಿಡಿದು 50 ದಿನಗಳಾದರೂ ರಾಜ್ಯದ ಪರಿಸ್ಥಿತಿ ಮಾತ್ರ ತೀರಾ ಶೋಚನೀಯವಾಗಿದೆ: 178 ತಾಲ್ಲೂಕುಗಳಲ್ಲಿ ಮಳೆ ಅಭಾವ ತಲೆದೋರಿ ರೈತರು ಕಂಗಾಲಾಗಿದ್ದರೂ, ನೆರವಿಗೆ ಬರಲು ಪೂರ್ಣಾವಧಿ ಕೃಷಿ ಅಥವಾ ತೋಟಗಾರಿಕೆ ಸಚಿವರಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಇಲಾಖೆಗೆ ಪೂರ್ಣಾವಧಿ ಸಚಿವರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣದಂತಹ ಪ್ರಮುಖ ಇಲಾಖೆಗಳಿಗೂ ಜವಾಬ್ದಾರಿಯುತ ಪೂರ್ಣಾವಧಿ ನಾಯಕತ್ವವಿಲ್ಲ. ಕೇಂದ್ರ ಸರ್ಕಾರದ ವಿರುದ್ಧ ರಾಜಕೀಯ ಮಾಡಲು ಸಮಯ ಇರುವ ಮುಖ್ಯಮಂತ್ರಿಗಳಿಗೆ, ತಮ್ಮದೇ ಸರ್ಕಾರದ ಗೊಂದಲಗಳು ಕಾಣಿಸುತ್ತಿಲ್ಲವೇ? ಕರ್ನಾಟಕದ ಕಡೆ ನಿಮ್ಮ ಗಮನ ಯಾವಾಗ? ಎಂದು ನಿಖಿಲ್ ಕುಮಾರ್ ಸಿಎಂರನ್ನು ಪ್ರಶ್ನಿಸಿದ್ದಾರೆ.

About The Author