International News: ಕೆನಡಾದಲ್ಲಿ ಬೆಂಕಿ ತಗುಲಿ ಭಾರತೀಯರಾದ ಪತಿ ಪತ್ನಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಕೆನಡಾದ ಓಂಟಾರಿಯೋ ಎಂಬಲ್ಲಿ, ಈ ಘಟನೆ ನಡೆದಿದ್ದು, ಮಾರ್ಚ್ 7ರಂದು ಸಾವನ್ನಪ್ಪಿದ್ದಾರೆ.
ಇನ್ನು ಸ್ಥಳೀಯ ಪೊಲೀಸರ ತನಿಖೆಯ ಪ್ರಕಾರ, ಇದು ಆತಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಲ್ಲದೇ, ಯಾರೋ, ಬೆಂಕಿ ಹಚ್ಚಿರುವ ಕಾರಣದಿಂದ ನಡೆದಿರುವ ದುರಂತ ಎನ್ನಲಾಗಿದೆ. ರಾಜೀವ್ ವಾರಿಕೂ(51), ಶಿಲ್ಪಾ ಕೋಥಾ(47), ಮಾಹೆಕ್ ವಾರಿಕೋ(16) ಸಾವಿಗೀಡಾಗಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೊದಲು ಇದು ಸಹಜ ಸಾವು, ಬೆಂಕಿ ತಗುಲಿ ಸಾವನ್ನಪ್ಪಿದ್ದಾರೆಂದು ವರದಿಯಾಗಿತ್ತು. ಆದರೆ ಹೆಚ್ಚಿನ ತನಿಖೆ ನಡೆಸಿದ ಬಳಿಕ, ಇದು ಆಕಸ್ಮಿಕವಾಗಿ ಬೆಂಕಿ ತಗುಲಿ ಸಾವನ್ನಪ್ಪಿದ್ದಲ್ಲ. ಬದಲಾಗಿ, ಇವರನ್ನು ಯಾರೋ ಬೆಂಕಿ ಇಟ್ಟು ಕೊಂದಿದ್ದಾರೆನ್ನಲಾಗಿದೆ.
ಆದರೆ ನೆರೆಮನೆಯವರು ಹೇಳುವ ಪ್ರಕಾರ, ನಾವೆಲ್ಲ ಮನೆಯಲ್ಲೇ ಇದ್ದೆವು. ನಮಗೆ ದೊಡ್ಡ ಶಬ್ದವೊಂದು ಕೇಳಿ ಬಂತು. ಹಾಗಾಗಿ ನಾವು ಹೊರಬಂದು ಕಂಡಾಗ, ಮನೆಗೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ನಂದಿಸಲು ನಾವು ಪ್ರಯತ್ನಿಸಿದೆವು. ಆದರೆ ಅದು ಸಾಧ್ಯವಾಗಲಿಲ್ಲ. ಅಗ್ನಿ ಶಾಮಕ ದಳದವರು ಬರುವಷ್ಟರಲ್ಲಿ, ಮೂವರ ಸ್ಥಿತಿ ಗಂಭೀರವಾಗಿತ್ತು ಎಂದಿದ್ದಾರೆ. ಇನ್ನು ಸ್ಥಳೀಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ನಮ್ಮ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..?: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಣೆಗೆ ಗಾಯ: ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ




