ಲೋಕಸಮರಕ್ಕೆ ಡೇಟ್ ಫಿಕ್ಸ್: ಏಪ್ರಿಲ್ 26, ಮೇ 7ಕ್ಕೆ ಕರ್ನಾಟಕದಲ್ಲಿ ಚುನಾವಣೆ

Political News: ದೆಹಲಿಯಲ್ಲಿ  ಭಾರತ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿದ್ದು, ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆ ಮಾಡಿದ್ದಾರೆ. ಎಷ್ಟು ಕೋಟಿ ಮತದಾರರಿದ್ದಾರೆ. ಅದರಲ್ಲಿ ಪುರುಷ ಮತದಾರರೆಷ್ಟು..? ಮಹಿಳಾ ಮತದಾರರೆಷ್ಟು..? ತೃತೀಯ ಲಿಂಗಿ ಮತದಾರರೆಷ್ಟು ಎಂಬಿತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ.

ತೃತಿಯ ಲಿಂಗಿ ಮತದಾರರ ಸಂಖ್ಯೆ 48 ಸಾವಿರ ಇದೆ. ಶತಾಯುಷಿ ಮತದಾರರ ಸಂಖ್ಯೆ 2.18 ಲಕ್ಷ. ವಿಶೇಷ ಚೇತನ ಮತದಾರರ ಸಂಖ್ಯೆ 88.4 ಲಕ್ಷ. ಇನ್ನು 1.8 ಕೋಟಿ ಮತದಾರರು ಮೊದಲ ಬಾರಿ ಮತದಾನ ಮಾಡುವವರಾಗಿದ್ದಾರೆ. ವಯೋವೃದ್ಧ ಮತದಾರರು 82 ಲಕ್ಷ. ಯುವ ಮತದಾಾರರು 19.74 ಕೋಟಿ. 49.72 ಕೋಟಿ ಪುರುಷ ಮತದಾರರಿದ್‌ದಾರೆ. 47.15 ಕೋಟಿ ಮಹಿಳಾ ಮತದಾರರಿದ್ದಾರೆ. ಇವರೆಲ್ಲರೂ ಸೇರಿ ಒಟ್ಟು 97 ಕೋಟಿಗೂ ಹೆಚ್ಚು ಮತದಾರರಿದ್ದಾರೆ.

ಚುನಾವಣೆಯ ಮೊದಲ ಹಂತ: ಏಪ್ರಿಲ್‌ 19ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. ಜೂನ್ 4ರಂದು ಇಡೀ ದೇಶದ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ. ಮಾರ್ಚ್ 27ಕ್ಕೆ

ಚುನಾವಣೆಯ ಎರಡನೇಯ ಹಂತ: ಏಪ್ರಿಲ್ 26ಕ್ಕೆ ಎರಡನೇಯ ಹಂತದ ಚುನಾವಣೆ ನಡೆಯಲಿದೆ. ಈ ವೇಳೆ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಚುನಾವಣೆಯ ಮೂರನೇಯ ಹಂತ: ಮೇ 7ಕ್ಕೆ ಮೂರನೇಯ ಹಂತದ ಚುನಾವಣೆ ನಡೆಯಲಿದೆ. ಈ ವೇಳೆ ಕರ್ನಾಟಕದ ಉಳಿದ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.

4ನೇ ಹಂತದ ಮತದಾನ ಮೇ 13ಕ್ಕೆ ನಡೆಯಲಿದೆ.
5ನೇ ಹಂತದ ಮತದಾನ ಮೇ 20ಕ್ಕೆ ನಡೆಯಲಿದೆ.
6ನೇ ಹಂತದ ಮತದಾನ ಮೇ 25ಕ್ಕೆ ನಡೆಯಲಿದೆ.
7ನೇ ಹಂತದ ಮತದಾನ ಜೂನ್​ 1ಕ್ಕೆ ನಡೆಯಲಿದೆ.

ಈ ಎಲ್ಲ ಮತದಾನಗಳ ಮತ ಎಣಿಕೆ ಕಾರ್ಯ ಜೂನ್ 4ರಂದು ನಡೆಯಲಿದೆ.

ಈಶ್ವರಪ್ಪ ಅವರು ಪಕ್ಷದ ಹಿತ ಬಿಟ್ಟು ಬೇರೆ ಯೋಚನೆ ಮಾಡಿದವರೇ ಅಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಬೆಳಗಾವಿಯಲ್ಲಿ ವಿರೋಧದ ಅಲೆಯಿಲ್ಲ. ಕೋರೆಯವರು ನಮ್ಮ ಪರವಾಗಿದ್ದಾರೆ: ಮಾಜಿ ಸಿಎಂ ಶೆಟ್ಟರ್..!

ಚುನಾವಣಾ ಬಾಂಡ್ ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ?: ಸಿಎಂ

About The Author