Saturday, June 21, 2025

Latest Posts

ಚುನಾವಣೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿ

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಜಿಲ್ಲಾಧಿಕಾರಿ ದಿವ್ಯಾ ಪ್ರಭು ಸುದ್ದಿಗೋಷ್ಟಿ ನಡೆಸಿದ್ದು, ಚುನಾವಣಾ ದಿನಾಂಕ ನಿಗದಿಯಾದ ಬಗ್ಗೆ ಮಾತನಾಡಿದ್ದಾರೆ.

ರಾಜ್ಯದಲ್ಲಿ 2 ಫೇಸ್ ನಲ್ಲಿ ಚುನಾವಣೆ ನಡೆಯುತ್ತಿದೆ. ಫೇಸ್ 3 ರಲ್ಲಿ ಧಾರವಾಡದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಮಾಡಬಹುದು.  ಏಪ್ರಿಲ್ 19 ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಎಪ್ರಿಲ್ 20 ರಂದು ನಾಮಪತ್ರ ಪರಿಶೀಲನೆ ಮಾಡಲಾಗುವುದು. ಏಪ್ರಿಲ್ 22 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಮೇ 7ಕ್ಕೆ ಮತದಾನವಿರುತ್ತದೆ. ಜೂನ್ 4ಕ್ಕೆ ಮತ ಎಣಿಕೆಯಾಗಲಿದೆ ಎಂದು ಹೇಳಿದ್ದಾರೆ.

ಧಾರವಾಡ 8 ವಿಧಾನಸಭೆ ಕ್ಷೇತ್ರಗಳ ಒಳಗೊಂಡಿದೆ.ನಮ್ಮ ಜಿಲ್ಲೆಯಲ್ಲಿ ಒಟ್ಟು 1893 ಮತಗಟ್ಟೆಗೆ ವ್ಯವಸ್ಥೆ ಮಾಡಲಿದ್ದೇವೆ.

ಜಿಲ್ಲೆಯಲ್ಲಿ ಒಟ್ಟು ಮತದಾರರು 17,91,386
ಪುರುಷರು : 899246
ಮಹಿಳೆಯರು : 892043
ತೃತೀಯ ಲಿಂಗ : 97

1660 ಮತಗಟ್ಟೆಗಳನ್ನ‌ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ 31,412 ಯುವ ಮತದಾರರಿದ್ದಾರೆ ಸೇರ್ಪಡೆಯಾಗಿದ್ದಾರೆ. ವಿಕಲಚೇತನರು 20474 ಮತದಾರರು. 85 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 15833. ಸರ್ವಿಸ್ ಮತದಾರರು 1899. ಎನ್ ಆರ್ ಮತದಾರರು 85 ಎಂದು ಹೇಳಿದ್ದಾರೆ.

ಮತದಾರರು 2014 ಲೋಕಸಭೆಯಲ್ಲಿ ಶೇಕಡಾ 60.99 ರಷ್ಟು ಮತದಾನ ಆಗಿತ್ತು. 2019 ರಲ್ಲಿ ಶೇ 70.29 ಮತದಾನ ಆಗಿತ್ತು.  ಕಳೆದ ವಿಧಾನಸಭೆ ಚುನಾವಣೆ ವೇಳೆ (2023) ಶೇ.73.45 ಮತದಾನ ಆಗಿದೆ. 7 ವಿಧಾನಸಭೆ ಕ್ಷೆತ್ರಗಳಲ್ಲಿ 24 ಚೆಕ್ ಪೋಸ್ಟ ಗಳನ್ನ ಸ್ಥಾಪನೆ ಮಾಡಲಾಗಿದೆ. ಜಿಲ್ಲೆಯ ಬಾರ್ಡರಗಳಲ್ಲಿ ನಿಗಾ ಇಡಲಾಗಿದೆ. ಪ್ರತಿಯೊಂದು ವಿಧಾನಸಭೆ ಕ್ಷೆತ್ರಕ್ಕೆ ಎರಡು ಎಪ್ ಎಸ್ ಟಿ ತಂಡ ರಚನೆ ಮಾಡಲಾಗಿದೆ. ಮೂರು ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. 1950 ಟೋಲ್ ಪ್ರೀನಂಬರ್ ಗೆ ದೂರು ದಾಖಲಿಸಬಹುದು. ಸುಮಾರು 8 ಸಾವಿರ ಸಿಬ್ಬಂದಿಗಳು, 2 ಸಾವಿರ ಪೋಲಿಸ್ ಸಿಬ್ಬಂದಿಗಳು ಸೇರಿದಂತೆ 10 ಸಾವಿರ ಸಿಬ್ಬಂದಿಗಳ ನೇಮಕ ಮಾಡಲಾಗಿದೆ ಎಂದು ದಿವ್ಯ ಪ್ರಭು ಹೇಳಿದ್ದಾರೆ.

ಗೂಗಲ್ ಪೇ, ಫೋನ್‌ ಪೇ ಮೇಲೂ ಚುನಾವಣಾ ಆಯೋಗ ಕಣ್ಗಾವಲು ಇರಿಸಲಿದೆ: ರಾಜೀವ್ ಕುಮಾರ್

ಕಾಂಗ್ರೆಸ್ ಒಳಗೊಳಗೇ ಟ್ಯಾಂಕರ್ ಮಾಫಿಯಾಗಳಿಗೆ ಬೆಂಬಲ ನೀಡಿ ದುಡ್ಡು ಹೊಡೆಯುತ್ತಿದೆ: ಪ್ರೀತಂಗೌಡ

ಗಾಯಕಿ ಅನುರಾಧಾ ಪಡ್ವಾಲ್ ಬಿಜೆಪಿಗೆ ಸೇರ್ಪಡೆ..

- Advertisement -

Latest Posts

Don't Miss