News: ಭಾರತದ ಹಲವು ಸಿಟಿಗಳಲ್ಲಿ ಫುಡ್ ಡಿಲೆವರಿಯಲ್ಲಿ ಮುಂದಿರುವ ಆ್ಯಪ್ ಅಂದ್ರೆ ಜೊಮೆಟೋ. ಅಡುಗೆ ಮಾಡಲುೂ ಸಮಯವಿಲ್ಲ. ಹೊಟೇಲ್ ಹೋಗಲೂ ಆಗುವುದಿಲ್ಲ ಅನ್ನುವವರಿಗೆ ಮೊದಲು ನೆನಪಿಗೆ ಬರೋದೇ, ಜೊಮೆಟೋ. ಇಂಥ ಜೊಮೆಟೋ ಇದೀಗ ಸಸ್ಯಾಹಾರಿಗಳಿಗಾಗಿ, ಪ್ಯೂರ್ ವೆಜ್ ಮೋಡ್, ಪ್ಯೂರ್ ವೆಜ್ ಫ್ಲೀಟ್ ಆರಂಭಿಸಿದೆ.
ಈ ಮೊದಲು ರೆಡ್ ಕಲರ್ ಬ್ಯಾಗ್ ಹೊತ್ತು ಡಿಲೆವರಿ ಮಾಡುವವರು ನಿಮ್ಮ ಮನೆಗೆ ಆಹಾರ ತಲುಪಿಸುತ್ತಿದ್ದರು. ಆದರೆ ಇದೀಗ, ವೆಜಿಟೇರಿಯನ್‌ಗಳಿಗೆ, ವೆಜ್ ಫುಡ್ ಆರ್ಡರ್ ಮಾಡುವರಿಗಾಗಿ ಹಸಿರು, ಬ್ಯಾಗ್ ವ್ಯವಸ್ಥೆ ಮಾಡಲಾಗಿದೆ. ಭಾರತದಲ್ಲಿ ಅತೀ ಹೆಚ್ಚು ಪ್ರಮಾಣದ ವೆಜಿಟೇರಿಯನ್ಸ್ ಇರುವುದೇ ಈ ಯೋಜನೆ ಜಾರಿಗೆ ತರಲು ಕಾರಣ ಎಂದುಿ ಜೊಮೆಟೋ ಓನರ್ ದೀಪೇಂದರ್ ಗೋಯಲ್ ಹೇಳಿದ್ದಾರೆ.
ಇದರಲ್ಲೇನು ವಿಶೇಷ ಅಂದ್ರೆ, ಬರೀ ವೆಜ್ ರೆಸ್ಟೋರೆಂಟ್‌ಗಳಿಗೆ ಹೋಗಿ, ಅಲ್ಲಿಂದ ಫುಡ್ ತೆಗೆದುಕೊಂಡು, ಈ ಬ್ಯಾಗ್‌ನಲ್ಲಿ ಇರಿಸಿ, ಆಹಾರ ತಲುಪಿಸಲಾಗುತ್ತದೆ. ಈ ಆಪ್ಶನ್ ಪ್ರೆಸ್ ಮಾಡಿದವರಿಗೆ, ಬರೀ ಸಸ್ಯಾಹಾರ ತಯಾರಿಸುವ ರೆಸ್ಟೋರೆಂಟ್‌ನಿಂದ ಆಹಾರ ಸರಬರಾಜು ಮಾಡಲಾಗುತ್ತದೆ. ಈ ಹಸಿರು ಬಾಕ್ಸ್‌ನಲ್ಲಿ ಮಾಂಸಾಹಾರವಿರುವ ಅಥವಾ ವೆಜ್ ನಾನ್‌ವೆಜ್ ರೆಸ್ಟೋರೆಂಟ್‌ನಲ್ಲಿ ಮಾಡುವ ಆಹಾರವನ್ನು ಹಾಕಲಾಗುವುದಿಲ್ಲ. ಬರೀ ವೆಜ್ ಆಹಾರವಷ್ಟೇ ಹಾಕಲಾಗುತ್ತದೆ.
ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..
ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?




