Belagavi News: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ.. ಶೆಟ್ಟರ್ ಬೆಳಗಾವಿ ಪ್ರವೇಶಕ್ಕೆ ಸ್ಥಳೀಯ ನಾಯಕರ ತೀವ್ರ ವಿರೋಧ.. ಟಿಕೆಟ್ ಗಾಗಿ ದೆಹಲಿಯಲ್ಲಿ ಬಿಡು ಬಿಟ್ಟಿರುವ ಶೆಟ್ಟರ್.. ಇದು ಹೈಕಮಾಂಡ್ ಕಗ್ಗಂಟಾಗಿದೆ.. ದೆಹಲಿಯಿಂದ ಶೆಟ್ಟರ್ ವಾಪಸಾಗಿದ್ದ್ರೆ, ಇತ್ತ ಬೆಳಗಾವಿ ಸ್ಥಳೀಯ ನಾಯಕರು ದೆಹಲಿಯತ್ತ ಪ್ರಯಾಣ ಮಾಡಲು ತಯಾರಿ ನಡೆಸಿದ್ದಾರೆ..
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮುಂದಿನ ರಾಜಕೀಯ ಭವಿಷ್ಯದ ಚಿತ್ರಣ ಇನ್ನೂ ಸ್ಪಷ್ಟವಾಗುವಂತೆ ಕಾಣುತ್ತಿಲ್ಲ. ಶೆಟ್ಟರ್ ನಾಯಕತ್ವವನ್ನು ಒಪ್ಪುವುದಿಲ್ಲ ಅಂತ ಬೆಳಗಾವಿ ನಾಯಕರು ನೀಡುತ್ತಿರುವ ಬಹಿರಂಗ ಹೇಳಿಕೆಗಳು.. ಶೆಟ್ಟರ್ ಟಿಕೆಟ್ ಕಗ್ಗಂಟಾಗಿದೆ.. ಬೆಳಗಾವಿಯಿಂದಲೇ ಮಾಜಿ ಶೆಟ್ಟರ್ ಸ್ಪರ್ಧೆ ಖಚಿತವಾಗುತ್ತಿದ್ದಂತೆ, ಸ್ಥಳೀಯ ನಾಯಕರ ವಿರೋಧ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ..
ರಾಜ್ಯ ಬಿಜೆಪಿ ನಾಯಕರನ್ನು ಭೇಟಿಗೆ ಬೆಳಗಾವಿ ಕ್ಷೇತ್ರದ ನಾಯಕರು ಈಗಾಗಲೇ ಸಮಯ ಪಡೆದುಕೊಂಡಿದ್ದು,ಬಿಎಸ್ ಯಡಿಯೂರಪ್ಪ, ರಾಜ್ಯ ಚುನಾವಣೆ ಉಸ್ತುವಾರಿ ರಾಧಾ ಮೋಹನದಾಸ್ ಅಗರವಾಲ್, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ಜೆ.ವಿ ರಾಜೇಶ ಭೇಟಿ ಮಾಡಿ ಬೆಳಗಾವಿಯ ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕ ಅಭಯ್ ಪಾಟೀಲ, ಅನಿಲ್ ಬೆನಕೆ ಮಹಾಂತೇಶ ಕವಟಗಿಮಠ ಸೇರಿ 8ಕ್ಕೂ ಅಧಿಕ ನಾಯಕರು ಮೊದಲಿಗೆ ರಾಜ್ಯ ನಾಯಕರ ಪ್ರತಿಕ್ರಿಯೆ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ..ಒಂದು ವೇಳೆ ವರಿಷ್ಠರಿಂದ ಸಕಾರಾತ್ಮಕ ಸ್ಪಂದನೆ ಸಿಗದಿದ್ದರೆ, ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇಲ್ಲವೇ ಬಿಎಲ್ ಸಂತೋಷ ಭೇಟಿಗೆ ತಯಾರಿ ನಡೆಸಿದ್ದಾರೆ..
ಇತ್ತ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಟಿಕೆಟ್ ಗಾಗಿ ತೀವ್ರ ಸರ್ಕಸ್ ನಡೆಸಿದ ಶೆಟ್ಟರ್ ನಿರ್ಭಾವುಕ ಮುಖದಿಂದಲೇ ಹುಬ್ಬಳ್ಳಿಗೆ ವಾಪಸಾಗಿದ್ದಾರೆ. ಈ ನಡೆ ಹಿಂದಿರುವ ರಹಸ್ಯದ ಬಗ್ಗೆ ಈಗ ಎಲ್ಲರು ತಲೆ ಕೆಡಿಸಿಕೊಂಡಿದ್ದಾರೆ. ಬೆಳಗಾವಿಗೆ ಶೆಟ್ಟರ್ ರಾಜಕೀಯ ಶಿಫ್ಟ್ ಆಗುತ್ತಾ?. ಅಥವಾ ಪಕ್ಕದ ಹಾವೇರಿಗೆ ಅಚ್ಚರಿಯ ಮರುನಾಮಕರಣವಾಗುತ್ತಾ?. ಎನ್ನುವುದೇ ಈಗ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆ…ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಬಗ್ಗೆ ಗೊತ್ತಿಲ್ಲ ಬೆಳಗಾವಿ ಟಿಕೆಟ್ ಸಿಕ್ಕೇ ಸಿಗುತ್ತೆ. ನಾಳೆ ಅಥವಾ ನಾಡಿದ್ದು ಲಿಸ್ಟ್ ಬಿಡುಗಡೆಯಾಗುತ್ತೆ.ಬಿಜೆಪಿ ವರಿಷ್ಠರನ್ನು ನಾನು ಭೇಟಿಯಾಗಿದ್ದೇನೆ. ಬೆಳಗಾವಿ ಬಿಜೆಪಿ ಸ್ಥಳೀಯ ನಾಯಕರು ಜೊತೆಯ ಸಮಾಲೋಚನೆ ಮಾಡಿದ್ದೇನೆ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದೇನೆ.ಪ್ರಧಾನಿ ನೇತೃತ್ವದಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದೆಆ ಸಭೆಯಲ್ಲಿ ಅಭ್ಯರ್ಥಿಗಳ ಲಿಸ್ಟ್ ಫೈನಲ್ ಆಗುತ್ತೆ. ಹೈಕಮಾಂಡ್ ನಾಯಕರಿಗೆ ಚರ್ಚಿಸಿದಾಗ ಸಕಾರಾತ್ಮಕ ಸ್ಪಂದನ ಸಿಕ್ಕಿದೆ. ಇವತ್ತು ಮಧ್ಯಾಹ್ನ ಪ್ರಭಾಕರ ಕೋರೆ,ಅಭಯ್ ಪಾಟೀಲ, ಕವಟಗಿಮಠ ಮೊದಲಾದವರ ಜೊತೆ ಚರ್ಚಿಸಿದ್ದೇನೆ.ಯಾರಿಗೇ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡೋಣ ಅಂತ ತೀರ್ಮಾನಿಸಿದ್ದೇವೆ ಎಂದಿದ್ದಾರೆ.ನನಗೆ ಟಿಕೆಟ್ ತಪ್ಪಿಸಲು ಹುನ್ನಾರ ನಡೆಸಿದವರ ಬಗ್ಗೆ ಮಾತಾಡಲ್ಲ ಎಂದಿದ್ದಾರೆ..
ಒಟ್ಟಿನಲ್ಲಿ ಶೆಟ್ಟರ್ ಮುಂದಿನ ನಡೆ ಬಗ್ಗೆ ಕುತೂಹಲ ಕೆರಳಿಸಿದೆ. ಸದ್ಯ ಚೆಂಡು ದೆಹಲಿ ಹೈಕಮಾಂಡ್ ಬಳಿಯಿದ್ದು ಅದು ಯಾವ ಕಡೆ ತಿರುಗಲಿದೆ ಎಂಬುದನ್ನು ತಿಳಿಯಲು ಇನ್ನು ಎರಡು ಮೂರು ದಿನ ಕಾಯಲೇ ಬೇಕಿದೆ..
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ
ಶಾಲೆಯಿಂದ ಬರುತ್ತಿದ ಬಾಲಕಿ ಮೇಲೆ ರಸ್ತೆಯಲ್ಲೇ ಲೈಂ*ಗಿಕ ಕಿರುಕುಳ: ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು




